ಅತೀ ಹೆಚ್ಚಿಗೆ ಪೋಕ್ಸೋ  ಪ್ರಕರಣಗಳಲ್ಲಿ ಅತೀ ಹೆಚ್ಚು ಯುವಕರು ಬಲಿಯಾಗುತ್ತಿರುವದು ವಿಷಾದನೀಯ – ದರಗದ

ಅತೀ ಹೆಚ್ಚಿಗೆ ಪೋಕ್ಸೋ  ಪ್ರಕರಣಗಳಲ್ಲಿ ಅತೀ ಹೆಚ್ಚು ಯುವಕರು ಬಲಿಯಾಗುತ್ತಿರುವದು ವಿಷಾದನೀಯ – ದರಗದ

ಕೊಡತಗೇರಿ Express ಡಿಜಿಟಲ್ ಹೌಸ

ಕೊಪ್ಪಳ: ಇತ್ತೀಚಿಗೆ ಅತೀ ಹೆಚ್ಚಿಗೆ ಪೋಕ್ಸೋ  ಪ್ರಕರಣಗಳಲ್ಲಿ ಅತೀ ಹೆಚ್ಚು ಯುವಕರು ಬಲಿಯಾಗುತ್ತಿರುವದು ವಿಷಾದನೀಯ ಎಂದು ಜಿಲ್ಲಾ ಕಾನೂನು ಸೇವೇಗಳ ಪ್ರಾಧಿಕಾರದ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶ್ರೀ ಮಹಾಂತೇಶ ಎಸ್. ದರಗದ ಮಾತನಾಡಿದರು .ಅವರು ದಕ್ಷಿಣ ಭಾರತ ಹಿಂದಿಪ್ರಚಾರ ಸಭೆಯ ಭಾರತ ರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಕಾನೂನು ಮಹಾವಿದ್ಯಾಲಯ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಕೊಪ್ಪಳ ಇವರಗಳ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾ ಕಾನೂನು ಸೇವೇಗಳ ಪ್ರಾಧಿಕಾರದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು  ಕೊಪ್ಪಳ ಜಿಲ್ಲೆಯಲ್ಲಿ   ಇತ್ತೀಚಿಗೆ ಅತೀ ಹೆಚ್ಚಿಗೆ ಪೋಕ್ಸೋ  ಪ್ರಕರಣಗಳಲ್ಲಿ ಅತೀ ಹೆಚ್ಚು ಯುವಕರು ಬಲಿಯಾಗುತ್ತಿದ್ದಾರೆ14,16 ವರ್ಷ ವಯಸ್ಸು ಇರುವ ಚಿಕ್ಕ ಹೆಣ್ಣುಮಕ್ಕಳನ್ನು ಅನೇಕ ಯುವಕರು ಪ್ರೀತಿ, ಪ್ರೇಮದ ಹೆಸರಿನಲ್ಲಿ ಪುಸಲಾಯಿಸಿ ಲೈಂಗಿಕ ದೌರ್ಜನ್ಯ ಎಸಗುತ್ತಿರುವುದು ಯುವಕರ ಪೋಕ್ಸೋ ಕೇಸ್ಗೆ ಕಾರಣವಾಗುತ್ತಿದೆ ಎಂದರು.

ಇಂದಿನ ಸಮಾಜದಲ್ಲಿ ಪಕ್ಕದಲ್ಲಿ ಇದ್ದವರು ತಂದೆ, ಅಣ್ಣ, ಸಂಬಂದಿಕರು ತಮ್ಮದೇ ಕುಟುಂಬದ ಹೆಣ್ಣುಮಕ್ಕಳ ಜೊತೆಗೆ ಅಸಭ್ಯ ವರ್ತನೆಗಳು ತೋರುತ್ತಿವುದರ ಬಗ್ಗೆ ಸುದ್ದಿಗಳನ್ನು ದಿನನಿತ್ಯ ನಾವು ನೀವೂ ನೋಡುತ್ತಿದ್ದೇವೆ,ಈ ರೀತಿಯ ಪೋಕ್ಸೋ ಪ್ರಕರಣಗಳಿಗೆ ಮೂಲ ಕಾರಣ ಜನರಲ್ಲಿ ಇತ್ತೀಚಿಗೆ ಮಾನವೀಯತೆ ಮೌಲ್ಯಗಳು, ಪ್ರಾಮಾಣಿಕತೇ, ನೈತಿಕತೇ ಮರೆಯಾಗುತ್ತಿದೆ,ಹಾಗೂ ನೀವು ಕಾನೂನು ವಿದ್ಯಾರ್ಥಿಗಳು ವಿದ್ಯ ಜೊತೆಗೆ ವಿನಯ, ಮತ್ತು ಮಾನವೀಯತೆಯ ಗುಣಗಳನ್ನು ಕಲಿತಾಗ ಮಾತ್ರ ನಿಮ್ಮ ಜೀವನ ಉಜ್ವಲವಾಗಲು ಕಾರಣ ವಾಗುತ್ತದೆ, ಎಂದು ಸಿವಿಲ್ ನ್ಯಾಯಾಧೀಶರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಇದೆ ಸಂದರ್ಭದಲ್ಲಿ ಯಲಬುರ್ಗಾ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಶ್ರೀ  ಶಶಿಧರ ಸಕ್ರಿ  ಅವರು ಮಾತನಾಡಿ  ಬಡತನ ನಿರ್ಮೂಲನೆಗೆ ಹಾಗೂ ಸರ್ಕಾರದ ವಿವಿಧ ಯೋಜನೆಗಳು ಹಾಗೂ ನಿಗಮಗಳಿಂದ ಸಿಗುವ ಸೌಲಭ್ಯಗಳ ಉಪಯೋಗ ಪಡೆದುಕೊಳ್ಳುವ ಬಗ್ಗೆ ಅವುಗಳಿಂದಾಗುವ ಅನುಕೂಲಗಳ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು.ನಂತರ  ಕಾಲೇಜಿನ ಪ್ರಾಚಾರ್ಯರಾದ ಶ್ರೀಮತಿ ಉಷಾದೇವಿ ಹಿರೇಮಠ ಅವರು ಮಾತನಾಡಿ ಕಾನೂನು ವಿದ್ಯಾರ್ಥಿಗಳು ಕಾನೂನು ಸೇವೇಗಳ ಪ್ರಾಧಿಕಾರದ ಉಪನ್ಯಾಸವನ್ನು ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಳ್ಳಬೇಕು ಹಾಗೂ ಉಪನ್ಯಾಸದ ಪ್ರಮುಖ ಯೋಜನೆಗಳ ಬಗ್ಗೆ ನೀವು ವಿದ್ಯಾರ್ಥಿಗಳಾಗಿ ಸುತ್ತಮುತ್ತಲಿನ ನಿಮ್ಮ ಊರುಗಳಲ್ಲಿ ಜನರಲ್ಲಿ ಸರ್ಕಾರಿ ವಿವಿಧ ಜೋಜನೆಗಳ ಬಗ್ಗೆ ಜಾಗೃತಿ ಮೂಡಿಸುವುದು ಅತ್ಯಗತ್ಯ ಹಾಗೂ ನಮ್ಮ ಜಿಲ್ಲೆಯು ಶಿಕ್ಷಣದಲ್ಲಿ ಹಿಂದುಳಿಯಲು ಮೂಲ ಇಚ್ಛಾಶಕ್ತಿ ಕೊರತೆ, ಕಾರಣ ಎಂದರು.

ಈ ಸಂದರ್ಭದಲ್ಲಿ ಉಪಪ್ರಾಚಾರ್ಯರಾದ ಶ್ರೀ
ಬಸವರಾಜ ಎಸ್.ಎಂ ಉಪನ್ಯಾಸಕರಾದ , ಕುಮಾರಿ ಶಾಲಿನಿ ಪಾಟೀಲ್, ಮತ್ತು ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿನಿಯರು ಹಾಜರಿದ್ದರು.

You may have missed

ಸಿದ್ದರಾಮಯ್ಯ: ಅರಸು ದಾಖಲೆ ಸರಿಗಟ್ಟಿದ ‘ಅಹಿಂದ’ ಚಾಣಕ್ಯ – ಜನಪರ ಆಡಳಿತದ ಹೊಸ ಪರ್ವ ​ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ದೀರ್ಘಕಾಲ ಮುಖ್ಯಮಂತ್ರಿಯಾಗಿ ರಾಜ್ಯವಾಳಿದ ಕೀರ್ತಿ ಈವರೆಗೆ ದಿವಂಗತ ಡಿ. ದೇವರಾಜ ಅರಸು (7 ವರ್ಷ 239 ದಿನಗಳು) ಅವರಿಗೆ ಸಲ್ಲುತ್ತಿತ್ತು. ಆದರೆ, ಜನವರಿ 7, 2026ರಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ಐತಿಹಾಸಿಕ ದಾಖಲೆಯನ್ನು ಮುರಿದು, ಕರ್ನಾಟಕದ ಇತಿಹಾಸದಲ್ಲಿ ಅತಿ ಸುದೀರ್ಘ ಕಾಲ ಆಡಳಿತ ನಡೆಸಿದ ನಾಯಕನಾಗಿ ಹೊರಹೊಮ್ಮಿದ್ದಾರೆ. ಇದು ಕೇವಲ ಅಂಕಿ-ಅಂಶಗಳ ಸಾಧನೆಯಲ್ಲ, ಬದಲಿಗೆ ಅವರ ಅಚಲ ಸಿದ್ಧಾಂತ ಮತ್ತು ಜನಪ್ರಿಯತೆಯ ಪ್ರತೀಕವಾಗಿದೆ. ​ಅರಸು ಮತ್ತು ಸಿದ್ದರಾಮಯ್ಯ: ಸಮಾಜಮುಖಿ ಹೋಲಿಕೆ ​ದೇವರಾಜ ಅರಸು ಅವರು ಹೇಗೆ ಭೂ ಸುಧಾರಣೆ ಮತ್ತು ಹಿಂದುಳಿದ ವರ್ಗಗಳ ಸಬಲೀಕರಣದ ಮೂಲಕ ‘ಕರ್ನಾಟಕದ ಕ್ರಾಂತಿಕಾರಿ ನಾಯಕ’ ಎನಿಸಿಕೊಂಡರೋ, ಸಿದ್ದರಾಮಯ್ಯನವರು ‘ಅಹಿಂದ’ (ಅಲ್ಪಸಂಖ್ಯಾತ, ಹಿಂದುಳಿದ ಮತ್ತು ದಲಿತ) ವರ್ಗಗಳ ಧ್ವನಿಯಾಗಿ ಅದೇ ಹಾದಿಯಲ್ಲಿ ಮುನ್ನಡೆದಿದ್ದಾರೆ. ಮೈಸೂರು ಮಣ್ಣಿನ ಈ ಇಬ್ಬರು ನಾಯಕರು ಶೋಷಿತ ಸಮುದಾಯಗಳಿಗೆ ರಾಜಕೀಯ ಅಸ್ತಿತ್ವ ತಂದುಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ​ಉತ್ತಮ ಆಡಳಿತದ ಪ್ರಮುಖ ಮೈಲಿಗಲ್ಲುಗಳು ​ಸಿದ್ದರಾಮಯ್ಯನವರ ಆಡಳಿತವನ್ನು ಶ್ಲಾಘಿಸಲು ಮುಖ್ಯ ಕಾರಣ ಅವರ ‘ಜನಪರ ಯೋಜನೆಗಳು’. ಅವರ ಆಡಳಿತ ವೈಖರಿಯಲ್ಲಿ ಆರ್ಥಿಕ ಶಿಸ್ತು ಮತ್ತು ಸಾಮಾಜಿಕ ಭದ್ರತೆಯ ಸುಂದರ ಸಮನ್ವಯವಿದೆ: ​ಭಾಗ್ಯಗಳ ಸರಣಿ: ಮೊದಲ ಅವಧಿಯಲ್ಲಿ (2013-18) ಜಾರಿಗೆ ತಂದ ‘ಅನ್ನಭಾಗ್ಯ’, ‘ಕ್ಷೀರಭಾಗ್ಯ’, ‘ಇಂದಿರಾ ಕ್ಯಾಂಟೀನ್’ನಂತಹ ಯೋಜನೆಗಳು ಬಡವರ ಹಸಿವು ನೀಗಿಸುವಲ್ಲಿ ಮೈಲಿಗಲ್ಲಾದವು. ​ಪಂಚ ಗ್ಯಾರಂಟಿಗಳು: ಎರಡನೇ ಅವಧಿಯಲ್ಲಿ ಜಾರಿಗೆ ತಂದ ಐದು ಗ್ಯಾರಂಟಿಗಳು (ಗೃಹಲಕ್ಷ್ಮಿ, ಶಕ್ತಿ, ಗೃಹಜ್ಯೋತಿ, ಅನ್ನಭಾಗ್ಯ, ಯುವನಿಧಿ) ಇಂದು ರಾಜ್ಯದ ಕೋಟ್ಯಂತರ ಕುಟುಂಬಗಳಿಗೆ ಆರ್ಥಿಕ ಆಸರೆಯಾಗಿವೆ. ​ಆರ್ಥಿಕ ತಜ್ಞತೆ: ರಾಜ್ಯದ ಇತಿಹಾಸದಲ್ಲೇ ಅತಿ ಹೆಚ್ಚು ಅಂದರೆ 16 ಬಾರಿ ಬಜೆಟ್ ಮಂಡಿಸಿದ ಹೆಗ್ಗಳಿಕೆ ಇವರದು. ಆರ್ಥಿಕ ಕೊರತೆಯನ್ನು ಹತೋಟಿಯಲ್ಲಿಟ್ಟುಕೊಂಡು ಅಭಿವೃದ್ಧಿ ಕೆಲಸಗಳಿಗೆ ಹಣ ಮೀಸಲಿಡುವ ಇವರ ಚಾಣಕ್ಯತನ ಮೆಚ್ಚುವಂತದ್ದು. ​ನುಡಿದಂತೆ ನಡೆದ ಸರ್ಕಾರ: ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಗಳನ್ನು ಈಡೇರಿಸುವಲ್ಲಿ ಅವರು ತೋರಿದ ಬದ್ಧತೆ ಮತದಾರರಲ್ಲಿ ಅವರ ಮೇಲಿನ ವಿಶ್ವಾಸವನ್ನು ಹೆಚ್ಚಿಸಿದೆ. ​ತಳಮಟ್ಟದ ನಾಯಕತ್ವ ​ಸಿದ್ದರಾಮಯ್ಯನವರು ಯಾವುದೇ ‘ಹೈಕಮಾಂಡ್’ ನೆರಳಿನಲ್ಲದೆ, ಹಳ್ಳಿ ಹಳ್ಳಿಯ ಜನರೊಂದಿಗೆ ಬೆರೆತು ಬೆಳೆದ ನಾಯಕ. ಅವರ ನೇರ ನುಡಿ, ತರ್ಕಬದ್ಧ ಮಾತುಗಳು ಮತ್ತು ಸಂವಿಧಾನದ ಮೇಲಿನ ಗೌರವ ಅವರನ್ನು ಶ್ರೇಷ್ಠ ಸಂಸದೀಯ ಪಟುವನ್ನಾಗಿ ಮಾಡಿದೆ. ​”ಅಧಿಕಾರ ಎನ್ನುವುದು ಕೇವಲ ಕುರ್ಚಿಯಲ್ಲ, ಅದು ಬಡವರ ಕಣ್ಣೀರು ಒರೆಸುವ ಅವಕಾಶ” ಎಂಬ ಸಿದ್ಧಾಂತದೊಂದಿಗೆ ಅವರು ಮುನ್ನಡೆಯುತ್ತಿರುವುದು ಇಂದಿನ ರಾಜಕಾರಣಿಗಳಿಗೆ ಮಾದರಿಯಾಗಿದೆ. ​ಸಮಾರೋಪ ​ದೇವರಾಜ ಅರಸು ಅವರ ದಾಖಲೆಯನ್ನು ಸರಿಗಟ್ಟಿರುವ ಸಿದ್ದರಾಮಯ್ಯನವರು, ಕರ್ನಾಟಕದ ಸಾಮಾಜಿಕ ನಕ್ಷೆಯಲ್ಲಿ ತಮ್ಮದೇ ಆದ ಅಳಿಸಲಾಗದ ಛಾಪನ್ನು ಒತ್ತಿದ್ದಾರೆ. ಅವರ ಈ ಪಯಣ ಕೇವಲ ಸುದೀರ್ಘ ಅವಧಿಯದ್ದಷ್ಟೇ ಅಲ್ಲದೆ, ‘ಸಮ ಸಮಾಜ’ದ ನಿರ್ಮಾಣದ ಹಾದಿಯಲ್ಲಿ ಒಂದು ಭರವಸೆಯ ನಡಿಗೆಯಾಗಿದೆ.

error: Content is protected !!