- ಹಿರಿಯ ನಾಗರಿಕರನ್ನು ಗೌರವದಿಂದ ಕಾಣಬೇಕು : ನ್ಯಾಯಧೀಶ ಮಾಹದೇವಪ್ಪ ಎಚ್
ಕೊಡತಗೇರಿ ಎಕ್ಸ್‌ಪ್ರೆಸ್ ಡಿಜಿಟಲ್ ಹೌಸ್
ಗಜೇಂದ್ರಗಡ : ಇಂದು ಅವಿಭಕ್ತ ಕುಟಂಬಗಳು ಕಡಿಮೆಯಾಗುತ್ತಿದ್ದು . ಮತ್ತು ಹಿರಿಯರನ್ನು ಗೌರವದಿಂದ ಕಾಣುವದು ಕಡಿಮೆಯಾಗುತ್ತಿರುವದು ವಿಷಾದನೀಯ ಆದ್ದರಿಂದ ಹಿರಿಯ ನಾಗರಿಕರನ್ನು ಗೌರವದಿಂದ ಕಾಣಬೇಕು ಎಂದು ನ್ಯಾಯಧೀಶ ಮಾಹಾದೇವಪ್ಪ ಎಚ್ ಹೇಳಿದರು.
ಅವರು ಗಜೇಂದ್ರಗಡ ಪೊಲೀಸ್ ಠಾಣೆಯಲ್ಲಿ ನೆಡದ ಹಿರಿಯ ನಾಗರಿಕ ದಿನಾಚರಣೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಈ ದಿನಾಚರಣೆಯ ನ್ನು ಮೊದಲು ಅಮೇರಿಕಾದ ರೊನಾಲ್ಡ್ ರೇಗನ ಅವರು 1988 ರಲ್ಲಿ ಮೊದಲು ಹಿರಿಯ ನಾಗರಿಕ ದಿನಾಚರಣೆಯನ್ನು ಜಾರಿಗೆ ತಂದರು ತದನಂತರ ವಿಶ್ವಸಂಸ್ಥೆ 1991 ರಲ್ಲಿ ವಿಶ್ವಾದ್ಯಾಂತ ಜಾರಿಗೆ ತಂದರು ಇದರ ಉದ್ದೇಶ ಹಿರಿಯನಾಗರಿಕರಿ ದೊರಕಬೇಕಾದ ಸೌಲಭ್ಯಗಳು ಮತ್ತು ಅವರಿಗೆ ಇರುವಂತಹ ಕಾನೂನು ಅನ್ನು ತಿಳಿದುಕೊಳ್ಳಬೇಕು ಮತ್ತು ಯಾರಾದರೂ ಹಿರಿಯ ನಾಗರಿಕರು ತೊಂದರೆಗೆ ಒಳಗಾದರೆ ಅವರಿಗೆ ನ್ಯಾಯ ಸಿಗಬೇಕು ಎಂಬುವದು ಈ ಕಾರ್ಯಕ್ರಮದ ಉದ್ದೇಶ ಎಂದರು.
ನಂತರ ಮಾತನಾಡಿದ ನ್ಯಾಯಾಧೀಶ ವಿಜಯಕುಮಾರ ನಾಯಕ ಮಾತನಾಡಿದರು. ನಾಯಾಧಿಶ ಹೂಲಗಪ್ಪನವರು ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಹಿರಿಯ ನಾಗರಿಕರ ಸಮಸ್ಯೆಗಳು ಏನೆ ಇದ್ದರು ನಮ ಗಮನಕ್ಕೆ ತಂದರೆ ನಾವು ಸಂಬಂಧಿಸಿದ ಅಧಿಕಾರಿಗಳನ್ನು ಕರೆದು ಅವರಿಗೆ ನ್ಯಾಯವನ್ನು ದೊರಕಿಸಿಕೊಡುತ್ತೇವೆ ಎಂದರು.
ರೋಣದ ಸಿಪಿಐ ರಾದ ವಿಜಯಕುಮಾರ ನಾಯಕ, ಗಜೇಂದ್ರಗಡ ಠಾಣೆಯ ಪಿಎಸ್ಐ ಪ್ರಕಾಶ ಡಿ ಮತ್ತು ವಕೀಲರಾದ ಶ್ರೀಕಾಂತ್ ಅವಧೂತ ಕೆ.ಎಸ್.ಕೊಡತಗೇರಿ . ಪೋಲಿಸ್ ರಾದ ಗೌಡರ ಸರ್ ಸೇರಿದಂತೆ ನಾಗರಿಕರು ಉಪಸ್ಥಿತರಿದ್ದರು.

More Stories
ಸಿನಿಮಾ-ಮೊಬೈಲ್ ಹಾವಳಿಯ ನಡುವೆಯೂ ರಂಗಭೂಮಿ ಅಜರಾಮರ: ವಕೀಲ ಕೆ.ಎಸ್. ಕೊಡತಗೇರಿ
ಗೋಗೇರಿಯಲ್ಲಿ ಫೆಬ್ರವರಿ 5 ರಂದು ಭವ್ಯ ಸಾಮಾಜಿಕ ನಾಟಕ ಪ್ರದರ್ಶನ: ‘ಅಣ್ಣನ ಸೋಲು ತಂಗಿಯ ಗೆಲುವು’
ಗಜೇಂದ್ರಗಡ ಸಬ್ರಿಜಿಸ್ಟ್ರಾರ್ ಕಚೇರಿ: ‘ಲಂಚ’ ಕೊಡದಿದ್ದರೆ ಇಲ್ಲಿ ಕೆಲಸ ನಡೆಯಲ್ಲ!