ಆಂಧ್ರ ಮೂಲದ ಸೀಡ್ಸ್ ಕಂಪನಿ ಅವರಿಂದ ರೈತರಿಗೆ ಧೋಖಾ

ಆಂಧ್ರ ಮೂಲದ ಸೀಡ್ಸ್ ಕಂಪನಿ ಅವರಿಂದ ರೈತರಿಗೆ ಧೋಖಾ

ಕೊಡತಗೇರಿ ಎಕ್ಸಪ್ರೆಸ್ ಸುದ್ದಿಗಜೇಂದ್ರಗಡ ಮತ್ತು ಕೊಪ್ಪಳ ಜಿಲ್ಲೆಯಲ್ಲಿ ಹತ್ತಿ ಬೀಜ ವ್ಯಾಪಕವಾಗಿ ಬಿತ್ತನೆ ಮಾಡುತ್ತಿದ್ದ ರೈತರಿಗೆ ಈ ಬಾರಿ ಸಂಕಷ್ಟ ಎಂಬಂತೆ ಕಾಣುತ್ತಿದೆ.ಪ್ರತಿ ವರ್ಷ ಬಿತ್ತನೆ ಮಾಡುವ ಸಮಯದಲ್ಲಿ ರೈತರಿಗೆ ಮಂಗಡವಾಗಿ ಹಣವನ್ನು ನೀಡಿ ಅವರಿಗೆ ಹಣದಾಸೆ ಹಚ್ಚಿ ಬಿತ್ತನೆ ಮಾಡುತ್ತಿದ್ದ ಸೀಡ್ಸ್ ಕಂಪನಿಗಳು ಈ ಬಾರಿ ಕೂಡ ಅದೇ ಆಶ್ವಾಸನೆಯನ್ನು ನೀಡಿ ಹತ್ತಿ ಬೀಜ ಬಿತ್ತನೆ ಮಾಡಿಸಿದ್ದಾರೆ. ಆದರೆ ಈಗ ರೈತರು ಆಳುಗಳಿಗೆ ಮತ್ತು ಗೊಬ್ಬರ ಮತ್ತು ಕಿಟನಾಶಕ ಎಣ್ಣೆಗೆ ಹಣವನ್ನು ಕೇಳಿದರೆ ಬೀಜದ ಉತ್ಪಾದಕರು ನಾವು ಹಣವನ್ನು ನೀಡುವುದಿಲ್ಲ ನೀವು ಬೀಜವನ್ನು ಕೊಟ್ಟರೆ ಕೊಡಬಹುದೇ ಇಲ್ಲ ಬಿಡಬಹುದು ಎಂಬ ಹೇಳಿಕೆಯಿಂದ ಲಕ್ಷಾಂತರ ರೂಪಾಯಿ ಹಣವನ್ನು ಲಾಸಾದಂತಹ ರೈತರು ಹತ್ತಿ ಬೆಳೆಯನ್ನು ಕೆಲವು ಕಡೆ ಕುರಿಗಳಿಗೆ ಮೇಯಿಸುವುದು ಮತ್ತು ಕಿತ್ತು ಹಾಕುವುದರ ಮೂಲಕ ಕಂಪನಿ ವಿರುದ್ಧ  ರೈತರು ಅಕ್ಅರೋ ವ್ದ್ದಾರೆ ಇದು ಎಲ್ಲಾ ಕಡೆ ನಡೆಯುತ್ತಿದ್ದರೂ ಕೂಡ ಕೃಷಿ ಅಧಿಕಾರಿಗಳಾದಂತವರು ಇದುವರೆಗೂ ಕೂಡ ಇವರ ವಿರುದ್ಧ ಕ್ರಮವನ್ನು ತೆಗೆದುಕೊಳ್ಳದೆ ಬೇಕಾ ಬಿಟ್ಟಿ ಉಡಾಫೆ ಮಾತುಗಳನ್ನು ಹೇಳುತ್ತಾ ರೈತರ ಜೊತೆ ಚೆಲ್ಲಾಟ ಆಡುವ ಕೆಲಸವನ್ನು ಕಂಪನಿಯವರು ಮತ್ತು ಅಧಿಕಾರಗಳು ಸೇರಿಕೊಂಡು ರೈತರಿಗೆ ಮೋಸವನ್ನು ಮಾಡುತ್ತಿದ್ದಾರೆ. ಎಂದು ರೈತ ಸಂಘಟನೆ ಆರೋಪಿಸಿ ಜಿಲ್ಲಾ ಜಂಟಿ ನಿರ್ದೇಶಕರಿಗೆ ಮತ್ತು ಜಿಲ್ಲಾ ಉಸ್ತುವಾರಿ ಮಂತ್ರಿ ಶಿವರಾಜ್ ತಂಗಡಿಗೆ ಅವರಿಗೆ ಸಲ್ಲಿಸಿದ್ದಾರೆ

error: Content is protected !!