ಸೈರೆಂಟಿಕಾ ಗಾಳಿ ವಿದ್ಯುತ್ ಕಂಪನಿಗಳಿಂದ ರೈತರಿಗೆ ಪಂಗನಾಮ ಶಾಸಕ ಆಪ್ತ ಗುತ್ತಿಗೆದಾರ ಮಲ್ಲಿಕಾರ್ಜುನ ಕುಮ್ಮಕ್ಕು
ಕೊಡತಗೇರಿ ಎಕ್ಸಪ್ರೇಸ್ ಡಿಜಟೆಲ್ ಡೆಸ್ಕ್
ಕೊಪ್ಪಳ :
ಕೊಪ್ಪಳ ಜಿಲ್ಲೆ ಸೇರಿದಂತೆ ಉತ್ತರ ಕರ್ನಾಟಕಕ್ಕೆ ಲಗ್ಗೆ ಇಟ್ಟಿರುವ ಗಾಳಿ ವಿದ್ಯುತ್ ಉತ್ಪಾದನ ಕಂಪನಿಗಳಿಗೆ ಉತ್ತರ ಕರ್ನಾಟಕ ಹೇಳಿ ಮಾಡಿಸಿದ ಬಯಲು ಸೀಮೆಯಾಗಿದೆ ಹೌದು ಇದು ಬಯಲು ಸೀಮೆ ಯಾಗಿರುವದಿಂದ ಗಾಳಿ ವೇಗವಾಗಿ ಬಿಸುತ್ತಿರುವದರಿಂದ ವಿದ್ಯತ್ ಉತ್ಪಾದನೆಯನ್ನು ಹೆಚ್ಚು ರೀತಿಯಾಗಿ ಮಾಡಬಹುದು ಇದನ್ನು ಮನಗೊಂಡಿರುವ ಖಾಸಗಿ ಕಂಪನಿಗಳು ಈ ಭಾಗಕ್ಕೆ ಬಂದಿದ್ದು ಆದರೆ ಇದು ರೈತರಿಗೆ ಕಂಟಕವಾಗಿರುವದು ಮಾತ್ರ ಸತ್ಯ
, ಒಂದಲ್ಲ ಒಂದು ರೀತಿಯಲ್ಲಿ ನಿತ್ಯವೂ ರೈತರ ಶೋಷಣೆ ವ್ಯಾಪಕವಾಗಿ ನಡೆಯುತ್ತಿದೆ. ಗಾಳಿ ವಿದ್ಯುತ್ ಕಂಪನಿಗಳ ಕಾರ್ಯವೈಖರಿಯ ಮೇಲೆ ಯಾರದ್ದೂ ಯಾವುದೇ ತೆರನಾದ ಹಿಡಿತವಿಲ್ಲದೇ ಇರುವ ಕಾರಣ ಅವರು ಹೇಳಿದ್ದೇ ಕಾನೂನು, ಅವರು ಮಾಡಿದ್ದೇ ಕೆಲಸ ಎನ್ನುವಂತಾಗಿದೆ..
ಶಾಸಕ ರಾಯರೆಡ್ಡಿ ಆಪ್ತ ಮಲ್ಲಿಕಾರ್ಜುನನಿಂದ ರೈತರಿಗೆ ದೋಖಾಇದೊಂದು ದೊಡ್ಡ ಜಾಲವಿದೆ ರೈತರ ಭೂಮಿಯನ್ನು ಕಡಿಮೆ ಬೆಲೆ ಖರೀದಿಸಿ ಕಂಪನಿಗಳಿಗೆ ಹೆಚ್ಚಿನ ಬೆಲೆ ಕೊಡುವ ಗುಂಪು ಒಂದು ಕಡೆಯಾದರೆ ಇತ್ತಕೇಲವರಯ ಶಾಸಕರ ಆಪ್ತರೆಂದು ಕೊಂಡು ರೈತರಿಗೆ ವಂಚಿಸುತ್ತಿರುದು ಕಂಡು ಬಂದಿದೆ ಹೌದು ಕೊಪ್ಪಳ ಜಿಲ್ಲೆಯ ಕುಕನೂರ ತಾಲೂಕಿನ ಕುದರಿಮೋತಿ ಬಳಿ ಸ್ಥಾವರದ ಕೆಳಗಡೆ ಟೆಂಟ್ ಹಾಕಿ ರೈತರು ಪ್ರತಿಭಟೆನೆಗೆ ಇಳಿದಿದ್ದು ಕೆಲ ರೈತರಿಗೆ 50 ಲಕ್ಷ ರೂಪಾಯಿ ಪರಿಹಾರ ನೀಡಿದರೆ ನಮಗೆ ಕೇವಲ 20 ಲಕ್ಷ ಪರಿಹಾರ ಕೊಟ್ಟಿದ್ದಾರೆಂದು ಹತ್ತಕ್ಕೂ ಹೆಚ್ಚು ಜನ ರೈತರು ಪ್ರತಿಭಟನೆಯನ್ನು ಮಾಡುತ್ತಿದ್ದು ಇವರು ಸೈರೆಂಟಿಕಾ ಕಂಪನಿಯ ಗುತ್ತಿಗೆದಾರನು ಎಂದು ಅನ್ನಿಸಿಕೊಂಡಿರುವ ಯಲಬುರ್ಗಾ ಕ್ಷೇತ್ರದ ಶಾಸಕ ಬಸವರಾಜ ರಾಯರೆಡ್ಡಿ ಆಪ್ತ ಎಂದು ಹೇಳಿಕೊಳ್ಳುವ ಕುಕನೂರ ತಾಲೂಕಿನ ತಳಕಲ್ ಗ್ರಾಮದ ಗುತ್ತಿಗೆದಾರ ಮಲ್ಲಿಕಾರ್ಜುನ ಹಣ ನೀಡುತ್ತಿಲ್ಲಾ ಎಂದು ಆರೋಪಿಸಿ ಪ್ತಿಭಟನೆ ಮಾಡುತ್ತಿದ್ದು ಸರಕಾರ ಬೇಕಾಬಿಟ್ಟಿಯಾಗಿ ರೈತರಿಗೆ ದೋಖಾ ಮಾಡುವ ಕಂಪನಿ ವಿರುದ್ಧ ಹಾಗೂ ಇಂತಹ ಗುತ್ತಿಗೆದಾರರ ಮೇಲೆ ಕಠಿಣ ಕಾನೂನು ಕ್ರಮ ತಗೆದುಕೊಂಡು ರೈತರಿಗೆ ನ್ಯಾಯ ಕೊಡಿಸಬೇಕು .
.
More Stories
ಕನಕ ಭವನ ನಿರ್ಮಾಣಕ್ಕೆ ನಾಗೇಶ್ ಲಕ್ಕಲಕಟ್ಟಿ ಅವರು ಒಂದು ಲಕ್ಷ ರೂಪಾಯಿಗೆ ದೇಣಿಗೆ
ಪರೀಕ್ಷೆಯಲ್ಲಿ ಬ್ರಾಹ್ಮಣ ವಿದ್ಯಾರ್ಥಿಗಳ ಜನಿವಾರ ತೆಗೆಸಿದಕ್ಕೆ ಜೋಶಿ ಖಂಡನೆ
ಎಪ್ರಿಲ್ ನಲ್ಲಿ ಜಿಲ್ಲೆಯಾದ್ಯಂತ ನರೇಗಾ ಕೆಲಸ ಪ್ರಾರಂಭ : ಭರತ್ ಎಸ್