ತಿಂಥಣಿ ಬ್ರಿಜ್ನಲ್ಲಿ ಜ.12ರಿಂದ ‘ಹಾಲುಮತ’ ಸಂಸ್ಕೃತಿ ವೈಭವ : ಕೆ.ರಾಜಶೇಖರ್ ಹಿಟ್ನಾಳ

 

 

ಕೊಪ್ಪಳ :

 

ಇದೇ ಜ.12, 13 ಮತ್ತು 14 ರಂದು ಸತತ ಮೂರು ದಿನಗಳ ಕಾಲ “ಹಾಲುಮತ” ಗತ ವೈಭವವನ್ನು ನೆನಪಿಸುವ ‘ಹಾಲುಮತ ಸಂಸ್ಕೃತಿ ವೈಭವ’ವನ್ನು ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ತಿಂಥಣಿ ಬ್ರಿಜ್ನಲ್ಲಿ ಆಯೋಜಿಸಲಾಗಿದೆ ಎಂದು ಕೊಪ್ಫಳ ಜಿ.ಪಂ ಮಾಜಿ ಅಧ್ಯಕ್ಷ ಕೆ.ರಾಜಶೇಖರ್ ಹಿಟ್ನಾಳ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜ.11 ಗುರುವಾರ ಸಂಜೆ 07 : 30ಕ್ಕೆ ಬಂಡಾರ, ಕಂಬಳಿ ಪೂಜೆ, ಡೊಳ್ಳಿನ ಗಾಯನದೊಂದಿಗೆ ಹಾಲುವತ ಸಾಹಿತ್ಯ ಪ್ರಥಮ ಕಮ್ಮಟ ನಿತ್ಯ ಬೆಳಿಗ್ಗೆ 10 ರಿಂದ 12 ಮತ್ತು ಸಂಜೆ 4 ರಿಂದ 6 ಗಂಟೆಯವರಗೆ ಆರಂಭಿಸಲಾಗುತ್ತದೆ.

12 ಶುಕ್ರವಾರ ಮುಂಜಾನೆ 7 ಗಂಟೆಗೆ ಹೊಳೆಪೂಜೆ, ಪಲ್ಲಕ್ಕಿ ಮೆರವಣಿಗೆ, ಅಭಿಷೇಕ, 11 ಗಂಟೆಗೆ ಹಾಲುಮತ ಧರ್ಮ ಧ್ವಜಾರೋಹಣ, ಸಾವಯವ ಕೃಷಿ ಉತ್ಪನ್ನ ಸಿರಿಧಾನ್ಯ, ಹಾಲುಮತ ಸಾಹಿತ್ಯ, ಉಚಿತ ನೇತ್ರದಾನ ಹಾಗೂ ತಪಾಸಣೆ ಮತ್ತು ಚಿಕಿತ್ಸಾ ಶಿಬಿರ.12 :00 ಯುವಜನ ಸಮಾವೇಶ, ರಾತ್ರಿ 9 :00 ಗಂಟೆಗೆ ಶ್ರೀ ರೇಣುಕಾ ಯಲ್ಲಮ್ಮ ನಾಟಕ ಪ್ರದರ್ಶನವಾಗಲಿದೆ.

 

ಕಾರ್ಯಕ್ರಮಕ್ಕೆ ಸಿಎಂ ಸಿದ್ಧರಾಮಯ್ಯ ಆಗಮನ

 

ಜ.13 ರಂದು ಮುಖ್ರಮಂತ್ರಿ ಸಿದ್ಧರಾಮಯ್ಯ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಸಹಸ್ರ ಹೊನ್ನವರೆ ಪುಷ್ಪಾರ್ಚನೆ, ಭಕ್ತರಿಂದ ಭಂಡಾರ, ಮಡಿ ಉಣ್ಣೆ ಅರ್ಪಣೆ, ಹಾಲುಮತ ಭಾಸ್ಕರ, ಕನಕ ರತ್ನ, ಸಿದ್ಧಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ ಮತ್ತು ವಿದ್ಯಾರ್ಥಿ ನಿಲಯ ಭೂಮಿ ಪೂಜೆ ನಡೆಯಲಿದೆ. ಸಂಜೆ 4 ಘಂಟೆಗೆ ಟಗರುಗಳ ಕಾಳಗ, ರಾತ್ರಿ 9 ಕ್ಕೆ ಶ್ರೀ ಬೀರಲಿಂಗೇಶ್ವರ ಮಹಿಮೆ ನಾಟಕ ಪ್ರದರ್ಶನ ಕಾಣಲಿದೆ.

 

ಸಮಾರೋಪ ಸಮಾರಂಭ

 

ಜ.14 ಭಾನುವಾರದಂದು ರಾಜ್ಯದ ನಾನಾ ಭಾಗದಿಂದ ಮಾಜಿ ಸಚಿವರು, ಮಾಜಿ, ಹಾಲಿ ಶಾಸಕರು ಸೇರಿದಂತೆ ಅನೇಕ ಸಮಾಜ ಹಿರಿಯ ಮುಖಂಡರು ಸಮಾರೋಪ ಸಮಾರಂಭಕ್ಕೆ ಆಗಮಿಸುವರು.

ಅಂದು ಮುಂಜಾನೆ 6 ಗಂಟೆಗೆ ಶ್ರೀ ಬೀರಲಿಂಗೇಶ್ವರನಿಗೆ ಮೇಷಾಮೃತ ಅಭಿಷೇಕ, ವಿವಿಧ ವಿಧಿ ವಿಧಾನಗಳೊಂದಿಗೆ ಸಹಸ್ರ ಅರ್ಚನಾ ಪೂಜೆ, ‘ಹಾಲುಮತ ಮಾತೃಶಕ್ತಿ’ ಸಮಾವೇಶ, ಮಧ್ಯಾಹ್ನ 2 : 30ಕ್ಕೆ ಎತ್ತುಗಳ ಭಾರ ಎಳೆಯುವ ಸ್ಪರ್ಧೆ ಏರ್ಪಡಲಿದೆ. ತಿಂಥಣಿ ಬ್ರಿಜ್ ಹಾಲುಮತದ ಈ ಸಮಾವೇಶದಲ್ಲಿ ಪ್ರತಿದಿನ ಸುಮಾರು 30 ಸಾವಿರಕ್ಕೂ ಅಧಿಕ ಬಾಂಧವರು ಸೇರುವ ನಿರೀಕ್ಷೆ ಇದೆ, ಹೀಗಾಗಿ ಪ್ರತಿಯೊಬ್ಬರು ಕಾರ್ಯಕ್ರಮಕ್ಕೆ ಆಗಮಿಸಿ ಯಶಸ್ವಿ ಮಾಡಬೇಕು ಎಂದು ಕೆ.ರಾಜಶೇಖರ್ ಹಿಟ್ನಾಳ ಮನವಿ ಮಾಡಿಕೊಂಡರು. ಯಲಬುರ್ಗಾ ತಾಲೂಕ ಕುರುಬರ ಸಮಾಜದ ಅಧ್ಯಕ್ಷ ವೀರನಗೌಡ ಬಳೂಟಗಿ, ಜಿಲ್ಲಾಧ್ಯಕ್ಷ ಹನುಮಂತಪ್ಪ ಕೌದಿ, ಮಾರುತಿ ಗೊಂದಿ, ದ್ಯಾಮಣ್ಣ ಕರಿಗಾರ, ಶಿವಣ್ಣ ರಾಜೂರು, ಆನಂದ್ ಕಿನ್ನಾಳ, ಪರಶುರಾಮ್ ಅಣ್ಣಿಗೇರಿ, ಅಂದನ ಸ್ವಾಮಿ ಭೂತಣ್ಣವರ, ಹನುಮಂತಪ್ಪ ಅಬ್ಬಿಗೇರಿ ಹಲಗೇರಿ ಸೇರಿದಂತೆ ಹಾಲುಮತ ಸಮಾಜದ ಅನೇಕ ಮುಖಂಡರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

error: Content is protected !!