ಗೋಗೇರಿ ಸರಕಾರಿ ಶಾಲೆಯಲ್ಲಿ ವಿಜ್ಞಾನ ಹಬ್ಬ: ವಿದ್ಯಾರ್ಥಿಗಳಿಂದ ಆಕರ್ಷಕ ವಸ್ತು ಪ್ರದರ್ಶನ

ಗೋಗೇರಿ ಸರಕಾರಿ ಶಾಲೆಯಲ್ಲಿ ವಿಜ್ಞಾನ ಹಬ್ಬ: ವಿದ್ಯಾರ್ಥಿಗಳಿಂದ ಆಕರ್ಷಕ ವಸ್ತು ಪ್ರದರ್ಶನ

ಕೊಡತಗೇರಿ ಎಕ್ಸಪ್ರೆಸ್ ಡಿಜಿಟಲ್ ಹೌಸ್

ಗೋಗೇರಿ: ಇಲ್ಲಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನದ ಅಂಗವಾಗಿ ವಿದ್ಯಾರ್ಥಿಗಳಿಂದ ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ಜರುಗಿತು.

​ಗದಗ ಜಿಲ್ಲಾಡಳಿತ, ಉಪಪ್ರಾದೇಶಿಕ ವಿಜ್ಞಾನ ಕೇಂದ್ರ ಹಾಗೂ ತಾರಾಲಯ ಸಂಸ್ಥೆಯ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿದ್ದ ಈ ಪ್ರದರ್ಶನದಲ್ಲಿ ವಿದ್ಯಾರ್ಥಿಗಳು ತಮ್ಮ ಸೃಜನಶೀಲತೆ ಮತ್ತು ಜ್ಞಾನವನ್ನು ಪ್ರದರ್ಶಿಸಿದರು. ವಿದ್ಯಾರ್ಥಿಗಳು ಸ್ವತಃ ತಯಾರಿಸಿದ ವಿವಿಧ ಪ್ರಯೋಗಾತ್ಮಕ ಮಾದರಿಗಳು ನೋಡುಗರ ಗಮನ ಸೆಳೆದವು. ಪ್ರತಿಯೊಬ್ಬ ವಿದ್ಯಾರ್ಥಿಯು ತಾವು ತಯಾರಿಸಿದ ಉಪಕರಣಗಳ ಕಾರ್ಯವೈಖರಿ ಮತ್ತು ಅದರ ಹಿಂದಿನ ವಿಜ್ಞಾನದ ತತ್ವಗಳನ್ನು ಸವಿಸ್ತಾರವಾಗಿ ವಿವರಿಸಿದರು.

ಗಣ್ಯರ ಭೇಟಿ:

ಈ ಕಾರ್ಯಕ್ರಮಕ್ಕೆ ಮುಖ್ಯ ವೀಕ್ಷಕರಾಗಿ ಆಗಮಿಸಿದ್ದ ಗದಗ ಜಿಲ್ಲಾ ಪರೀವಿಕ್ಷಣಾಧಿಕಾರಿಗಳಾದ ಬಂಡಿವಡ್ಡರ ಮೇಡಂ ಅವರು ವಿದ್ಯಾರ್ಥಿಗಳ ಪ್ರತಿಭೆಯನ್ನು ಕಂಡು ಶ್ಲಾಘಿಸಿದರು. “ಗ್ರಾಮೀಣ ಭಾಗದ ವಿದ್ಯಾರ್ಥಿಗಳಲ್ಲಿ ಅಡಗಿರುವ ವೈಜ್ಞಾನಿಕ ಮನೋಭಾವನೆಯನ್ನು ಹೊರತರಲು ಇಂತಹ ಪ್ರದರ್ಶನಗಳು ಪೂರಕವಾಗಿವೆ” ಎಂದು ಅವರು ಅಭಿಪ್ರಾಯಪಟ್ಟರು.

ಅತಿಥಿ ಅಭ್ಯಾಗತರು:

ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಕೆ.ಎಸ್. ಕೊಡತಗೇರಿ, ಸಿ.ಆರ್.ಪಿ ಗಳಾದ ಪ್ರಕಾಶ ಅಂಬೋರೆ ಅವರು ಭಾಗವಹಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್.ಡಿ.ಎಂ.ಸಿ ಅಧ್ಯಕ್ಷರಾದ ರವಿಚಂದ್ರ ಗಾರಗಿ ಅವರು ವಹಿಸಿದ್ದರು.

​ವೇದಿಕೆಯ ಮೇಲೆ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯಿನಿಯಾದ ನಾಗನೂರ ಮೇಡಂ, ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿಯಾದ ಅಂಗಡಿ ಮೆಡಂ. ಎನ್. ಹೆಬ್ಬುಲಿ ಸರ್, ವಿಜ್ಞಾನ ಶಿಕ್ಷಕಿಯಾದ ಭಾಗ್ಯಶ್ರೀ, ಗವಿ ಭೋಸಲೆ, ದುರಗಪ್ಪ ಬೂದಿಹಾಳ ಹಾಗೂ ಶಾಲೆಯ ಸಮಸ್ತ ಗುರುವೃಂದದವರು ಉಪಸ್ಥಿತರಿದ್ದು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದರು.

​ಶಾಲಾ ಆವರಣದಲ್ಲಿ ನಡೆದ ಈ ವಿಜ್ಞಾನ ವಸ್ತು ಪ್ರದರ್ಶನವು ಮಕ್ಕಳಲ್ಲಿ ವಿಜ್ಞಾನದ ಬಗ್ಗೆ ಕುತೂಹಲ ಮೂಡಿಸುವಲ್ಲಿ ಯಶಸ್ವಿಯಾಯಿತು. ಗ್ರಾಮದ ಪಾಲಕರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಮಕ್ಕಳ ಕಲಾತ್ಮಕ ವಿಜ್ಞಾನ ಮಾದರಿಗಳನ್ನು ವೀಕ್ಷಿಸಿ ಹರಸಿದರು.

error: Content is protected !!