‘ವಿಚ್ಚೇದನ ಪ್ರಕರಣಗಳಲ್ಲಿ ಮಠಾಧೀಶರ ಮಧ್ಯಸ್ಥೀಕೆ ಎಷ್ಟು ಸರಿ?’.
ಕೊಡತಗೇರಿ Express
ಲೇಖಕರು : ವಿಜಯ ಅಮೃತರಾಜ್ .
ವಕೀಲರು ಕೊಪ್ಪಳ
ಮೊದಲಿಗೆ ಒಂದು ಸ್ಪಷ್ಟವಾದ ವಿಷಯ ಏನಂದರೇ,’ಧಾರ್ಮಿಕ ಮುಖಂಡರ, ಮಠಾಧೀಶರ ಕೌಟುಂಬಿಕ ಪ್ರಕರಣಗಳಲ್ಲಿ ಮಧ್ಯಸ್ಥಿಕೆ ಒಳಗೊಳ್ಳುವಿಕೆ ಸಾಮಾನ್ಯವಾಗಿ ಸಲಹೆಯಾಗಿರುತ್ತದೆ ಅಷ್ಟೇ , ಆ ಸಲಹೆ ಅಂತಿಮ ನಿರ್ಣಯ ಅಥವಾ ತೀರ್ಪು ಅಲ್ಲ. ನ್ಯಾಯಾಲಯಗಳು ಶಾಸನಬದ್ಧ ಕಾನೂನುಗಳ ಮತ್ತು ಸಾಂವಿಧಾನಿಕ ನಿಬಂಧನೆಗಳಿಗೆ ಆದ್ಯತೆ ನೀಡಿ ಕೌಟುಂಬಿಕ ಕಾನೂನು ಚೌಕಟ್ಟಿನಲ್ಲಿ ಅಂತಿಮವಾಗಿ ನ್ಯಾಯಾಧಾನ ಮಾಡುತ್ತದೆ ‘.
ಇತ್ತಿಚಿಗೆ ಬಹಳ ಚರ್ಚಿತ ವಿಷಯ ಅಥವಾ ಚರ್ಚೆಯೆಂದರೇ, ‘ವಿಚ್ಚೇದನ ಪ್ರಕರಣಗಳಲ್ಲಿ ಮಠಾಧೀಶರ ಮಧ್ಯಸ್ಥೀಕೆ ಎಷ್ಟು ಸರಿ?’. ಈ ಪ್ರಶ್ನೆ ಚರ್ಚೆಗೆ ಕಾರಣ ಧಾರವಾಡ ಹೈಕೋರ್ಟ್ ಮೆಟ್ಟಿಲೇರಿದ್ದ ಡಿವೋರ್ಸ್ ಅರ್ಜಿ ವಿಚಾರಣೆ , ಆ ವೇಳೆ ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಅವರು ಕೊಪ್ಪಳದ ಗವಿಮಠದ ಮಠಾದೀಶರ ಬಳಿ ಹೋಗಿ ಎಂದು ಹೇಳಿ ಕಳುಹಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು , ಆಗಿನಿಂದಲೇ ವಿಚ್ಚೇದನ ಪ್ರಕರಣಗಳಲ್ಲಿ ಮಠಾಧೀಶರ ಮಧ್ಯಸ್ಥೀಕೆ ಎಷ್ಟು ಸರಿ? ಎನ್ನುವ ಪ್ರಶ್ನೆಯು ಅಷ್ಟೇ ವೈರಲ್ ಆಯಿತು.
ಹಿಂದೂ ವಿವಾಹ ಕಾಯಿದೆ, 1955, ಅಡಿಯಲ್ಲಿ ಖಡ್ಡಾಯವಾಗಿ ಕಾನೂನು ಸೇವಾ ಪ್ರಾಧಿಕಾರದ ಮಧ್ಯಸ್ಥೀಕೆಯಲ್ಲಿ ದಂಪತಿಗಳ ಮನವೋಲಿಸಲು ನೂರಿತ ತಜ್ಞ ಹಿರಿಯ ವಕೀಲರಿಂದ ಮೂರು ಸಲ ಹಂತ ಹಂತವಾಗಿ ಪ್ರಯತ್ನಿಸುತ್ತಾರೆ, ಆ ನಂತರದಲ್ಲೂ ಹೊಂದಾಣಿಕೆ ಆಗದೆ ಇದ್ದಾಗ ಸ್ವತಃ ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶರೇ ಖುದ್ದಾಗಿ ಮನವೋಲಿಸಲು ಪ್ರಮಾಣಿಕ ಪ್ರಯತ್ನ ಮಾಡುತ್ತಾರೆ, ಹಲವು ಸಲ ದಂಪತಿಗಳಿಗೆ ವೈಯಕ್ತಿಕ ಖಾಸಗಿ ವಿಷಯ ಹೇಳಲು ಮುಜಗುರ ಅನಿಸಿದರೆ ಮುಕ್ತ ನ್ಯಾಯಾಲಯದ ಬದಲಾಗಿ ‘ಇನ್-ಕ್ಯಾಮೆರಾ’ ಪ್ರಕ್ರೀಯೆಯಲ್ಲಿ ಪ್ರಕರಣದ ವಿಚಾರಣೆ ನೆಡೆಸುತ್ತಾರೆ. ಆದರೂ ಸಂಧಾನವು ವಿಫಲಗೊಂಡರೆ, ಆ ಆದೇಶದ ನಂತರ ಹೈಕೋರ್ಟಗೆ ಮೇಲ್ಮನವಿ ಸಲ್ಲಿಸಿದಾಗಲೂ ಹೈಕೋರ್ಟನಲ್ಲಿಯೂ ಪುನಃ ಮನವೋಲಿಕೆಗೆ ಪ್ರಯತ್ನಿಸುತ್ತಾರೆ ಆಗ ಮನೋವೈಧ್ಯರು, ಮಠಾಧೀರು, ಸಮಾಜದ ಮುಖಂಡರ ಮಧ್ಯಸ್ಥಿಗೆ ಹೈಕೋರ್ಟ ಕಳಿಸಿಕೊಡುತ್ತದೆ ಆದರೆ ಇದು ತುಂಬಾ ವಿರಳದಲ್ಲಿ ವಿರಳ ಪ್ರಕರಣಗಳಲ್ಲಿ ನಾವು ಕಾಣಬಹುದು ಆದರೆ ಮಠಾಧಿರ ಮಧ್ಯಸ್ಥಿಕೆ ಸಲಹೆಗಳೇ ಅಂತಿಮ ತೀರ್ಪು ಅಲ್ಲ, ಸಲಹೆ ನಂತರ ಹಿಂದೂ ವಿವಾಹ ಕಾಯಿದೆ, 1955, ಅಡಿಯಲ್ಲಿ ಕಾನೂನು ಚೌಕಟ್ಟಿನಲ್ಲಿ ಸಂವಿಧಾನ ಬದ್ಧವಾಗಿ ತೀರ್ಪು ನ್ಯಾಯಾಲಯ ನೀಡುತ್ತದೆ.
ಹೌದು ನಿಮಗೆಲ್ಲ ಈಗ ಒಂದು ಪ್ರಶ್ನೆ ಮೂಡಿರಬಹುದು,’ ಈ ನ್ಯಾಯಾಲಯಗಳಿಗೆ ವಿಚ್ಛೇದನ ಕೋರಿ ಬಂದ ದಂಪತಿಗಳನ್ನು ಒಂದುಗೂಡಿಸಲು ಇಷ್ಟ್ಯಾಕೆ ಪ್ರಯತ್ನಿಸಬೇಕು?, ಎನ್ನುವ ಪ್ರಶ್ನೆ ಮೂಡುವುದು ಸಹಜ.
ವಿವರವಾಗಿ ನೋಡುವುದಾದರೆ,ಕೌಟುಂಬಿಕ ಐಕ್ಯತೆ ಉಳಿಸುವುದು ಹಾಗು ಸಾಮಾಜಿಕ ಕಳಂಕ ತಪ್ಪಿಸುವುದು, ಸಮಾಜದಲ್ಲಿ ಸಂಬಂಧಗಳನ್ನು ಕಾಪಾಡಿಕೊಳ್ಳವುದರ ಜೊತೆಗೆ ಬಹಳ ಮುಖ್ಯವಾಗಿ ಮದುವೆಯ ಬಗ್ಗೆ ನಂಬಿಕೆ ಉಳಿಸುವುದು ಕೌಟಂಬಿಕ ನ್ಯಾಯಾಲಯದ ಪ್ರಮುಖ ಆಶಯವಾಗಿದೆ. ಹಾಗಾಗಿ ವಿಚ್ಛೇದನ ಕೋರಿ ಬಂದ ದಂಪತಿಗಳ ಮನವೊಲಿಸಿ ರಾಜಿ ಮಾಡುವುದು, ಸಂಧಾನ ಸಮನ್ವಯತೆಗೆ ಆದ್ಯತೆ ನೀಡುವುದು, ಬಹಳ ಮುಖ್ಯವಾಗಿ ಭಾರತದ ಸಂವಿಧಾನ ಆರ್ಟಿಕಲ್ 21 ಹೇಳುವಂತೆ ಕೌಟುಂಬಿಕ ಜೀವನ ಸೇರಿದಂತೆ ಜೀವನ ಮತ್ತು ಘನತೆಯ ಹಕ್ಕನ್ನ ಕಾಪಾಡುವುದು ಕೌಟುಂಬಿಕ ಕಾನೂನು ನ್ಯಾಯಾಲಯಗಳ ಬಹುದೊಡ್ಡ ಕಾನೂನು ಬದ್ಧ ಸಂವಿಧಾನಿಕ ಆಶಯ. ಈ ಮೇಲಿನ ಎಲ್ಲವಕ್ಕಿಂತಲೂ ಮುಖ್ಯವಾಗಿ ನ್ಯಾಯಾಂಗ ತತ್ವಶಾಸ್ತ್ರವೇ ಮದುವೆ ಮತ್ತು ಕುಟುಂಬಗಳ ಸಂರಕ್ಷಣೆ ಮಕ್ಕಳ ಹಿತಾಸಕ್ತಿಗಳ ರಕ್ಷಣೆ ಸಮಾಜ ಕಲ್ಯಾಣ ಮತ್ತು ಸಾರ್ವಜನಿಕ ಹಿತಾಸಕ್ತಿಯ ದೆಯೋದ್ದೇಶಗಳನ್ನು ಹೊಂದಿದೆ.
ಸರ್ಕಾರವು ಸಹ ವಿವಾಹ ವಿಚ್ಛೇದನಕ್ಕೆ ಬಂದ ದಂಪತಿಗಳನ್ನು ಒಂದುಗೂಡಿಸುವ ಪ್ರಯತ್ನವೂ ದೊಡ್ಡದಾಗಿದೆ. ಅದಕ್ಕಾಗಿಯೇ ಕರ್ನಾಟಕ ಸರ್ಕಾರ ಕೌಟುಂಬಿಕ ಸಲಹಾ ಕೇಂದ್ರ, ಕೌಟುಂಬಿಕ ವಿವಾದ ಪರಿಹಾರಕ್ಕಾಗಿ ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ (NALSA) ಯೋಜನೆಗಳು ಜಾರಿಯಲ್ಲಿವೆ. ಆತಂಕದ ವಿಷಯವೇನೆಂದರೆ ಸಣ್ಣಪುಟ್ಟ ವಿಷಯಗಳಿಗೆ ವಿಚ್ಛೇದನ ಕೋರಿ ಬರುವ ದಂಪತಿಗಳ ಸಂಖ್ಯೆ ಜಾಸ್ತಿಯಾಗಿದೆ, ಇದಕ್ಕೆ ಉದಾಹರಣೆ ಎಂದರೆ ಕೌಟುಂಬಿಕಯ ನ್ಯಾಯಾಲಯ ಕಾನೂನು ಸೇವಾ ಪ್ರಾಧಿಕಾರ ನಿರಂತರ ಸಂಧಾನ ಪ್ರಕ್ರಿಯೆಯಿಂದ 70 % ರಷ್ಟು ಪ್ರಕರಣಗಳು ರಾಜಿಯಾಗಿ ಸಂತೋಷದ ಜೀವನ ನಡೆಸುತ್ತೇವೆ. ಇನ್ನು ವಿಚಿತ್ರ ವಿಷಯವೇನೆಂದರೆ ವಿಚ್ಛೇದನದ ಅಂತಿಮ ತೀರ್ಪು ಆದ ನಂತರ , ವಿಚ್ಛೇದನ ಪಡೆದ ದಂಪತಿಗಳೇ ಪುನಃ 40% ರಷ್ಟು ಮರುವಿವಾಹ ಆದ ಉದಾಹರಣೆಗಳಿವೆ.
ಇಂತಹ ಕೌಟುಂಬಿಕ ನ್ಯಾಯಾಲಯಗಳ ಮುಂದೆ ಬರುವ ಪ್ರಕರಣಗಳಲ್ಲಿ ಮಠಾಧೀಶರನ್ನ ಮಧ್ಯಸ್ಥಿಕೆ ವಹಿಸಿದ್ದು ಇದೇ ಮೊದಲಿನಲ್ಲ ಈ ಹಿಂದೆ ಕೂಡ ಅನೇಕ ಪ್ರಕರಣಗಳಲ್ಲಿ ಎಲ್ಲಾ ಜಾತಿ ಧರ್ಮದವರ ಗುರುಗಳ ಮಠಾಧೀಶರ ಸಮಾಜದ ಮುಖಂಡರ ಮಧ್ಯಸ್ಥಿಕೆಯನ್ನ ನ್ಯಾಯಾಲಯ ಪಡೆದುಕೊಂಡು ಅವರ ಮಧ್ಯಸ್ಥಿಕೆಯ ವರದಿಯ ಆಧಾರದ ಮೇಲೆ ಸತ್ಯಾಸತೆಗಳನ್ನು ಪರಿಶೀಲಿಸಿ ನ್ಯಾಯಾಲಯ ಅಂತಿಮ ತೀರ್ಪು ನೀಡಿದೆ . ಅಂತಹ ಒಂದು ಪ್ರಕರಣ ಹೆಸರಿಸುವುದಾದರೆ, ಶಿಲ್ಪಾ ಶಿಂಧೆ ವರ್ಸಸ್ ಅಮರ್ ಶಿಂಧೆ (2019) ಗಮನಹಾರವಾಗಿದೆ, ಈ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್ ನ್ಯಾಯಾಧೀಶರುಗಳಾದ ನ್ಯಾಯಮೂರ್ತಿ ಆರ್.ಡಿ.ಧನುಕ ಮತ್ತು ನ್ಯಾಯಮೂರ್ತಿ ವಿ.ಜಿ. ಬಿಷ್ಟ್ ಅವರು ದಂಪತಿಗೆ ಸಲಹೆ ನೀಡಲು ನ್ಯಾಯಾಲಯವು ಹಿಂದೂ ಧಾರ್ಮಿಕ ಮುಖಂಡ, ಪಂಡಿತರನ್ನು ನೇಮಿಸಿತು.
ಅಂದಹಾಗೆ ನ್ಯಾಯಾಲಯಗಳು ನ್ಯಾಯಾಧೀಶರು ತಜ್ಞರು ಮಾನಸಿಕ ತಜ್ಞರು ವಕೀಲರು ಮಠಾಧೀಶರು ಸಮಾಜದ ಮುಖಂಡರು ಯಾರೇ ಎಷ್ಟೇ ಮನೊಲಿಸಲು ಪ್ರಯತ್ನ ಪಟ್ಟರು ಅಂತಿಮವಾಗಿ ಬದಲಾಗಿ ಬಾಳ ಬೇಕಾದವರು ದಂಪತಿಗಳೇ, ಒಂದನ್ನು ನೆನಪಿಟ್ಟುಕೊಳ್ಳಬೇಕು ಸಂಸಾರದಲ್ಲಿ ನಮ್ಮ ನಡೆ ಮುಂದಿನ ಪೀಳಿಗೆಗೆ ಆದರ್ಶವಾಗಬೇಕು ಇಲ್ಲವಾದರೆ ಕೌಟುಂಬಿಕ ವ್ಯವಸ್ಥೆ ಶಿಥಿಲಗೊಳ್ಳುತ್ತದೆ, ಬೇಂದ್ರೆಯವರ ಕವಿತೆಯ ಒಂದು ಸಾಲು ಹೀಗಿದೆ,’ ನಾನು ಬಡವಿ ಆತ ಬಡವ
ಒಲವೆ ನಮ್ಮ ಬದುಕು , ಬಳಸಿಕೊಂಡೆವದನೆ ನಾವು
ಅದಕು ಇದಕು ಎದಕು ‘, ಆ ಬದುಕಿನ ಬಳಕೆ ವಿಚ್ಛೇದನದ ಹಾದಿ ಹಿಡಿಯಬಾರದಷ್ಟೆ.
– ವಿಜಯ ಅಮೃತರಾಜ್ .
ವಕೀಲರು, ನಂದಿನಗರ (ಉತ್ತರ)
ಕೊಪ್ಪಳ-583231.
99458 73626.
More Stories
ಶತ ಶತಮಾನದ ಮೊಹರಂಗೆ ಕಳೆ ತುಂಬಿದ ಭಾರತ
ದಾರಿ ತಪ್ಪುತ್ತಿದಿಯಾ ರಂಗಭೂಮಿ
ಒಬ್ಬರು ಗೆದ್ದು ಸಂತೋಷಪಡುವುದು ಸಂಸ್ಕಾರವಲ್ಲ. ಹಂಚಿ ತಿನ್ನೋದಷ್ಟೇ ನಾವು ಕಲಿತಿರೋದು”.