ಮುಹಮ್ಮದ್ ಪೈಗಂಬರ್ ಅವರು ಮನುಕುಲದ ಉದ್ಧಾರಕ್ಕಾಗಿ ಶ್ರಮಿಸಿದ ಮಹಾನ್ ಮಾನವತಾವಾದಿ – ಮಿಥುನ್‌ ಜಿ ಪಾಟೀಲ

ಮುಹಮ್ಮದ್ ಪೈಗಂಬರ್ ಅವರು ಮನುಕುಲದ ಉದ್ಧಾರಕ್ಕಾಗಿ ಶ್ರಮಿಸಿದ ಮಹಾನ್ ಮಾನವತಾವಾದಿ – ಮಿಥುನ್‌ ಜಿ ಪಾಟೀಲ

ಕೊಡತಗೇರಿ ಎಕ್ಸ್‌ಪ್ರೆಸ್‌ ಡಿಜಿಟಲ್ ಹೌಸ್‌

ಗಜೇಂದ್ರಗಡ: ಇಸ್ಲಾಂ ಧರ್ಮದ ಸ್ಥಾಪಕರಾದ ಪ್ರವಾದಿ ಮುಹಮ್ಮದ್ ಪೈಗಂಬರ್ ಅವರು ಮನುಕುಲದ ಉದ್ಧಾರಕ್ಕಾಗಿ ಶ್ರಮಿಸಿದ ಮಹಾನ್ ಮಾನವತಾವಾದಿಯಾಗಿದ್ದು, ವಿಶ್ವಕ್ಕೆ ಸಮಾನತೆಯ ಸಂದೇಶ ಸಾರಿದ್ದಾರೆ’ ಎಂದು ತಾಲೂಕಾ ಗ್ಯಾರಂಟಿ ಸಮಿತಿಯ ಅಧ್ಯಕ್ಷರಾದ ಮಿಥುನ್ ಪಾಟೀಲ ಹೇಳಿದರು.

ಅವರು  ಸಮೀಪದ ಗೋಗೇರಿ ಗ್ರಾಮದಲ್ಲಿ ಅಂಜುಮನ್ ಇಸ್ಲಾಂ ಕಮೀಟಿ ಹಾಗೂ ಬಾಗವಾನ‌ ವೆಲ್ಫೇರ್ ಸೊಸೈಟಿ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಲೋಕಾನುಗ್ರಹಿ ಪ್ರವಾದಿ ಪೈಗಂಬರ್ ಮುಹಮ್ಮದ್ ಮುಸ್ತಫಾರ 1500 ನೇ ಜನ್ಮ ದಿನಾಚರಣೆಯ ನಿಮಿತ್ಯ ಹಮ್ಮಿಕೊಂಡಿದ್ದ. 
ಈದ- ಮೀಲಾದ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಉಪನ್ಯಾಸಕರಾಗಿ ಆಗಮಿಸಿದ್ದ ಕುಷ್ಟಗಿ ಜಮಾತೆ ಇಸ್ಲಾಂ‌ ಹಿಂದ್ ಸಂಚಾಲಕ ಮೊಹಮ್ಮದ ಅಫ್ತಾಬ್ ಮಾತನಾಡಿ
ಭೌತಿಕ ಮತ್ತು ಆಧ್ಯಾತ್ಮಿಕವಾಗಿ ಯಾರ ಜೀವನದ ಅನುಸರಣೆಯಿಂದ ಮಾನವನಿಗೆ ಶಾಂತಿ ಸಮಾಧಾನಗಳು ಪ್ರಾಪ್ತವಾಗುವುದೋ, ಅಂತಹ ವ್ಯಕ್ತಿಯ ಹೆಜ್ಜೆ ಗುರುತುಗಳನ್ನು ಅರಸಿ ಅದರಂತೆ ಜೀವನ ರೂಪಿಸುವುದು ಮಾನವರಾದ ನಮ್ಮೆಲ್ಲರ ಮುಲಭೂತ ಕರ್ತವ್ಯವಾಗಿದೆ, ಮಾನವೇತಿಹಾಸದ ಶ್ರೇಷ್ಠ ವ್ಯಕ್ತಿಗಳ ಜೀವನಗಾಥೆಯ ವಿಶ್ಲೇಷಣೆಯಲ್ಲಿ ,ಅತೀ ಹೆಚ್ಚು ಮೌಲ್ಯಗಳು ಗುರುತಿಸಲ್ಪಟ್ಟಿರುವುದು ಪ್ರವಾದಿ ಮುಹಮ್ಮದ್(ಸ)ರ ಬದುಕಿನ ವೃತ್ತಾಂತದಿಂದಾಗಿದೆ ಎಂಬುದು ಜಗತ್ತಿನ ಖ್ಯಾತ ಇತಿಹಾಸಕಾರರು, ತತ್ವಜ್ಞಾನಿಗಳು ಮತ್ತು ಚಿಂತಕರು ಒಪ್ಪಿಕೊಂಡ ಸತ್ಯವಾಗಿದೆ. ಅವರ ಜೀವನ ಚರ್ಯೆಯು ಮನುಷ್ಯನ ವೈಯಕ್ತಿಕ, ಆರ್ಥಿಕ ಮತ್ತು ಸಾಮಾಜಿಕ ಬದುಕಿಗೆ ಸಂಪೂರ್ಣವಾದ ಮಾರ್ಗದರ್ಶನವಾಗಿದೆ ಎಂದು‌ ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಂಜುಮನ್ ಕಮೀಟಿಯ ಅಧ್ಯಕ್ಷರಾದ ದಾವಲಸಾಬ ಬಾಗವಾನ ವಹಿಸಿದ್ದರು. ಮುಖ್ಯೋಪಾಧ್ಯಾಯರಾದ ಆರ್ ಐ ಬಾಗವಾನ‌ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯ ಮೇಲೆ ವೇದಮೂರ್ತಿ ಶಂಕ್ರಯ್ಯ ಮೇಟಿಮಠ, ಹೇಮಾಪತಿ ಭೋಸಲೆ, ಹನಮಪ್ಪ ಹೊರಪೇಟಿ, ಮಾರ್ತಾಂಡಪ್ಪ ಹದ್ದಣ್ಣವರ, ಕಳಕಪ್ಪ ಮಾದರ, ಮುತ್ತಣ್ಣ ಲ್ಯಾವಕ್ಕಿ, ಚೇರಮನ್ನರಾದ ಹುಸೇನಸಾಬ ಬಡಿಗೇರ, ವಾಯ್ಸಚೇರಮನ್ನರಾದ ಶಾಬುದ್ದೀನ್ ನಧಾಪ್, ಕಾರ್ಯದರ್ಶಿಗಳಾದ ಮೆಹಬೂಬ ಬಾಗವಾನ, ರಾಜೇಸಾಬ ಬಡಿಗೇರ, ಕೆ ಕೆ ಬಾಗವಾನ, ಮಲ್ಲಿಕಾರ್ಜುನ ಗಾರಗಿ, ಆಯ್ ಎಚ್ ಬಾಗವಾನ, ಬಾಗವಾನ ಕಮೀಟಿಯ ಅಧ್ಯಕ್ಷರಾದ ಸೈದುಸಾಬ ಬೇವಿನಗಿಡದ, ಉಪಾಧ್ಯಕ್ಷರಾದ ಸಿಕಂದರ ಬಾಗವಾನ, ಕಾರ್ಯದರ್ಶಿ ಬಶೀರ ಬದಾಮಿ, ಗ್ರಾಂ.ಪಂ ಸದಸ್ಯರಾದ ಇಮಾಮಸಾಬ‌ ಬಾಗವಾನ, ಹಜರತ್ ಬಾಗವಾನ, ಎಂ ಡಿ‌ ಬಾಗವಾನ ಇದ್ದರು. ಶಿಕ್ಷಕರಾದ ಹುಸೇನ ಬಾಗವಾನ‌ ನಿರೂಪಿಸಿದರು, ಇಮಾಮಸಾಬ ಸ್ವಾಗತಿಸಿದರು, ಮಹೆಬೂಬ ವಂದಿಸಿದರು.

error: Content is protected !!