ಡ್ಯಾನಿಯಲ್ ಬಾಲಾಜಿ ಇನ್ನಿಲ್ಲಾ
ಕೊಡತಗೇರಿ Express news
ಚೆನ್ನೈ: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕಿರಾತಕ ಸೇರಿ ಹಲವು ಕನ್ನಡ ಚಿತ್ರಗಳಲ್ಲಿ ನಟಿಸಿದ್ದ ಬಹುಭಾಷಾ ನಟ ಡ್ಯಾನಿಯಲ್ ಬಾಲಾಜಿ ಕೊನೆಯುಸಿರೆಳೆದಿದ್ದಾರೆ. ಶುಕ್ರವಾರ ರಾತ್ರಿ ಹೃದಯಾಘಾತದಲ್ಲಿ ಅವರು ನಿಧನರಾಗಿದ್ದಾರೆ ಎಂದು ವರದಿಯಾಗಿದೆ.
ಶುಕ್ರವಾರ ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಬಾಲಾಜಿ ಅವರನ್ನು ಚೆನ್ನೈನ ಕೊಟ್ಟಿವಕಮ್ ನಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. 48 ವರ್ಷದ ಡ್ಯಾನಿಯಲ್ ಬಾಲಾಜಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.
ಡ್ಯಾನಿಯಲ್ ಬಾಲಾಜಿ ಅವರ ನಿಧನವು ತಮಿಳು ಸೇರಿದಂತೆ ಭಾರತೀಯ ಚಿತ್ರರಂಗಕ್ಕೆ ಶಾಕ್ ನೀಡಿದೆ. ಹಲವು ನಟರು, ನಿರ್ದೇಶಕರು, ನಿರ್ಮಾಪಕರು ಸಂತಾಪ ಸೂಚಿಸಿದ್ದಾರೆ.
ಡ್ಯಾನಿಯಲ್ ಬಾಲಾಜಿ ಮೃತದೇಹವನ್ನು ಪುರಸಾವಲ್ಕಮ್ ನಲ್ಲಿನ ಅವರ ನಿವಾಸಕ್ಕೆ ಕೊಂಡೊಯ್ಯಲಾಗಿದೆ. ಶನಿವಾರ ಅಂತಿಮ ವಿಧಿವಿಧಾನಗಳು ನಡೆಯಲಿದೆ.ಡ್ಯಾನಿಯಲ್ ಬಾಲಾಜಿ ಅವರು ಖಳನಾಯಕನ ಪಾತ್ರವನ್ನು ನಿರ್ವಹಿಸುವಲ್ಲಿ ಹೆಸರುವಾಸಿಯಾಗಿದ್ದರು. ನಿರ್ದೇಶಕ ಗೌತಮ್ ಮೆನನ್ ಮತ್ತು ಕಮಲ್ ಹಾಸನ್ ಅವರ ‘ವೆಟ್ಟೈಯಾಡು ವಿಲೈಯಾಡು’ ಚಿತ್ರದಲ್ಲಿ ಅಮುಧನ್ ಪಾತ್ರದಲ್ಲಿ ಅವರ ಅಭಿನಯವು ಎಂದೂ ಮರೆಯಲಾಗದ್ದು.
ಬಾಲಾಜಿ ಅವರು ಕಮಲ್ ಹಾಸನ್ ಅವರ ಅಪೂರ್ಣ ಕನಸಿನ ಯೋಜನೆಯಾದ ‘ಮರುದುನಾಯಗಂ’ ನಲ್ಲಿ ಯುನಿಟ್ ಪ್ರೊಡಕ್ಷನ್ ಮ್ಯಾನೇಜರ್ ಆಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಅವರು ರಾಧಿಕಾ ಶರತ್‌ಕುಮಾರ್ ಅವರ ‘ಚಿತ್ತಿ’ಯಲ್ಲಿ ಪಾತ್ರ ನಿರ್ವಹಿಸುವ ಮೂಲಕ ಕಿರುತೆರೆಗೆ ಕಾಲಿಟ್ಟರು. ಅದರಲ್ಲಿ ಅವರು ಡ್ಯಾನಿಯಲ್ ಪಾತ್ರವನ್ನು ನಿರ್ವಹಿಸಿದರು. ಅಲ್ಲಿಂದ ಅವರು ಡ್ಯಾನಿಯಲ್ ಬಾಲಾಜಿ ಎಂಬ ಹೆಸರು ಗಳಿಸಿದರು.
ಅಜಿತ್ ಅವರ ‘ಯೆನ್ನೈ ಅರಿಂದಾಲ್’, ಸಿಂಬು ಅವರ ‘ಅಚ್ಚಂ ಯೆನ್ಬದು ಮಡಮೈಯಾದ’, ದಳಪತಿ ವಿಜಯ್ ಅವರ ‘ಬೈರವ’, ಧನುಷ್ ಅವರ ‘ವಡಾ ಚೆನ್ನೈ’, ಮತ್ತು ವಿಜಯ್ ಅವರ ‘ಬಿಗಿಲ್’ ಮುಂತಾದ ಚಿತ್ರಗಳಲ್ಲಿ ನಟಿಸಿದ್ದರು. ಅವರು ಕೊನೆಯದಾಗಿ ‘ಅರಿಯವನ್’ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು.
ತಮಿಳು ಮಾತ್ರವಲ್ಲದೆ ತೆಲುಗು, ಕನ್ನಡ ಮತ್ತು ಮಲಯಾಳಂ ಚಿತ್ರಗಳಲ್ಲಿಯೂ ಡ್ಯಾನಿಯಲ್ ಬಾಲಾಜಿ ನಟಿಸಿದ್ದರು.
More Stories
ಸೆಕೆಂಡ್ ಹ್ಯಾಂಡ್ ಮೊಬೈಲ್ ಬಗ್ಗೆ ಎಚ್ಚರ!: ಬೆಂಗಳೂರಿನಲ್ಲಿ 6 ತಿಂಗಳಲ್ಲಿ 2,350 ಅಕೌಂಟ್ಗೆ ಕನ್ನ..!
ಶಾಲೆಗಾಗಿ ಪಡೆದ ಸಿಎ ಸೈಟ್‌ನಲ್ಲಿ ಧಮ್ ಬಿರಿಯಾನಿ ಹೋಟೆಲ್! ಛಲವಾದಿ ನಾರಾಯಣ ಸ್ವಾಮಿ ವಿರುದ್ಧ ಆರೋಪ
ಸ್ನೇಹಮಯಿ ಕೃಷ್ಣ ರೌಡಿಶೀಟರ್: ಸಿಎಂ ಕೇಸ್ ನಲ್ಲಿ ಅವರ ಕಡೆಯವರು 100 ಕೋಟಿ ಡೀಲ್ ಗೆ ಬಂದಿದ್ರು -ಎಂ.ಲಕ್ಷ್ಮಣ್