ಕುಷ್ಠಗಿಯಲ್ಲಿ ತವರು ಬಿಟ್ಟ ತಂಗಿ ನಾಟಕ ಅಮೋಘ ಪ್ರದರ್ಶನ
ಕೊಡತಗೇರಿ ಎಕ್ಸಪ್ರೇಸ್ ಡಿಜಿಟಲ್ ಡೆಸ್ಕ್
ಕುಷ್ಠಗಿ :ಟಿವಿ ಮತ್ತು ಸಿನಿಮಾಗಳ ಅಬ್ಬರದಾಗ ನಾಟಕಗಳು ಮಂಕಾಗುತ್ತಿವೆ ಎಂದು ಜನರು ಅಂದು ಕೊಂಡಿದ್ದರು ಮತ್ತು ಈ ಸಮಾಜಿಕ ಜಾಲತಾಣಗಳ ಮದ್ಯ ನಾಟಕಗಳು ತನ್ನತನವನ್ನು ಇಟ್ಟುಕೊಂಡು ಮುನ್ನಗ್ಗುತ್ತಿವೆ. ಅಂತಹ ಶ್ರೀ ಗುರು ಕುಮಾರೇಶ್ವರ ನಾಟ್ಯ ಸಂಘ ಹಾನಗಲ್ ಕುಷ್ಠಗಿ ಪಟ್ಟಣದಲ್ಲಿ ಭರ್ಜರಿ ಪ್ರದರ್ಶನ ವನ್ನು ಮಾಡುತ್ತಿದ್ದು ಸದ್ಯ ಇವರ ನಾಟ್ಯ ಸಂಘದಿಂದ ತವರು ಬಿಟ್ಟ ತಂಗಿ ಎಂಬ ಕೌಟುಂಬಿಕ ನಾಟಕ ಭರ್ಜರಿ ಪ್ರದರ್ಶನ ಕಾಣುತ್ತಿದ್ದು ಮಹಿಳೆಯರು ಕೂಡ ಈ ನಾಟಕವನ್ನು ನೋಡಿ ಥೇಟರ ತುಂಬ ಜನಸಾಗರ ನಾಟಕವನ್ನು ನೋಡುತ್ತಿದ್ದು ನಾಟಕ ಉತ್ತಮಪ್ರದರ್ಶನ ಕಾಣುತ್ತಿದೆ ಈ ನಾಟಕದಲ್ಲಿ ಕುಟಂಬ ಸಮೇತ ಕುಳಿತು ನೋಡುವ ನಾಟಕವಾಗಿದ್ದು ಅರ್ಥಗರ್ಭಿತ
ನಾಟಕವಾಗಿದೆ. ಈ ನಾಟಕವು ಒಂದು ಸಮಾಜಿಕ ಸಂದೇಶ ನೀಡುವ ನಾಟಕವಾಗಿದ್ದು . ಈ ನಾಟಕದಲ್ಲಿ ಮುಖ್ಯ ಪಾತ್ರದಲ್ಲಿ ಅಭಿನಯಿಸಿರುವ ಭಾರತಿಯವರು ತಂಗಿಯ ಪಾತ್ರಕ್ಕೆ ಜೀವ ತುಂಬಿದ್ದಾರೆ ಅತ್ಯುತ್ತಮ ಪಾತ್ರವನ್ನು ಮಾಡಿದ್ದಾರೆ. ಅದೇ ರೀತಿಯಾಗಿ ಅಂಬ್ರೇಶನ ಅಣ್ಣನ ಪಾತ್ರವನ್ನು ಶರತ್ ರವರು ಅಚ್ಚುಕಟ್ಟಾಗಿ ಮಾಡಿದ್ದಾರೆ . ಅದೇ ರೀತಿಯಾಗಿ ಹಾಸ್ಯಪಾತ್ರದಲ್ಲಿ ಕಾಣಿಸಿಕೊಂಡ ಗದಗಿನ ಕಲ್ಪನಾ ಅವರು ಹಾಸ್ಯಪಾತ್ರದಲ್ಲಿ ಜನರನ್ನು ರಂಜಿಸಿದ್ದಾರೆ.
ಪ್ರಾಚಾರ್ಯರ ಪಾತ್ರವನ್ನು ಅದ್ಬುತ ವಾಗಿ ನಟಿಸಿರುವ ಕರಿಯಪ್ಪನವರು ನಾಟಕದಲ್ಲಿ ಅದ್ಬುತ್ ಪಾತ್ರವನ್ನು ಮಾಡಿದ್ದಾರೆ . ಅವರು ಕಾಲೇಜಿನ ವಿದ್ಯಾರ್ಥಿ ಗಳಿಗೆ ಬುದ್ದಿ ಹೇಳಿ ಸಮಾಜದಲ್ಲಿ ಮಕ್ಕಳು ಯಾವಾ ರೀತಿ ಬದಕಬೇಕು ಎಂಬವದನ್ನು ತಮ್ಮ ಅಭಿನಯದ ಮೂಲಕ ನಾಟಕದಲ್ಲಿ ತೋರಿಸಿಕೊಟ್ಟಿದ್ದಾರೆ.
ಎಲ್ಲರೂ ಪಾತ್ರಕ್ಕೆ ಜೀವ ತುಂಬಿದ್ದು ನಾಟಕ ಉತ್ತಮ ಪ್ರದರ್ಶನ ಕಾಣುತ್ತಿದೆ.
More Stories
ಸೈರೆಂಟಿಕಾ ಗಾಳಿ ವಿದ್ಯುತ್ ಕಂಪನಿಗಳಿಂದ ರೈತರಿಗೆ ಪಂಗನಾಮ ಶಾಸಕ ಆಪ್ತ ಗುತ್ತಿಗೆದಾರ ಮಲ್ಲಿಕಾರ್ಜುನ ಕುಮ್ಮಕ್ಕು
ಕನಕ ಭವನ ನಿರ್ಮಾಣಕ್ಕೆ ನಾಗೇಶ್ ಲಕ್ಕಲಕಟ್ಟಿ ಅವರು ಒಂದು ಲಕ್ಷ ರೂಪಾಯಿಗೆ ದೇಣಿಗೆ
ಪರೀಕ್ಷೆಯಲ್ಲಿ ಬ್ರಾಹ್ಮಣ ವಿದ್ಯಾರ್ಥಿಗಳ ಜನಿವಾರ ತೆಗೆಸಿದಕ್ಕೆ ಜೋಶಿ ಖಂಡನೆ