PSI ಸೋಮನಗೌಡ್ರರವರಿಗೆ ಠಾಣೆಯಲ್ಲಿ ಹೂ ಮಳೆ ಸುರಿಸಿ‌ ಬೀಳ್ಕೊಡುಗೆ

PSI ಸೋಮನಗೌಡ್ರರವರಿಗೆ ಠಾಣೆಯಲ್ಲಿ ಹೂ ಮಳೆ ಸುರಿಸಿ‌ ಬೀಳ್ಕೊಡುಗೆ

ಕೊಡತಗೇರಿ ಎಕ್ಸಪ್ರೆಸ್ ಡಿಜಿಟೆಲ್ ಹೌಸ್ 

ಗಜೇಂದ್ರಗಡ : ಸುಮಾರು ಎರಡು ವರ್ಷಗಳ ಹಿಂದೆ ಗಜೇಂದ್ರಗಡ ಠಾಣೆಯಲ್ಲಿ ಪಿಎಸ್ಐ ಸೋಮನಗೌಡ್ರು ಕರ್ತವ್ಯವನ್ನು ವಹಿಸಿಕೊಂಡಿದ್ದರು. ಅವರು ಇಂದು ವರ್ಗಾವಣೆಯಾಗಿದೆ ನಿಮಿತ್ಯ ಬೆಳಗಾವಿ ಜಿಲ್ಲೆಗೆ ವರ್ಗಾವಣೆಗೊಂಡ ಹಿನ್ನೆಲೆಯಲ್ಲಿ ರೋಣದ ಸಿಪಿಐ ಸಾಹೇಬರು ಹಾಗೂ ಪೊಲೀಸ್ ಸಿಬ್ಬಂದಿಗಳು ಸೋಮನಗೌಡರಿಗೆ ಹೂ ಮಳೆಯನ್ನು ಸುರಿಸುವುದರ ಮೂಲಕ ಆತ್ಮೀಯವಾಗಿ ಬೀಳ್ಕೋಡುಗೆ ಮಾಡಿದರು. ಈ ಕ್ಷಣವನ್ನು ಕಂಡು ಭಾವುಕರಾದ ಸೋಮನಗೌಡ್ರು ನಾನು ಗಜೇಂದ್ರಗಡದಲ್ಲಿ ಸೇವೆಯನ್ನು ಸಲ್ಲಿಸಿದ ಕ್ಷಣವನ್ನು ಮರೆಯಲಾಗದು ನಿಮ್ಮೆಲ್ಲರ

ಆತ್ಮೀಯತೆಯನ್ನು ನಾನು ಉಳಿಸಿಕೊಳ್ಳುತ್ತೇನೆ ಎಂದಿಗೂ ಕೂಡ ನಾನು ಗಜೇಂದ್ರಗಡದ ನೆನಪು ಮರೆಯಲಾಗುವುದಿಲ್ಲ ನನಗೆ ಸಹಕರಿಸಿದಂತಹ ಎಲ್ಲ ಹಿರಿಯ ಅಧಿಕಾರಿಗಳಿಗೂ ಕೂಡ ನಾನು ಧನ್ಯವಾದಗಳು ಅರ್ಪಿಸುತ್ತೇನೆ.

ಅದೇ ರೀತಿಯಾಗಿ ಗಜೇಂದ್ರಗಡದ ಸುತ್ತಮುತ್ತಲಿನ ಎಲ್ಲಾ ಗ್ರಾಮಸ್ಥರು ಗಜೇಂದ್ರಗಡ ನಗರದ ಎಲ್ಲ ನಾಗರಿಕರು ನನ್ನ ಮೇಲೆ ಅಭಿಮಾನ ಇಟ್ಟು ನನ್ನನ್ನು ಆತ್ಮೀಯ ದಿಂದ ಸನ್ಮಾನಿಸಿ ಬಿಳ್ಕೊಟ್ಟಿದ್ದೀರಿ ನಿಮ್ಮ ಋಣವನ್ನು ನಾನು ತೀರಿಸಲಾಗುವುದಿಲ್ಲ ನಿಮ್ಮೊಂದಿಗೆ ನಾನು ಯಾವಾಗಲೂ ಜೊತೆಯಾಗಿರುತ್ತೇನೆ ಎಂದು ಹೇಳಿದರು.

ಈ ಸಂಧರ್ಬದಲ್ಲಿ ಪೋಲಿಸ ಅಧಿಕಾರಿಗಳು ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

error: Content is protected !!