“ರಂಗಾಸಕ್ತರು ಹೆಚ್ಚಾದಾಗ ರಂಗಭೂಮಿ ಬೆಳೆಯಲು ಸಾಧ್ಯ: ಕೆ.ಎಸ್. ಕೊಡತಗೇರಿ ಅಭಿಮತ”
ನಾಗರಸಕೊಪ್ಪ: “ಇಂದಿನ ಆ
ಧುನಿಕ ಯುಗದಲ್ಲಿಯೂ ರಂಗಭೂಮಿಯು ತನ್ನದೇ ಆದ ವಿಶಿಷ್ಟ ಸ್ಥಾನವನ್ನು ಉಳಿಸಿಕೊಂಡಿದೆ. ಗ್ರಾಮಗಳಲ್ಲಿ ರಂಗಾಸಕ್ತರು ಹೆಚ್ಚಾದಾಗ ಮಾತ್ರ ಕಲೆ ಮತ್ತು ರಂಗಭೂಮಿ ಮತ್ತಷ್ಟು ಸದೃಢವಾಗಿ ಬೆಳೆಯಲು ಸಾಧ್ಯ,” ಎಂದು ಯುವ ವಕೀಲರಾದ ಕೆ.ಎಸ್. ಕೊಡತಗೇರಿ ಅವರು ಅಭಿಪ್ರಾಯಪಟ್ಟರು.
ಗಜೇಂದ್ರಗಡ ತಾಲೂಕಿನ ನಾಗರಸಕೊಪ್ಪ ಗ್ರಾಮದ ಶ್ರೀ ಬಸವೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ‘ಶ್ರೀ ಬಸವೇಶ್ವರ ನಾಟ್ಯ ಸಂಘ’ದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ “ಕೆರಳಿದ ಅವಳಿ ಸರ್ಪಗಳು” ಅರ್ಥಾತ್ “ಸಹೋದರರು ಹಾಕಿದ ಸವಾಲ್” ಎಂಬ ಸುಂದರ ಸಾಮಾಜಿಕ ನಾಟಕದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಜೀವಂತ ಕಲೆ ರಂಗಭೂಮಿ:
ಕರ್ನಾಟಕ ರಾಜ್ಯ ಖನಿಜ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ಶಾಸಕರಾದ ಸನ್ಮಾನ್ಯ ಶ್ರೀ ಜಿ.ಎಸ್. ಪಾಟೀಲ್ ಅವರ ಅನುಪಸ್ಥಿತಿಯಲ್ಲಿ, ಅವರ ಪರವಾಗಿ ಸುಕ್ಷೇತ್ರ ಶಾಖಾ ಶಿವಯೋಗ ಮಂದಿರ ನಿಡಗುಂದಿ ಕೊಪ್ಪದ ಪರಮಪೂಜ್ಯ ಶ್ರೀ ಅಭಿನವ ಚನ್ನಬಸವ ಮಹಾಸ್ವಾಮಿಗಳು ಜ್ಯೋತಿ ಬೆಳಗಿಸಿ ನಾಟಕಕ್ಕೆ ಚಾಲನೆ ನೀಡಿದರು. ಪೂಜ್ಯರು ತಮ್ಮ ಆಶೀರ್ವಚನದಲ್ಲಿ, ಕಲೆಯು ಮನುಷ್ಯನ ಸಂಸ್ಕಾರವನ್ನು ಎತ್ತಿ ಹಿಡಿಯುತ್ತದೆ ಎಂದು ತಿಳಿಸಿದರು.

ಗಣ್ಯರ ಉಪಸ್ಥಿತಿ:
ಕಾರ್ಯಕ್ರಮದಲ್ಲಿ ಪ್ರಮುಖರಾದ ವೀರೇಶ ರಾಠೋಡ, ರಂಗನಾಥ ಡೊಳ್ಳಿನ, ಕೆ.ಎಚ್. ಪಾಟೀಲ್ ವಕೀಲರು, ಉಮೇಶ್ ಚನ್ನು ಪಾಟೀಲ್, ಶರಣಪ್ಪ ಸೊಬರದ, ಶರಣಪ್ಪ ಕೊಡಗಾನೂರ, ಡಾ. ಮುತ್ತಣ್ಣ ಗುಜ್ಜಲ್, ಮುತ್ತಣ್ಣ ಲ್ಯಾವಕಿ ಸೇರಿದಂತೆ ಗ್ರಾಮದ ಹಿರಿಯರು ಹಾಗೂ ಹಲವಾರು ಗಣ್ಯರು ಉಪಸ್ಥಿತರಿದ್ದರು.

More Stories
ಮಾಜಿ ವಿಧಾನ ಪರಿಷತ್ ಸದಸ್ಯರಾದ ಕರಿಯಣ್ಣ ಸಂಗಟಿ ವಿಧಿವಶ
ಗೋಗೇರಿ ಗ್ರಾಮದಲ್ಲಿ ಸಡಗರದ ಈದುಲ್ ಫಿತ್ರ: ಸಾಮೂಹಿಕ ನಮಾಜ್ ಮೂಲಕ ಶಾಂತಿ, ಸಾಮರಸ್ಯಕ್ಕೆ ಪ್ರಾರ್ಥನೆ
ಸಿನಿಮಾ-ಮೊಬೈಲ್ ಹಾವಳಿಯ ನಡುವೆಯೂ ರಂಗಭೂಮಿ ಅಜರಾಮರ: ವಕೀಲ ಕೆ.ಎಸ್. ಕೊಡತಗೇರಿ