ಗಜೇಂದ್ರಗಡ: ತಾಲೂಕು ಎಸ್.ಡಿ.ಎಂ.ಸಿ ಸಮನ್ವಯ ಸಮಿತಿ ಕಾರ್ಯದರ್ಶಿಯಾಗಿ ರವಿಚಂದ್ರ ಗಾರಗಿ ಆಯ್ಕೆ
ಕೊಡತಗೇರಿ ಎಕ್ಸ್‌ಪ್ರೆಸ್ ಡಿಜಿಟಲ್ ಹೌಸ್
ಗಜೇಂದ್ರಗಡ: ಇತ್ತೀಚೆಗೆ ಗದಗನಲ್ಲಿ ಜರುಗಿದ ಜಿಲ್ಲಾ ಎಸ್.ಡಿ.ಎಂ.ಸಿ ಸಮನ್ವಯ ಸಮಿತಿಯ ವಿಶೇಷ ಸಭೆಯಲ್ಲಿ, ಗಜೇಂದ್ರಗಡ ತಾಲೂಕಿನ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಎಸ್.ಡಿ.ಎಂ.ಸಿ ತಾಲೂಕು ಕಾರ್ಯದರ್ಶಿಯಾಗಿ ರವಿಚಂದ್ರ ಸಂಭಾಜಿ ಗಾರಗಿ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ.
ಗೋಗೇರಿ ಗ್ರಾಮದ ಸರ್ಕಾರಿ ಮಾದರಿ ಕನ್ನಡ ಪ್ರಾಥಮಿಕ ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ ರವಿಚಂದ್ರ ಅವರು, ಶಾಲಾ ಅಭಿವೃದ್ಧಿ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ತೋರುತ್ತಿರುವ ಸಕ್ರಿಯ ಆಸಕ್ತಿಯನ್ನು ಗುರುತಿಸಿ ಈ ಜವಾಬ್ದಾರಿಯನ್ನು ನೀಡಲಾಗಿದೆ.
ತಮ್ಮ ನೇಮಕಾತಿಯ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ರವಿಚಂದ್ರ ಗಾರಗಿ ಅವರು, “ನನ್ನನ್ನು ಈ ಉನ್ನತ ಜವಾಬ್ದಾರಿಗೆ ಆಯ್ಕೆ ಮಾಡಿದ ಜಿಲ್ಲಾ ಸಮಿತಿಯ ಸರ್ವ ಅಧಿಕಾರಿಗಳಿಗೂ, ಎಸ್.ಡಿ.ಎಂ.ಸಿ ಪದಾಧಿಕಾರಿಗಳಿಗೂ ಹಾಗೂ ಗೌರವಾನ್ವಿತ ಗುರು-ಗುರುಮಾತೆಯರಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ತಾಲೂಕಿನ ಶಾಲಾ ಶಿಕ್ಷಣ ವ್ಯವಸ್ಥೆಯ ಸುಧಾರಣೆ ಹಾಗೂ ಸಮಿತಿಯ ಬಲವರ್ಧನೆಗೆ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ” ಎಂದು ತಿಳಿಸಿದ್ದಾರೆ.

More Stories
ಮುನಿರಾಬಾದ್ನಲ್ಲಿ ಅಕ್ರಮಗಳ ದಂಧೆ: ಪಿಎಸ್ಐ ಸುನೀಲ್ ಅಮಾನತು!
ರಂಗಾಸಕ್ತರು ಹೆಚ್ಚಾದಾಗ ರಂಗಭೂಮಿ ಬೆಳೆಯಲು ಸಾಧ್ಯ : ಕೆ.ಎಸ್.ಕೊಡತಗೇರಿ
ಮಾಜಿ ವಿಧಾನ ಪರಿಷತ್ ಸದಸ್ಯರಾದ ಕರಿಯಣ್ಣ ಸಂಗಟಿ ವಿಧಿವಶ