
ಥೈರಾಯ್ಡ್‌ಗೆ ಶಾಶ್ವತ ಪರಿಹಾರ
ಕೊಡತಗೇರಿ ಎಕ್ಸ್‌ಪ್ರೆಸ್ ಡಿಜಿಟಲ್ ಡೆಸ್ಕ್
ಮಾನವ ಶರೀರದಲ್ಲಿ ಹಲವಾರು ಗ್ರಂಥಿಗಳಿವೆ. ಈ ಪೈಕಿ ಥೈರಾಯ್ಡ್ ಗ್ರಂಥಿ ಕೂಡ ಮುಖ್ಯವಾದುದು. ಇದು ನಮ್ಮ ದೇಹದ ಪ್ರತಿಯೊಂದು ಕಾರ್ಯಗಳನ್ನು ನಿಯಂತ್ರಿಸುತ್ತದೆ.
ಮಾನವ ಶರೀರದಲ್ಲಿ ಹಲವಾರು ಗ್ರಂಥಿಗಳಿವೆ. ಈ ಪೈಕಿ ಥೈರಾಯ್ಡ್ ಗ್ರಂಥಿ ಕೂಡ ಮುಖ್ಯವಾದುದು. ಇದು ನಮ್ಮ ದೇಹದ ಪ್ರತಿಯೊಂದು ಕಾರ್ಯಗಳನ್ನು ನಿಯಂತ್ರಿಸುತ್ತದೆ.
ಥೈರಾಯ್ಡ್‌ಗೆ ಶಾಶ್ವತ ಪರಿಹಾರ
ಮಾನವ ಶರೀರದಲ್ಲಿ ಹಲವಾರು ಗ್ರಂಥಿಗಳಿವೆ. ಈ ಪೈಕಿ ಥೈರಾಯ್ಡ್ ಗ್ರಂಥಿ ಕೂಡ ಮುಖ್ಯವಾದುದು. ಇದು ನಮ್ಮ ದೇಹದ ಪ್ರತಿಯೊಂದು ಕಾರ್ಯಗಳನ್ನು ನಿಯಂತ್ರಿಸುತ್ತದೆ.
ಮಾನವ ಶರೀರದಲ್ಲಿ ಹಲವಾರು ಗ್ರಂಥಿಗಳಿವೆ. ಈ ಪೈಕಿ ಥೈರಾಯ್ಡ್ ಗ್ರಂಥಿ ಕೂಡ ಮುಖ್ಯವಾದುದು. ಇದು ನಮ್ಮ ದೇಹದ ಪ್ರತಿಯೊಂದು ಕಾರ್ಯಗಳನ್ನು ನಿಯಂತ್ರಿಸುತ್ತದೆ.
ನಮ್ಮ ಮಿದುಳಿನಲ್ಲಿರುವ ಹೈಪೋಥಾಲಮಸ್ ಹಾಗೂ ಪಿಟ್ಯೂಟರಿ ಗ್ರಂಥಿಗಳು ಥೈರಾಯ್ಡ್ ಗ್ರಂಥಿಯನ್ನು ನಿಯಂತ್ರಿಸುತ್ತದೆ. ಈ ಪಿಟ್ಯೂಟರಿ ಗ್ರಂಥಿಯಿಂದ ಟಿಎಸ್‌ಎಚ್ ಹಾರ್ಮೋನ್ ಹಾಗೂ ಥೈರಾಯ್ಡ್ ಗ್ರಂಥಿಯಿಂದ T3, T4 ಹಾರ್ಮೋನ್ ಉತ್ಪತ್ತಿಯಾಗಿ ರಕ್ತದಲ್ಲಿ ಸೇರಿಕೊಳ್ಳುತ್ತವೆ.
ಹೀಗೆ ನಿರಂತರವಾಗಿ ನಡೆಯುವ ವ್ಯವಸ್ಥೆಯಲ್ಲಿ ವ್ಯತ್ಯಾಸವಾದಾಗ ಹಾರ್ಮೋನ್‌ನಲ್ಲಿ ಅಸಮತೋಲನ ಉಂಟಾಗುತ್ತದೆ.
ಥೈರಾಯ್ಡ್‌ನಲ್ಲಿ ಹಾರ್ಮೋನ್‌ಗಳ ಉತ್ಪತ್ತಿ ಅತಿ ಹೆಚ್ಚಾಗಬಹುದು ಅಥವಾ ಅತಿ ಕಡಿಮೆಯಾಗಿ ಸಮಸ್ಯೆಗೆ ಗುರಿಯಾಗುತ್ತದೆ. ಈ ರೀತಿಯ ಅಸಮತೋಲನ ವ್ಯತ್ಯಾಸವು ಹೈಪೋಥೈರಾಯ್ಡ್ ಅಥವಾ ಹೈಪರ್ ಥೈರಾಯ್ಡ್ ಮತ್ತು ಗಾಯ್ಟರ್ ಅನ್ನುವ ದೀರ್ಘಕಾಲದ ಸಮಸ್ಯೆಗೆ ಕಾರಣವಾಗುತ್ತದೆ.
ವಿವಿಧ ರೀತಿಯ ಥೈರಾಯ್ಡ್:
ಹೈಪೋಥೈರಾಯ್ಡಿಸಂ: ಶರೀರದಲ್ಲಿ ಅಗತ್ಯಕ್ಕಿಂತ ಕಡಿಮೆ ಪ್ರಮಾಣದಲ್ಲಿ ಹಾರ್ಮೋನುಗಳು ಉತ್ಪಾದನೆಯಾಗುವುದನ್ನು ಹೈಪೋಥೈರಾಯ್ಡಿಸಂ ಎನ್ನುತ್ತಾರೆ. ಆದರೆ ಆಧುನಿಕ ಜೀವನದಲ್ಲಿ ನಾವು ಹೆಚ್ಚಾಗಿ ನೋಡುತ್ತಿರುವುದು ಸ್ತ್ರೀಯರಲ್ಲಿ ಮತ್ತು ಮಕ್ಕಳಲ್ಲಿ.
ಲಕ್ಷ ಣಗಳು: ಮಕ್ಕಳಲ್ಲಿ ಬುದ್ಧಿಮಾಂದ್ಯತೆ, ಬೆಳವಣಿಗೆಯಲ್ಲಿ ಕುಂಠಿತ, ಜ್ಞಾಪಕಶಕ್ತಿ ಕಡಿಮೆಯಾಗುವುದು, ಮಲಬದ್ಧತೆ, ವಯಸ್ಸಿಗೆ ಮೀರಿ ತೂಕದಲ್ಲಿ ಹೆಚ್ಚಾಗುವಿಕೆ.
ಸ್ತ್ರೀಯರಲ್ಲಿ ಮೈನೆರೆಯುವುದು ವಿಳಂಬವಾಗುವುದು ಅಥವಾ ಆಗದೇ ಇರುವುದು, ಋುತುಚಕ್ರದಲ್ಲಿ ಏರುಪೇರು, ಋುತುಚಕ್ರ ಆಗದೇ ಇರುವುದು, ಒಂದು ವೇಳೆ ಋುತುಚಕ್ರವಾದರೂ ರಕ್ತಸ್ರಾವ ಹೆಚ್ಚಾಗುವುದು ಅಥವಾ ಕಡಿಮೆಯಾಗುವುದು. ಅಂಡಾಶಯದಿಂದ ಅಂಡಾಣುಗಳು ಬಿಡುಗಡೆಯಾಗುವುದರಲ್ಲಿ ಲೋಪಗಳು ಕಾಣಿಸಿಕೊಳ್ಳುವುದು, ಸಂತಾನಹೀನತೆ, ಗರ್ಭ ಧರಿಸಿದರೂ ಪದೇ ಪದೆ ಗರ್ಭಪಾತವಾಗುವುದು.
ಪುರುಷರಲ್ಲಿ ಈ ಸಮಸ್ಯೆ ಇರುವವರಲ್ಲಿ ಟಿಎಸ್‌ಎಚ್ ಹಾರ್ಮೋನ್ ಅಂಶವು ಹೆಚ್ಚಾಗಿ ಇರುತ್ತದೆ. ಇದಲ್ಲದೇ ಟೆಸ್ಟೊಸ್ಟಿರಾನ್ ಹಾರ್ಮೋನ್ ಅಂಶವು ಕಡಿಮೆಯಾಗುತ್ತದೆ ಹಾಗೂ ವೀರ್ಯಾಣುಗಳ ಸಂಖ್ಯೆಯು ಕಡಿಮೆಯಾಗುವುದು ಅಥವಾ ಇಲ್ಲದೇ ಇರುವುದು.
ಹೈಪರ್ ಥೈರಾಯ್ಡಿಸಂ: ಶರೀರದಲ್ಲಿ ಅಗತ್ಯ ಪ್ರಮಾಣಕ್ಕಿಂತ ಅಧಿಕ ಥೈರಾಯ್ಡ್ ಹಾರ್ಮೋನುಗಳು ಉತ್ಪತ್ತಿಯಾಗುವುದನ್ನು ಹೈಪರ್ ಥೈರಾಯ್ಡಿಸಂ ಎನ್ನುತ್ತಾರೆ.
ಸ್ತ್ರೀಯರಲ್ಲಿ ಋುತುಚಕ್ರದಲ್ಲಿ ವ್ಯತ್ಯಾಸ ಕಂಡು ಬರುತ್ತದೆ. ಅತಿ ಹೆಚ್ಚು ರಕ್ತಸ್ರಾವ ಆಗುವುದು. ಈ ಸಮಸ್ಯೆ ಇರುವವರು ಬಂಜೆತನ ಎದುರಿಸುತ್ತಿರುತ್ತಾರೆ. ಒಂದು ವೇಳೆ ಗರ್ಭ ಧರಿಸಿದರೂ ತಿಂಗಳು ತುಂಬುವುದರೊಳಗೆ ಪ್ರಸವಿಸುತ್ತಾರೆ ಅಥವಾ ಮಗುವನಿನ ಬೆಳವಣಿಗೆಯಲ್ಲಿ ಲೋಪ ದೋಷಗಳನ್ನು ಕಾಣಬಹುದು.
ಪುರುಷರಲ್ಲಿ ವೃಷಣಗಳ ಬೆಳವಣಿಗೆಯಲ್ಲಿ ಲೋಪದೋಷಗಳನ್ನು ಕಾಣಬಹುದು. ವೀರ್ಯಾಣುಗಳ ಚಲನೆಯಲ್ಲಿ ತೊಂದರೆ ಉಂಟಾಗುತ್ತದೆ. ಇದು ಸಂತಾನಹೀನ ಸಮಸ್ಯೆಗೆ ದಾರಿಯಾಗುತ್ತದೆ.
ಥೈರಾಯ್ಡ್ ಸಮಸ್ಯೆ ಬರಲು ಕಾರಣ:
ಪ್ರಕೃತಿಯ ವಿರುದ್ಧ ಜೀವನ ನಡೆಸುವುದು, ಅಧಿಕ ಮಾನಸಿಕ ಒತ್ತಡ, ವ್ಯಾಯಾಮ ಇಲ್ಲದಿರುವುದು, ಅಯೋಡಿನ್ ಅಂಶ ಇಲ್ಲದಿರುವುದು ಅಥವಾ ಕಡಿಮೆ ಇರುವುದು, ಪೌಷ್ಟಿಕ ಆಹಾರ ಸೇವಿಸದೇ ಇರುವುದು ಕೂಡ ಥೈರಾಯ್ಡ್ ಸಮಸ್ಯೆ ಬರಲು ಕಾರಣ.
ಪರೀಕ್ಷೆಗಳು:
ಥೈರಾಯ್ಡ್ ಗ್ರಂಥಿ, ಕುತ್ತಿಗೆಯ ಭಾಗದ ಸಿಟಿ ಸ್ಕ್ಯಾನ್ ಮೂಲಕ ಥೈರಾಯ್ಡ್ ಸಮಸ್ಯೆಗಳನ್ನು ತಿಳಿದುಕೊಳ್ಳಬಹುದು.
ಹೋಮಿಯೋಕೇರ್ ಇಂಟರ್‌ನ್ಯಾಷನಲ್‌ನಲ್ಲಿ ಚಿಕಿತ್ಸೆ:
ಇಲ್ಲಿ ಲಭ್ಯವಿರುವ ಕಾನ್ಸಿಟಿಟ್ಯೂಷನಲ್ ಚಿಕಿತ್ಸಾ ವಿಧಾನ ಪ್ರಕಾರ ಎಲ್ಲ ರೀತಿಯ ಥೈರಾಯ್ಡ್ ಸಮಸ್ಯೆಗೆ ಪರಿಹಾರ ಇದೆ. ರೋಗಿಯ ಶರೀರದ ವ್ಯಕ್ತಿತ್ವ ಮತ್ತು ರೋಗಲಕ್ಷ ಣಗಳನ್ನು ಪರಿಗಣಿಸಿ, ಸಾಂವಿಧಾನಿಕ ಪದ್ಧತಿಯಲ್ಲಿ ಚಿಕಿತ್ಸೆ ನೀಡಲಾಗುವುದು. ಈ ಮೂಲಕ ಥೈರಾಯ್ಡ್ ಹಾರ್ಮೋನ್ ಸಮಸ್ಯೆಯಿಂದ ಸಂಪೂರ್ಣವಾಗಿ ಗುಣಮುಖವಾಗಬಹುದು.

More Stories
ಸಿದ್ದರಾಮಯ್ಯ: ಅರಸು ದಾಖಲೆ ಸರಿಗಟ್ಟಿದ ‘ಅಹಿಂದ’ ಚಾಣಕ್ಯ – ಜನಪರ ಆಡಳಿತದ ಹೊಸ ಪರ್ವ ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ದೀರ್ಘಕಾಲ ಮುಖ್ಯಮಂತ್ರಿಯಾಗಿ ರಾಜ್ಯವಾಳಿದ ಕೀರ್ತಿ ಈವರೆಗೆ ದಿವಂಗತ ಡಿ. ದೇವರಾಜ ಅರಸು (7 ವರ್ಷ 239 ದಿನಗಳು) ಅವರಿಗೆ ಸಲ್ಲುತ್ತಿತ್ತು. ಆದರೆ, ಜನವರಿ 7, 2026ರಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ಐತಿಹಾಸಿಕ ದಾಖಲೆಯನ್ನು ಮುರಿದು, ಕರ್ನಾಟಕದ ಇತಿಹಾಸದಲ್ಲಿ ಅತಿ ಸುದೀರ್ಘ ಕಾಲ ಆಡಳಿತ ನಡೆಸಿದ ನಾಯಕನಾಗಿ ಹೊರಹೊಮ್ಮಿದ್ದಾರೆ. ಇದು ಕೇವಲ ಅಂಕಿ-ಅಂಶಗಳ ಸಾಧನೆಯಲ್ಲ, ಬದಲಿಗೆ ಅವರ ಅಚಲ ಸಿದ್ಧಾಂತ ಮತ್ತು ಜನಪ್ರಿಯತೆಯ ಪ್ರತೀಕವಾಗಿದೆ. ಅರಸು ಮತ್ತು ಸಿದ್ದರಾಮಯ್ಯ: ಸಮಾಜಮುಖಿ ಹೋಲಿಕೆ ದೇವರಾಜ ಅರಸು ಅವರು ಹೇಗೆ ಭೂ ಸುಧಾರಣೆ ಮತ್ತು ಹಿಂದುಳಿದ ವರ್ಗಗಳ ಸಬಲೀಕರಣದ ಮೂಲಕ ‘ಕರ್ನಾಟಕದ ಕ್ರಾಂತಿಕಾರಿ ನಾಯಕ’ ಎನಿಸಿಕೊಂಡರೋ, ಸಿದ್ದರಾಮಯ್ಯನವರು ‘ಅಹಿಂದ’ (ಅಲ್ಪಸಂಖ್ಯಾತ, ಹಿಂದುಳಿದ ಮತ್ತು ದಲಿತ) ವರ್ಗಗಳ ಧ್ವನಿಯಾಗಿ ಅದೇ ಹಾದಿಯಲ್ಲಿ ಮುನ್ನಡೆದಿದ್ದಾರೆ. ಮೈಸೂರು ಮಣ್ಣಿನ ಈ ಇಬ್ಬರು ನಾಯಕರು ಶೋಷಿತ ಸಮುದಾಯಗಳಿಗೆ ರಾಜಕೀಯ ಅಸ್ತಿತ್ವ ತಂದುಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ಉತ್ತಮ ಆಡಳಿತದ ಪ್ರಮುಖ ಮೈಲಿಗಲ್ಲುಗಳು ಸಿದ್ದರಾಮಯ್ಯನವರ ಆಡಳಿತವನ್ನು ಶ್ಲಾಘಿಸಲು ಮುಖ್ಯ ಕಾರಣ ಅವರ ‘ಜನಪರ ಯೋಜನೆಗಳು’. ಅವರ ಆಡಳಿತ ವೈಖರಿಯಲ್ಲಿ ಆರ್ಥಿಕ ಶಿಸ್ತು ಮತ್ತು ಸಾಮಾಜಿಕ ಭದ್ರತೆಯ ಸುಂದರ ಸಮನ್ವಯವಿದೆ: ಭಾಗ್ಯಗಳ ಸರಣಿ: ಮೊದಲ ಅವಧಿಯಲ್ಲಿ (2013-18) ಜಾರಿಗೆ ತಂದ ‘ಅನ್ನಭಾಗ್ಯ’, ‘ಕ್ಷೀರಭಾಗ್ಯ’, ‘ಇಂದಿರಾ ಕ್ಯಾಂಟೀನ್’ನಂತಹ ಯೋಜನೆಗಳು ಬಡವರ ಹಸಿವು ನೀಗಿಸುವಲ್ಲಿ ಮೈಲಿಗಲ್ಲಾದವು. ಪಂಚ ಗ್ಯಾರಂಟಿಗಳು: ಎರಡನೇ ಅವಧಿಯಲ್ಲಿ ಜಾರಿಗೆ ತಂದ ಐದು ಗ್ಯಾರಂಟಿಗಳು (ಗೃಹಲಕ್ಷ್ಮಿ, ಶಕ್ತಿ, ಗೃಹಜ್ಯೋತಿ, ಅನ್ನಭಾಗ್ಯ, ಯುವನಿಧಿ) ಇಂದು ರಾಜ್ಯದ ಕೋಟ್ಯಂತರ ಕುಟುಂಬಗಳಿಗೆ ಆರ್ಥಿಕ ಆಸರೆಯಾಗಿವೆ. ಆರ್ಥಿಕ ತಜ್ಞತೆ: ರಾಜ್ಯದ ಇತಿಹಾಸದಲ್ಲೇ ಅತಿ ಹೆಚ್ಚು ಅಂದರೆ 16 ಬಾರಿ ಬಜೆಟ್ ಮಂಡಿಸಿದ ಹೆಗ್ಗಳಿಕೆ ಇವರದು. ಆರ್ಥಿಕ ಕೊರತೆಯನ್ನು ಹತೋಟಿಯಲ್ಲಿಟ್ಟುಕೊಂಡು ಅಭಿವೃದ್ಧಿ ಕೆಲಸಗಳಿಗೆ ಹಣ ಮೀಸಲಿಡುವ ಇವರ ಚಾಣಕ್ಯತನ ಮೆಚ್ಚುವಂತದ್ದು. ನುಡಿದಂತೆ ನಡೆದ ಸರ್ಕಾರ: ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಗಳನ್ನು ಈಡೇರಿಸುವಲ್ಲಿ ಅವರು ತೋರಿದ ಬದ್ಧತೆ ಮತದಾರರಲ್ಲಿ ಅವರ ಮೇಲಿನ ವಿಶ್ವಾಸವನ್ನು ಹೆಚ್ಚಿಸಿದೆ. ತಳಮಟ್ಟದ ನಾಯಕತ್ವ ಸಿದ್ದರಾಮಯ್ಯನವರು ಯಾವುದೇ ‘ಹೈಕಮಾಂಡ್’ ನೆರಳಿನಲ್ಲದೆ, ಹಳ್ಳಿ ಹಳ್ಳಿಯ ಜನರೊಂದಿಗೆ ಬೆರೆತು ಬೆಳೆದ ನಾಯಕ. ಅವರ ನೇರ ನುಡಿ, ತರ್ಕಬದ್ಧ ಮಾತುಗಳು ಮತ್ತು ಸಂವಿಧಾನದ ಮೇಲಿನ ಗೌರವ ಅವರನ್ನು ಶ್ರೇಷ್ಠ ಸಂಸದೀಯ ಪಟುವನ್ನಾಗಿ ಮಾಡಿದೆ. ”ಅಧಿಕಾರ ಎನ್ನುವುದು ಕೇವಲ ಕುರ್ಚಿಯಲ್ಲ, ಅದು ಬಡವರ ಕಣ್ಣೀರು ಒರೆಸುವ ಅವಕಾಶ” ಎಂಬ ಸಿದ್ಧಾಂತದೊಂದಿಗೆ ಅವರು ಮುನ್ನಡೆಯುತ್ತಿರುವುದು ಇಂದಿನ ರಾಜಕಾರಣಿಗಳಿಗೆ ಮಾದರಿಯಾಗಿದೆ. ಸಮಾರೋಪ ದೇವರಾಜ ಅರಸು ಅವರ ದಾಖಲೆಯನ್ನು ಸರಿಗಟ್ಟಿರುವ ಸಿದ್ದರಾಮಯ್ಯನವರು, ಕರ್ನಾಟಕದ ಸಾಮಾಜಿಕ ನಕ್ಷೆಯಲ್ಲಿ ತಮ್ಮದೇ ಆದ ಅಳಿಸಲಾಗದ ಛಾಪನ್ನು ಒತ್ತಿದ್ದಾರೆ. ಅವರ ಈ ಪಯಣ ಕೇವಲ ಸುದೀರ್ಘ ಅವಧಿಯದ್ದಷ್ಟೇ ಅಲ್ಲದೆ, ‘ಸಮ ಸಮಾಜ’ದ ನಿರ್ಮಾಣದ ಹಾದಿಯಲ್ಲಿ ಒಂದು ಭರವಸೆಯ ನಡಿಗೆಯಾಗಿದೆ.
ರಕ್ಷಾ ಬಂಧನದ ರಾಖಿ: ಅದರ ಅರ್ಥ ಮತ್ತು ಮಹತ್ವ
ವಿಚ್ಚೇದನ ಪ್ರಕರಣಗಳಲ್ಲಿ ಮಠಾಧೀಶರ ಮಧ್ಯಸ್ಥೀಕೆ ಎಷ್ಟು ಸರಿ?’.