ಅಪ್ರಾಪ್ತ ವಯಸ್ಸಿನ ಮಕ್ಕಳಿಗೆ ವಾಹನ ಚಾಲನೆಗೆ ಅವಕಾಶ ನೀಡದಂತೆ ಮನವಿ

ಅಪ್ರಾಪ್ತ ವಯಸ್ಸಿನ ಮಕ್ಕಳಿಗೆ ವಾಹನ ಚಾಲನೆಗೆ ಅವಕಾಶ ನೀಡದಂತೆ ಮನವಿ
ಕೊಡತಗೇರಿ ಎಕ್ಸಪ್ರೆಸ್ ಸುದ್ದಿ
ಕೊಪ್ಪಳ: ಮೋಟಾರು ವಾಹನಗಳ ಕಾಯ್ದೆ-1988 ರನ್ವಯ ಅಪ್ರಾಪ್ತ ವಯಸ್ಸಿನ ಮಕ್ಕಳಿಗೆ ವಾಹನ ಚಾಲನೆಗೆ ಅವಕಾಶ ನೀಡುವುದು ಶಿಕ್ಷಾರ್ಹ ಅಪರಾಧವಾಗಿದ್ದು, ಪೋಷಕರು ಹಾಗೂ ವಾಹನ ಮಾಲೀಕರು ಅಪ್ರಾಪ್ತ ವಯಸ್ಸಿನ ಮಕ್ಕಳಿಗೆ ವಾಹನ ಚಾಲನೆಗೆ ಅವಕಾಶ ಅಥವಾ ಅನುಮತಿ ನೀಡದಂತೆ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ಮನವಿ ಮಾಡಿದ್ದಾರೆ*
ಮೋಟಾರು ವಾಹನಗಳ ಕಾಯ್ದೆ-1988 ರನ್ವಯ ಅಪ್ರಾಪ್ತ ವಯಸ್ಸಿನ *ಮಕ್ಕಳು ವಾಹನ ಚಲಾಯಿಸಿದಲ್ಲಿ ಕಲಂ 188(5) ರಡಿ ವಾಹನ ಮಾಲೀಕರಿಗೆ ರೂ.1000/- ದಂಡ ಮತ್ತು 03 ತಿಂಗಳು ಜೈಲು ಶಿಕ್ಷೆ, ಪರವಾನಗಿ ಇಲ್ಲದೇ ವಾಹನ ಚಲಾಯಿಸಿದ್ದಕ್ಕಾಗಿ ಚಲಾಯಿಸಿದ ವ್ಯಕ್ತಿಗೆ ಕಲಂ 181(4) ರಡಿ ರೂ.500/- ದಂಡ ಮತ್ತು 03 ತಿಂಗಳು ಜೈಲು ಶಿಕ್ಷೆ ವಿಧಿಸಬಹುದಾಗಿದೆ* ಒಂದು ವೇಳೆ ಅಪ್ರಾಪ್ತ ವಯಸ್ಸಿನ ಮಕ್ಕಳು ವಾಹನ ಚಲಾಯಿಸಿ ಅಪಘಾತ ಎಸಗಿದಲ್ಲಿ ಈ ಅಪಘಾತದಿಂದಾಗುವ ನಷ್ಟವನ್ನು *ವಾಹನ ಮಾಲೀಕರಿಂದ ಭರಿಸಬಹುದಾಗಿದೆ.*
2021 ರಲ್ಲಿ ಜಿಲ್ಲೆಯಲ್ಲಿ ದಾಖಲಾದ ಪ್ರಕರಣ ಸಂಖ್ಯೆ: 275/2021(ಎಂ.ವಿ.ಸಿ.)ರಲ್ಲಿ *ಯಲಬುರ್ಗಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದ ರಾಜಶೇಖರ ತಂ. ಅಯ್ಯನಗೌಡ ಪಾಟೀಲ್ ಎಂಬುವವರು ದಿನಾಂಕ:10.03.2021 ರಂದು ಯಲಬುರ್ಗಾ ಪಟ್ಟಣದ ರಸ್ತೆಯೊಂದರ ಎಡಬದಿಯಲ್ಲಿ ನಿಂತು ಮಾತನಾಡುತ್ತಿರುವಾಗ ಅಪ್ರಾಪ್ತ ವಯಸ್ಸಿನ ಬಾಲಕನೊಬ್ಬ ಅತಿ ವೇಗವಾಗಿ ಹಾಗೂ ಅಲಕ್ಷö್ಯತನದಿಂದ ಪ್ಯಾಸೆಂಜರ್ ಆಟೋವನ್ನು ಚಲಾಯಿಸಿಕೊಂಡು ಬಂದು ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿ ಮೃತಪಟ್ಟಿದ್ದು* ಈ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಗಂಗಾವತಿಯ ಜೆ.ಎಮ್.ಎಫ್.ಸಿ. ನ್ಯಾಯಾಲಯದ ಹಿರಿಯ ಸಿವ್ಹಿಲ್ ನ್ಯಾಯಾಧೀಶರು *ಅಪ್ರಾಪ್ತ ವಯಸ್ಸಿನ ಬಾಲಕನಿಗೆ ವಾಹನವನ್ನು ಚಲಾಯಿಸಲು ನೀಡಿದ ಆಟೋ ರಿಕ್ಷಾದ ಮಾಲೀಕರಿಗೆ ರೂ.1,41,61,580/-* ಗಳ ಪರಿಹಾರ ಧನವನ್ನು ಮೃತರ ಕುಟುಂಬಕ್ಕೆ ನೀಡುವಂತೆ ಆದೇಶಿಸಿರುತ್ತಾರೆ.
ಆದ್ದರಿಂದ ಪೋಷಕರು ಹಾಗೂ ವಾಹನ ಮಾಲೀಕರು ಅಪ್ರಾಪ್ತ ವಯಸ್ಸಿನ ಮಕ್ಕಳಿಗೆ ವಾಹನ ಚಾಲನೆಗೆ ಅವಕಾಶ ಅಥವಾ ಅನುಮತಿ ನೀಡಬಾರದು ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ಪ್ರಕಟಣೆ ಮೂಲಕ ಕೋರಿದ್ದಾರೆ.

error: Content is protected !!