ದಾರಿ ತಪ್ಪುತ್ತಿದಿಯಾ ರಂಗಭೂಮಿ

ದಾರಿ ತಪ್ಪುತ್ತಿದಿಯಾ ರಂಗಭೂಮಿ ?

ಕೊಡತಗೇರಿ Express news

ಕರ್ನಾಟಕ ಕಲೆ ಸಂಸ್ಕೃತಿ, ಜಾನಪದ, ನಾಟಕಗಳಿಂದ ಹೆಸರುವಾಸಿಯಾಗಿದ್ದು ಅದರಲ್ಲಿ ಉತ್ತರ ಕರ್ನಾಟಕದಲ್ಲಿ ಅತಿ ಹೆಚ್ಚು ಸಮಾಜಿಕ ನಾಟಕಗಳು ಪ್ರದರ್ಶನ ಗೊಳ್ಳುವದನ್ನು ನಾವು ಕಾಣುತ್ತಿದ್ದೇವೆ ಹೌದು ಈ ಹಿಂದೆ ನಾಟಕಗಳು ಎಂದರೆ ಕಂಪನಿ ನಾಟಕಗಳು ಹೆಸರು ವಾಸಿಯಾಗುತ್ತಿದ್ದವು ಅವುಗಳ ನಡುವೆ ಇತ್ತಿಚಿಗೆ ಹೆಚ್ಚು ಪ್ರದರ್ಶನಗೊಳ್ಳುವ ನಾಟಗಳು ಎಂದರೆ ಹವ್ಯಾಸಿ ರಂಗಭೂಮಿ ಕಲಾವಿದರು ಹೆಚ್ಚು‌ನಾಟಕಗಳನ್ನು ಪ್ರತಿಹಳ್ಳಿಗಳಲ್ಲಿ ವರ್ಷಕ್ಕೆ ಮೂರು ನಾಲ್ಕು ನಾಟಕಗಳನ್ನು ಒಂದು ಹಳ್ಳಿಯಲ್ಲಿ ಆಡುತ್ತಾರೆ . ಹೌದು ಇತ್ತಿಚಿನ ದಿನಮಾಗಳಲ್ಲಿ ‌ಮತ್ತು ಈ ತಂತ್ರಜ್ಞಾನ ಯುಗದಲ್ಲಿ ಮೋಬೈಲಗಳ ಹಾವಳಿಯಲ್ಲಿಯು ಕೂಡ ನಾಟಕಗಳು ಎಂದು ತಮ್ಮ ಪ್ರಭಾವನ್ನು ಕಳೆದುಕೊಂಡಿಲ್ಲಾ ಸಿನಿಮಾ ಥೇಟರಗಳೆ ನಿಂತು ಹೋಗಿವೆ ಆದರೆ ನಾಟಕಗಳಲ್ಲಿ ಇತ್ತಿಚಿಗೆ ಅಶ್ಲೀಲ ಪದಗಳ ಬಳಕೆ ಸಾಕಷ್ಟು ನೆಡೆಯುತ್ತಿದ್ದವು ಅದನ್ನು ಮುಂದುವರೆದು ನಾಟಕಗಳಲ್ಲಿ ಅಶ್ಲೀಲ ಡ್ಯಾನ್ಸ್ ಗಳು ಕೂಡ ಕಾಲಿಟ್ಟವು ಎಲ್ಲೋ ಕ್ಲಬ್ ಗಳಲ್ಲಿ ಮತ್ತು ನಾಲ್ಕು ಗೊಡೆಗಳ ಮದ್ಯ ನೆಡೆಯಬೇಕಾದ ಮೋಜು ಮಸ್ತಿ ಡ್ಯಾನ್ಸಗಳು ನಾಟಕದಲ್ಲಿ ನೆಡೆಯುವದರಿಂದ ಗೌರವ ಕುಟಂಬಸ್ಥರು ಹೆಣ್ಣು ಮಕ್ಕಳು ನಾಟಕಗಳನ್ನು ನೋಡಲು ಹಿಂದು‌ ಮುಂದು ನೋಡುತ್ತಿದ್ದಾರೆ. ಅದರಲ್ಲಿ ಮತ್ತೆ ಮುಂದು ವರೆದು ಪಾತ್ರಗಳಲ್ಲಿ ಅಭಿನಯ ಮಾಡುವ ಮತ್ತು ಉತ್ತಮ ಪಾತ್ರಮಾಡುವ ಪಾತ್ರಾಧಾರಿಗಳ ಮಹಿಳಾ ನಟಿಯವರು ಕೇಲವರು ಅತಿರೇಕದ ರೀತಿಯಾಗಿ ರಂಗಭೂಮಿಯಲ್ಲಿ ವರ್ತಿಸುವದರಿಂದ ನಿಜವಾದ ಕಲೆ ಪ್ರದರ್ಶಿಸುವ ನಟಿಯರು ಸ್ವಲ್ಪ ತಲೆ ತಗ್ಗಿಸುವಹಾಗೆ ಆಗಿದೆ ಇದರಿಂದ ತನ್ನದೆ ತನ್ನತನವನ್ನು ಇಟ್ಟುಕೊಂಡು ಪ್ರಾಚೀನಕಾಲದಿಂದಲೂ ರಂಗಭೂಮಿ ಎಂದು ಈ ರೀತಿಯಾಗಿ ದಾರಿ ತಪ್ಪಿಲ್ಲಾ ಇಂತಹ ಅಶ್ಲೀಲತೆ‌ ನಟನೆಯನ್ನು ಮಾಡುವುದರಿಂದ ರಂಗ ಭೂಮಿಯು ದಾರಿ ತಪ್ಪುತ್ತಿದೆ ಎಂಬ ಭಾಸ ಕಲಾಪ್ರೇಮಿಗಳಲ್ಲಿ ಕಾಡುತ್ತಿದೆ.

ಬಾಕ್ಸ್ news : 

ಇತ್ತಿಚಿಗೆ ಹವ್ಯಾಸಿ ನಾಟಕಗಳಲ್ಲಿ ಅಶ್ಲೀಲ ತೆ ಪಾತ್ರಗಳು ಮಾಡುವದರಿಂದ ನಮ್ಮಂತಹ ನಟಿಯರು ರಂಗಭೂಮಿಯಿಂದ ದೂರ ಸರಿಯಬೇಕು ಅನ್ನಿಸುತ್ತಿರುವದು ಸತ್ಯ. ಇಂತಹ ದೃಶಗಳು ಸಮಾಜಕ್ಕೆ ಮಾರಾಕ .

ಹೆಸರು ಹೇಳದ ನಟಿಯ ಮಾತು.

ಬಾಕ್ಸ್ news 

ನಾಟಕಗಳು ಸಮಾಜವನ್ನು ತಿದ್ದವಂತಹ ಕೆಲಸವನ್ನು ಮಾಡಬೇಕು ಅತೀರೇಕದ ಇಂತಹ ನಟನೆಗಳಿಂದ ಏನು ಪ್ರಯೋಜನ ಇಲ್ಲಾ.

– ಬಸವರಾಜ ರಂಗಭೂಮಿ ಕಲಾವಿದ.

ಲೇಖಕ : ಕೆ.ಎಸ್.ಕೊಡತಗೇರಿ 

ಬರಹಗಾರರು .

ಮೋ : 9483768882

You may have missed

ಸಿದ್ದರಾಮಯ್ಯ: ಅರಸು ದಾಖಲೆ ಸರಿಗಟ್ಟಿದ ‘ಅಹಿಂದ’ ಚಾಣಕ್ಯ – ಜನಪರ ಆಡಳಿತದ ಹೊಸ ಪರ್ವ ​ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ದೀರ್ಘಕಾಲ ಮುಖ್ಯಮಂತ್ರಿಯಾಗಿ ರಾಜ್ಯವಾಳಿದ ಕೀರ್ತಿ ಈವರೆಗೆ ದಿವಂಗತ ಡಿ. ದೇವರಾಜ ಅರಸು (7 ವರ್ಷ 239 ದಿನಗಳು) ಅವರಿಗೆ ಸಲ್ಲುತ್ತಿತ್ತು. ಆದರೆ, ಜನವರಿ 7, 2026ರಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ಐತಿಹಾಸಿಕ ದಾಖಲೆಯನ್ನು ಮುರಿದು, ಕರ್ನಾಟಕದ ಇತಿಹಾಸದಲ್ಲಿ ಅತಿ ಸುದೀರ್ಘ ಕಾಲ ಆಡಳಿತ ನಡೆಸಿದ ನಾಯಕನಾಗಿ ಹೊರಹೊಮ್ಮಿದ್ದಾರೆ. ಇದು ಕೇವಲ ಅಂಕಿ-ಅಂಶಗಳ ಸಾಧನೆಯಲ್ಲ, ಬದಲಿಗೆ ಅವರ ಅಚಲ ಸಿದ್ಧಾಂತ ಮತ್ತು ಜನಪ್ರಿಯತೆಯ ಪ್ರತೀಕವಾಗಿದೆ. ​ಅರಸು ಮತ್ತು ಸಿದ್ದರಾಮಯ್ಯ: ಸಮಾಜಮುಖಿ ಹೋಲಿಕೆ ​ದೇವರಾಜ ಅರಸು ಅವರು ಹೇಗೆ ಭೂ ಸುಧಾರಣೆ ಮತ್ತು ಹಿಂದುಳಿದ ವರ್ಗಗಳ ಸಬಲೀಕರಣದ ಮೂಲಕ ‘ಕರ್ನಾಟಕದ ಕ್ರಾಂತಿಕಾರಿ ನಾಯಕ’ ಎನಿಸಿಕೊಂಡರೋ, ಸಿದ್ದರಾಮಯ್ಯನವರು ‘ಅಹಿಂದ’ (ಅಲ್ಪಸಂಖ್ಯಾತ, ಹಿಂದುಳಿದ ಮತ್ತು ದಲಿತ) ವರ್ಗಗಳ ಧ್ವನಿಯಾಗಿ ಅದೇ ಹಾದಿಯಲ್ಲಿ ಮುನ್ನಡೆದಿದ್ದಾರೆ. ಮೈಸೂರು ಮಣ್ಣಿನ ಈ ಇಬ್ಬರು ನಾಯಕರು ಶೋಷಿತ ಸಮುದಾಯಗಳಿಗೆ ರಾಜಕೀಯ ಅಸ್ತಿತ್ವ ತಂದುಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ​ಉತ್ತಮ ಆಡಳಿತದ ಪ್ರಮುಖ ಮೈಲಿಗಲ್ಲುಗಳು ​ಸಿದ್ದರಾಮಯ್ಯನವರ ಆಡಳಿತವನ್ನು ಶ್ಲಾಘಿಸಲು ಮುಖ್ಯ ಕಾರಣ ಅವರ ‘ಜನಪರ ಯೋಜನೆಗಳು’. ಅವರ ಆಡಳಿತ ವೈಖರಿಯಲ್ಲಿ ಆರ್ಥಿಕ ಶಿಸ್ತು ಮತ್ತು ಸಾಮಾಜಿಕ ಭದ್ರತೆಯ ಸುಂದರ ಸಮನ್ವಯವಿದೆ: ​ಭಾಗ್ಯಗಳ ಸರಣಿ: ಮೊದಲ ಅವಧಿಯಲ್ಲಿ (2013-18) ಜಾರಿಗೆ ತಂದ ‘ಅನ್ನಭಾಗ್ಯ’, ‘ಕ್ಷೀರಭಾಗ್ಯ’, ‘ಇಂದಿರಾ ಕ್ಯಾಂಟೀನ್’ನಂತಹ ಯೋಜನೆಗಳು ಬಡವರ ಹಸಿವು ನೀಗಿಸುವಲ್ಲಿ ಮೈಲಿಗಲ್ಲಾದವು. ​ಪಂಚ ಗ್ಯಾರಂಟಿಗಳು: ಎರಡನೇ ಅವಧಿಯಲ್ಲಿ ಜಾರಿಗೆ ತಂದ ಐದು ಗ್ಯಾರಂಟಿಗಳು (ಗೃಹಲಕ್ಷ್ಮಿ, ಶಕ್ತಿ, ಗೃಹಜ್ಯೋತಿ, ಅನ್ನಭಾಗ್ಯ, ಯುವನಿಧಿ) ಇಂದು ರಾಜ್ಯದ ಕೋಟ್ಯಂತರ ಕುಟುಂಬಗಳಿಗೆ ಆರ್ಥಿಕ ಆಸರೆಯಾಗಿವೆ. ​ಆರ್ಥಿಕ ತಜ್ಞತೆ: ರಾಜ್ಯದ ಇತಿಹಾಸದಲ್ಲೇ ಅತಿ ಹೆಚ್ಚು ಅಂದರೆ 16 ಬಾರಿ ಬಜೆಟ್ ಮಂಡಿಸಿದ ಹೆಗ್ಗಳಿಕೆ ಇವರದು. ಆರ್ಥಿಕ ಕೊರತೆಯನ್ನು ಹತೋಟಿಯಲ್ಲಿಟ್ಟುಕೊಂಡು ಅಭಿವೃದ್ಧಿ ಕೆಲಸಗಳಿಗೆ ಹಣ ಮೀಸಲಿಡುವ ಇವರ ಚಾಣಕ್ಯತನ ಮೆಚ್ಚುವಂತದ್ದು. ​ನುಡಿದಂತೆ ನಡೆದ ಸರ್ಕಾರ: ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಗಳನ್ನು ಈಡೇರಿಸುವಲ್ಲಿ ಅವರು ತೋರಿದ ಬದ್ಧತೆ ಮತದಾರರಲ್ಲಿ ಅವರ ಮೇಲಿನ ವಿಶ್ವಾಸವನ್ನು ಹೆಚ್ಚಿಸಿದೆ. ​ತಳಮಟ್ಟದ ನಾಯಕತ್ವ ​ಸಿದ್ದರಾಮಯ್ಯನವರು ಯಾವುದೇ ‘ಹೈಕಮಾಂಡ್’ ನೆರಳಿನಲ್ಲದೆ, ಹಳ್ಳಿ ಹಳ್ಳಿಯ ಜನರೊಂದಿಗೆ ಬೆರೆತು ಬೆಳೆದ ನಾಯಕ. ಅವರ ನೇರ ನುಡಿ, ತರ್ಕಬದ್ಧ ಮಾತುಗಳು ಮತ್ತು ಸಂವಿಧಾನದ ಮೇಲಿನ ಗೌರವ ಅವರನ್ನು ಶ್ರೇಷ್ಠ ಸಂಸದೀಯ ಪಟುವನ್ನಾಗಿ ಮಾಡಿದೆ. ​”ಅಧಿಕಾರ ಎನ್ನುವುದು ಕೇವಲ ಕುರ್ಚಿಯಲ್ಲ, ಅದು ಬಡವರ ಕಣ್ಣೀರು ಒರೆಸುವ ಅವಕಾಶ” ಎಂಬ ಸಿದ್ಧಾಂತದೊಂದಿಗೆ ಅವರು ಮುನ್ನಡೆಯುತ್ತಿರುವುದು ಇಂದಿನ ರಾಜಕಾರಣಿಗಳಿಗೆ ಮಾದರಿಯಾಗಿದೆ. ​ಸಮಾರೋಪ ​ದೇವರಾಜ ಅರಸು ಅವರ ದಾಖಲೆಯನ್ನು ಸರಿಗಟ್ಟಿರುವ ಸಿದ್ದರಾಮಯ್ಯನವರು, ಕರ್ನಾಟಕದ ಸಾಮಾಜಿಕ ನಕ್ಷೆಯಲ್ಲಿ ತಮ್ಮದೇ ಆದ ಅಳಿಸಲಾಗದ ಛಾಪನ್ನು ಒತ್ತಿದ್ದಾರೆ. ಅವರ ಈ ಪಯಣ ಕೇವಲ ಸುದೀರ್ಘ ಅವಧಿಯದ್ದಷ್ಟೇ ಅಲ್ಲದೆ, ‘ಸಮ ಸಮಾಜ’ದ ನಿರ್ಮಾಣದ ಹಾದಿಯಲ್ಲಿ ಒಂದು ಭರವಸೆಯ ನಡಿಗೆಯಾಗಿದೆ.

error: Content is protected !!