ದಿನಗೂಲಿ‌ನೌಕರ ಕೋಟಿ ಕೋಟಿ ಕುಳ ಲೋಕಾ ಬಲೆಗೆ ಬಿದ್ದ ಬಂಡಿಹಾಳದ ಕಳಕಪ್ಪ

ದಿನಗೂಲಿ‌ನೌಕರ ಕೋಟಿ ಕೋಟಿ ಕುಳ ಲೋಕಾ ಬಲೆಗೆ ಬಿದ್ದ ಬಂಡಿಹಾಳದ ಕಳಕಪ್ಪ

ಕೊಡತಗೇರಿ ಎಕ್ಸಪ್ರೆಸ್ ಡಿಜಿಟಲ್ ಹೌಸ್

ಕೊಪ್ಪಳ : ಅಭಿವೃದ್ಧಿ ನಿಯಮಿತದಲ್ಲಿ” (KRIDL) ಹೊರಗುತ್ತಿಗೆ ಆಧಾರದಲ್ಲಿ ದಿನಗೂಲಿ ನೌಕರನಾಗಿದ್ದ ಕಳಕಪ್ಪ ನಿಡುಗುಂದಿ ಎಂಬವರ ಬಳಿ ಲೋಕಾಯುಕ್ತರ ದಾಳಿಯಲ್ಲಿ ಕೋಟಿ ಕೋಟಿ ರೂ. ಗಳ ಆಸ್ತಿ ಪತ್ತೆಯಾಗಿರುವುದು ತಿಳಿದುಬಂದಿದೆ.72 ಕೋಟಿ ರೂ. ಅಕ್ರಮ ವಿಚಾರವಾಗಿ ದೂರು ನೀಡಿದ ಹಿನ್ನಲೆ ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಯಮಿತದಲ್ಲಿ ಸುಮಾರು 72 ಕೋಟಿ ರೂ. ಅಕ್ರಮ ಎಸಗಲಾಗಿದೆ ಎಂಬ ವಿಚಾರವಾಗಿ ಸ್ವತಃ ಅಧಿಕಾರಿಗಳು ಕಳೆದ ವಾರ ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಚರಂಡಿ ಕಾಮಗಾರಿ, ಕುಡಿಯುವ ನೀರು ಕಾಮಗಾರಿ ಸೇರಿದಂತೆ ವಿವಿಧ ಕಾಮಗಾರಿಗಳದಲ್ಲಿ ಅಕ್ರಮದ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ. ಈ ಸಂಬಂಧ ಕೊಪ್ಪಳ ಕೆಆರ್‌ಐಡಿಎಲ್ ಇಇ ಆಗಿದ್ದ ಝಡ್.ಎಂ ಚಿಂಚೋಳಿಕರ ಹಾಗೂ ಹೊರಗುತ್ತಿಗೆ ನೌಕರ ಕಳಕಪ್ಪ ನೀಡಗುಂದಿ ವಿರುದ್ಧ ದೂರು ದಾಖಲಾಗಿತ್ತು. ಈ ದೂರಿನ ಆಧಾರದ ಹಿನ್ನೆಲೆಯಲ್ಲಿ ಲೋಕಾಯುಕ್ತ ದಾಳಿ ನಡೆದಿದೆ ಎನ್ನಲಾಗಿದೆ.

ಕೆ ಆರ್ ಐ ಡಿ ಎಲ್ ನಲ್ಲಿ ಕಳಕಪ್ಪ ನಿಡಗುಂದಿ ಅವರಿಗೆ ಕಸ ಗೂಡಿಸುವ ಕೇವಲ 15 ಸಾವಿರ ರೂ. ಸಂಬಳವಿತ್ತು. ಆದರೆ ಲೋಕಾಯುಕ್ತ ಪೊಲೀಸರ ದಾಳಿಯಲ್ಲಿ ಇವರು ಕೋಟ್ಯಧಿಪತಿ ಎಂದು ತಿಳಿದು ಬಂದಿದ್ದು, ಇವರ ಬಳಿ ಇರುವ ಸಂಪತ್ತು ಲೋಕಾಯುಕ್ತ ಪೊಲೀಸರು ಹಾಗೂ ಇಡಿ ಕೊಪ್ಪಳ ಜಿಲ್ಲೆಯನ್ನೇ ಬೆಚ್ಚಿ ಬೀಳಿಸಿದೆ ಎನ್ನಬಹುದು.ಇವರ ಒಡೆತನದಲ್ಲಿ ಕೊಪ್ಪಳ ಮತ್ತು ಭಾಗ್ಯನಗರದಲ್ಲಿ 24 ಮನೆಗಳು, ಆರು ನಿವೇಶನಗಳು ಜೊತೆ 40 ಎಕರೆ ಕೃಷಿ ಜಮೀನು, 350 ಗ್ರಾಂ ಚಿನ್ನಾಭರಣ, ಒಂದೂವರೆ ಕೆ.ಜಿ. ಬೆಳ್ಳಿಯ ಆಭರಣಗಳು, ಎರಡು ಬೈಕ್ ಮತ್ತು ಎರಡು ಕಾರುಗಳು ಮತ್ತು ತನ್ನ ತಮ್ಮ ಹಾಗೂ ತಮ್ಮನ ಹೆಂಡತಿಯ ಹೆಸರಿನಲ್ಲಿ ಬೇನಾಮಿ ಆಸ್ತಿ ಇರುವುದಾಗಿ ಲೋಕಾಯುಕ್ತರ ದಾಳಿಯಲ್ಲಿ ತಿಳಿದು ಬಂದಿದೆ.

error: Content is protected !!