ಸೆಕೆಂಡ್​ ಹ್ಯಾಂಡ್​​ ಮೊಬೈಲ್ ಬಗ್ಗೆ ಎಚ್ಚರ!: ಬೆಂಗಳೂರಿನಲ್ಲಿ ​6 ತಿಂಗಳಲ್ಲಿ 2,350 ಅಕೌಂಟ್​ಗೆ ಕನ್ನ..!

ಸೆಕೆಂಡ್​ ಹ್ಯಾಂಡ್​​ ಮೊಬೈಲ್ ಬಗ್ಗೆ ಎಚ್ಚರ!: ಬೆಂಗಳೂರಿನಲ್ಲಿ ​6 ತಿಂಗಳಲ್ಲಿ 2,350 ಅಕೌಂಟ್​ಗೆ ಕನ್ನ..!

ಕೊಡತಗೇರಿ ಎಕ್ಸಪ್ರೆಸ್ ಸುದ್ದಿ

ಬೆಂಗಳೂರು(ಜು.17): ನಿಮ್ಮ ಬಳಿ ಹೈಫೈ ಮೊಬೈಲ್​ ಪೋನ್​ ಇದ್ದು ಅದಕ್ಕೆ ಇಂಟರ್​ನೆಟ್​ ಕನೆಕ್ಷನ್​ ಇದ್ಯಾ? ನೀವು ನಿಮ್ಮ ಆಂಗೈಯಲ್ಲೇ ನಿಮ್ಮ ಬ್ಯಾಂಕ್​ ಆಕೌಂಟ್​ಗಳನ್ನ ನಿರ್ವಹಣೆ ಮಾಡ್ತಿದೀರಾ? ಬೀ ಕೇರ್​ ಪುಲ್. ನಿಮಗೆ ಅರಿವಿಲ್ಲದೇ ಸೈಲೆಂಟಾಗಿ ಹಣ ಎಗರಿಸುವ ಗ್ಯಾಂಗ್ ನಿಮ್ಮ ಮೊಬೈಲ್​ ಪೋನ್​ನಲ್ಲೇ ಇದೆ.

ಆದ್ರಲ್ಲೂ ಮಧ್ಯಮ ವರ್ಗದ ಜನ ಸೆಕೆಂಡ್​​ ಹ್ಯಾಂಡ್​ ಮೊಬೈಲ್​ಗಳ ಮೊರೆ ಹೋಗುತ್ತಾರೆ. ಇಂತಹ ಸೆಕೆಂಡ್​ ಹ್ಯಾಂಡ್​ ಮೊಬೈಲ್​ಗಳಲ್ಲಿ ಹ್ಯಾಕರ್ಸ್​ ವೈರಸ್​ ಮತ್ತು ಜಂಕ್​ ಆ್ಯಪ್​ಗಳನ್ನು ಅಳವಡಿಸಿ ನಿಮಗೆ ಕೊಡುತ್ತಾರೆ. ನಿಮ್ಮ ಹಣ ಎಗರಿಸಲು ಇಷ್ಟೆ ಸಾಕು. ವೈರಸ್​ ಮೂಲಕ ನಿಮ್ಮ ಮೊಬೈಲ್​ನ ಬ್ಯಾಂಕ್​ ಖಾತೆ ಮಾಹಿತಿಗೆ ಕನ್ನ ಹಾಕ್ತಾರೆ. ಬಳಿಕ ಮೊಬೈಲ್​ ನೆಟ್​ವರ್ಕ್​ ಸರಿಮಾಡ್ತೀವಿ ಎಂದು ನಿಮಗೆ ಬಂದಿರೋ ಒಟಿಪಿ ನಂಬರ್​ ನಿಮ್ಮಿಂದಲೇ ಕೇಳಿ ಪಡೆದು ನಿಮ್ಮ ಬ್ಯಾಂಕ್​ ಆಕೌಂಟ್​ ಗುಡಿಸಿ ಗುಂಡಾಂತರ ಮಾಡ್ತಾರೆ.
ಸಿಮ್​ ಕಾರ್ಡ್​ ಪಿನ್​ನಿಂದ ಹಾಕ್ತಾರೆ ಕನ್ನ..!

ಹ್ಯಾಕರ್​ಗಳಿಗೆ ಬರೀ ಮೊಬೈಲ್​ಗಳಲ್ಲಿ ಅಲ್ಲದೇ ನಿಮ್ಮ ಮೊಬೈಲ್​ನ ಸಿಮ್​ ಕಾರ್ಡ್​ನ 20 ಸಂಖ್ಯೆಯ ಪಿನ್​ ಮೂಲಕ ಕದಿಯೋದ್ರಲ್ಲೂ ಎಕ್ಸ್​ಪರ್ಟ್​. ನಿಮ್ಮ ಮೊಬೈಲ್​ಗೆ ನಿಮ್ಮ ಸಿಮ್​ ಕಾರ್ಡ್​ ನೆಟ್​ವರ್ಕ್​ ಸರಿಯಿಲ್ವಾ, ಸಿಗ್ನಲ್​ ಡ್ರಾಪ್​ ಆಗ್ತಿದಿಯಾ ಅಂತ ಎಸ್​ಎಂಎಸ್​ ಕಳಿಸಿ ನಿಮ್ಮ ಸಿಮ್​ ಮಾಹಿತಿ ಕದೀತಾರೆ. ಇಷ್ಟಕ್ಕೆ ನಿಮ್ಮ ಹಣದ ಜೇಬಿಗೆ ಕನ್ನ ಹಾಕೋಕೆ ನೀವೇ ಅನುಮತಿ ಕೊಟ್ಟಂತೆ.

ದೇಶದ ಐಟಿಬಿಟಿ ಕ್ಯಾಪಿಟಲ್​ ಆಂತ ಹೆಸರು ಗಳಿಸಿರೋ ಬೆಂಗಳೂರಿನಲ್ಲಿ ಆತ್ಯಧಿಕವಾಗಿ ಹಣ ಕಳೆದುಕೊಂಡ ಕೇಸ್​ಗಳು ದಾಖಲಾಗಿವೆ. ಸಿಲಿಕಾನ್​ ಸಿಟಿಯ ಬುದ್ಧಿವಂತರು, ವಿದ್ಯಾವಂತ ಜನರೇ ಬ್ಯಾಂಕ್​ ಹ್ಯಾಕರ್​ಗಳಿಗೆ ಪುಲ್​ ಮೀಲ್ಸ್​ ಆಗಿ ಬಿಟ್ಟಿದ್ದಾರೆ. ಬ್ಯಾಂಕ್​ ಖಾತೆ ಸರಿಪಡಿಸೋ ನೆಪದಲ್ಲಿ ಫೇಕ್​ ಕಾಲ್​ ಮಾಡೋ ಖದೀಮರಿಗೆ ಬ್ಯಾಂಕ್​ ಆಕೌಂಟ್​, ಡೆಬಿಟ್​ ಕಾರ್ಡ್​ ಮತ್ತು ಕ್ರೆಡಿಟ್​ ಕಾರ್ಡ್​ಗಳ ಮಾಹಿತಿ ಕೊಟ್ಟು ಕೈಸುಟ್ಟು ಕೊಳ್ತಿದ್ದಾರೆ. ಹೀಗೆ ಬೆಂಗಳೂರು ನಗರದಲ್ಲಿ ದಿನವೊಂದಕ್ಕೆ 7ರಿಂದ 10 ಕೇಸ್​ಗಳು ದಾಖಲಾಗುತ್ತಿವೆ.
ಆನ್​ಲೈನ್​ನಲ್ಲಿ ಈಸಿಯಾಗಿ ಮೋಸ ಮಾಡುತ್ತಾರೆ ಎನ್ನುವ ಜ್ಞಾನ ಇದ್ದರೂ, ಉದ್ಯಾನನಗರಿ ಜನ ತಮ್ಮ ಬ್ಯಾಂಕ್​ ಖಾತೆಗಳ ಮಾಹಿತಿ ಕೊಟ್ಟು ಕೆಲವೇ ಕ್ಷಣಗಳಲ್ಲಿ ಹಣ ಕಳೆದುಕೊಳ್ತಿರೋದು ವಿಪರ್ಯಾಸ.

error: Content is protected !!