ರಸ್ತೆ ಅಗಲೀಕರಣ ಕಾಮಗಾರಿಗೆ ಶಾಸಕ ಜಿ.ಎಸ್ ಪಾಟೀಲ ಭೂಮಿಪೂಜೆ ನೆರವೇರಿಸಿದರು
ಕೊಡತಗೇರಿ ಎಕ್ಸಪ್ರೆಸ್ ಡಿಜಿಟಲ್ ಹೌಸ್
ಗಜೇಂದ್ರಗಡ: ‘ಗೋಗೇರಿ ಗ್ರಾಮದ ಮೂಲಕ ಹಾದು ಹೋಗಿರುವ ಸಿಂಧ-ನೂರ-ಹೆಮ್ಮಡಗಾರಾಜ್ಯ ಹೆದ್ದಾರಿ-30ರಲ್ಲಿ ಗ್ರಾಮದ ಹೊರ ವಲಯದ ತಿರುವುಗಳು ಅಪಘಾತ ವಲಯಗಳಾಗಿದ್ದು, ಅಪಘಾತ ತಪ್ಪಿಸುವ ನಿಟ್ಟಿನಲ್ಲಿ ತಿರುವುಗಳಲ್ಲಿ ರಸ್ತೆ ಅಗಲಿಕರಣಕ್ಕೆ ಕ್ರಮ ಕೈಗೊಳ್ಳಲಾಗಿದೆ. ಗುತ್ತಿಗೆದಾರರು ಸಮಯಕ್ಕೆ ಸರಿಯಾಗಿ ಗುಣಮಟ್ಟದ ಕಾಮಗಾರಿ ನಡೆಸಬೇಕು’ ಎಂದು ಶಾಸಕ ಜಿ.ಎಸ್. ಪಾಟೀಲ ಹೇಳಿದರು.
ಸಮೀಪದ ಗೋಗೇರಿ ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆ ವತಿಯಿಂದ ₹1.75 ಕೋಟಿ ವೆಚ್ಚದಲ್ಲಿ ಸಿಂಧನೂರ-ಹೆಮ್ಮಡಗಾ ರಾಜ್ಯ ಹೆದ್ದಾರಿ-30ರ 1.24 ಕಿ.ಮೀ ರಸ್ತೆ ಅಗಲೀಕರಣ ಕಾಮಗಾರಿಗೆ ಮಂಗಳವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ಗೋಗೇರಿ ಗ್ರಾಮದ ಹೊಸ ಬಡಾವ-ಣೆಯಲ್ಲಿರುವ ಕೆರೆ ಹಾಗೂ ನಾಗರಸಕೊಪ್ಪ
ಗ್ರಾಮದ ಕೆರೆಗೆ ಬಾಗಿನ ಅರ್ಪಿಸಿದರು. ನಾಗರಸಕೊಪ್ಪ ಗ್ರಾಮದಲ್ಲಿ ರಾಜ್ಯ ಧಾರ್ಮಿಕ ದತ್ತಿ ಇಲಾಖೆ ಅನುದಾನದಲ್ಲಿ ₹5 ಲಕ್ಷ ವೆಚ್ಚದಲ್ಲಿ ದ್ಯಾಮಮ್ಮನ ದೇವಸ್ಥಾನ ಜೀರ್ಣೋದ್ದಾರ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದರು.
ಸಿದ್ದಣ್ಣಬಂಡಿ, ಶಿವರಾಜ ಘೋರ್ಪಡೆ, ಶ್ರೀಧರ ಬಿದರಳ್ಳಿ, ಹಸನಸಾಬ ತಟಗಾರ, ವಿ.ಬಿ.ಸೋಮನಕಟ್ಟಿಮಠ, ಬಸವರಾಜ ನವಲಗುಂದ, ಹನಮಂತಪ್ಪ ಹೊರಪೇಟಿ, ಬಸವರಾಜ ಮೂಲಿಮನಿ, ಶಾರದಾ ರಾಠೋಡ, ಸಿದ್ದು ಗೊಂಗಡಶೇಟ್ಟಿ, ಮಲ್ಲಿಕಾರ್ಜುನ ಗಾರಗಿ, ಐ.ಎಚ್. ಬಾಗವಾನ, ಕೆ.ಎಸ್. ಕೊಡತಗೇರಿ, ಮುತ್ತಣ್ಣ ಲ್ಯಾವಕ್ಕಿ, ಹೊಳಿಯಪ್ಪ ದಮ್ಮೂರ, ಈರಣ್ಣ ಸೊಬರದ, ಮುತ್ತಪ್ಪ ಗುಜ್ಜಲ್, ಮೌನೇಶಪ್ಪ ಬಡಿಗೇರ, ಶಂಕ್ರಪ್ಪ ಬಡಿಗೇರ, ವೀರಭದ್ರಯ್ಯ ಹಿರೇಮಠ, ಲೋಕೋಪಯೋಗಿ ಇಲಾಖೆ ಮಹೇಶ ರಾಠೋಡ, ಗ್ರಾಮ ಪಂಚಾಯ್ತಿ ಪಿಡಿಒ ಶರಣಪ್ಪ ನರೇಗಲ್ಲ ಇದ್ದರು.
More Stories
ಅಕ್ರಮ ಅಕ್ಕಿ ಸಂಗ್ರಹ: 3.6 ಕ್ವಿಂಟಲ್ ಪಡಿತರ ಅಕ್ಕಿ ವಶಕ್ಕೆ: ಆರೋಪಿ ಅರೆಸ್ಟ್!
ಭಾರತದ ಸ್ವತಂತ್ರ ಸಂಗ್ರಾಮಕ್ಕೆ ಅನೇಕರ ತ್ಯಾಗವಿದೆ – ಡಾ.ಹನಸಿ
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮ ಅಭಿವೃದ್ಧಿ ಯೋಜನೆ ವತಿಯಿಂದ ಅರಸನ ಬಾವಿ ಸ್ವಚ್ಛತೆ ಕಾರ್ಯಕ್ರಮ