ಗದಗ RTO ಅಧಿಕಾರಿ ಲಕ್ಷ್ಮೀಕಾಂತ ರಿಂದ ಸರಕಾರಿ ವಾಹನ ದುರುಪಯೋಗ ಕ್ರಮಕ್ಕೆ ಅಗ್ರಹ
ಕೊಡತಗೇರಿ ಎಕ್ಸ್‌ಪ್ರೆಸ್ ಸುದ್ದಿ
ಗದಗ ಜಿಲ್ಲೆಯ ಆರ್.ಟಿ.ಓ ಅಧಿಕಾರಿ ಲಕ್ಷ್ಮೀಕಾಂತ ನಾಲ್ವಾರ ಅವರಿಂದ ಕೆಲವು ತಿಂಗಳುಗಳ ಕಾಲ ನಿರಂತರವಾಗಿ ಸರ್ಕಾರಿ ವಾಹನ ದುರುಪಯೋಗ ಪಡಿಸಿಕೊಳ್ಳುತ್ತಿದ್ದರೂ, ಜಿಲ್ಲಾಧಿಕಾರಿಗಳು ಹಾಗೂ ಮೇಲಾಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸಾರ್ವಜನಿಕರು ಆರೋಪಿಸುತ್ತಾರೆ.
ಗದಗ ಆರ್.ಟಿ.ಓ ಇಲಾಖೆಯ ವಾಹನ ಸಂಖ್ಯೆ ಕೆ.ಎ.01 ಜಿ 7113 ಸಂಖ್ಯೆಯ ವಾಹನ ನಿರಂತರವಾಗಿ ಕೊಪ್ಪಳ ನಗರಕ್ಕೆ ಆಗಮಿಸುತ್ತಿರುವ ಕುರಿತು ಸಾರ್ವಜನಿಕರ ಮಾಹಿತಿಯನ್ನಾಧರಿಸಿ 2024 ರ ಮೇ 29 ರ ಬೆಳಗ್ಗೆ 9 ಘಂಟೆಗೆ ಕೊಪ್ಪಳದ ಗವಿಮಠದ ಹತ್ತಿರವಿದ್ದ ಸರ್ಕಾರಿ ವಾಹನದಲ್ಲಿ ಪ್ರಯಾಣಿಸುತ್ತಿದ್ದ ಗದಗ ಜಿಲ್ಲೆಯ ಆರ್.ಟಿ.ಓ ಅಧಿಕಾರಿ ಲಕ್ಷ್ಮೀಕಾಂತ ನಾಲ್ವಾರ “ಸಾರ್ವಜನಿಕರು ಪ್ರಶ್ನಿಸಿದಾಗ ” ನಾನು ಎಲ್ಲಿ ಬೇಕಾದರೂ ಹೋಗಬಹುದು, ಯಾವ ಜಿಲ್ಲೆಯ ವಾಹನ ದಂಡ ಹಾಕಬಹುದು ಎಂದು ಬೇಜವಾಬ್ದಾರಿಯ ಮಾತನ್ನಾಡಿದರು. ಸರ್ಕಾರದ ನಿಯಮ ಗಾಳಿಗೆ ತೂರಿರುವ ಅಧಿಕಾರಿ ಮೇಲೆ ಜಿಲ್ಲಾಧಿಕಾರಿ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ.
ಕೊಪ್ಪಳ ಜಿಲ್ಲೆಗೆ ನಿರಂತರ ಓಡಾಟ:
ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿ ಕಡ್ಡಾಯವಾಗಿ ವಾಸ ಇರಬೇಕು ಎಂಬ ಸರ್ಕಾರಿ ನಿಯಮವಿದೆ. ಅಲ್ಲದೆ, ಯಾವುದೇ ಸರ್ಕಾರಿ ವಾಹನ ವೈಯಕ್ತಿಕ ಕೆಲಸಕ್ಕೆ ಬಳಕೆಗೆ ಬಳಸಬಾರದು ಹಾಗೂ ಬೇರೆ ಜಿಲ್ಲೆಗೆ ತೆಗೆದುಕೊಂಡು ಹೋಗಬೇಕಾದರೆ ಜಿಲ್ಲಾಧಿಕಾರಿ ಮಾಹಿತಿ ನೀಡಿ, ಅವರಿಂದ ಪರವಾನಗಿ ಪಡೆದು ಹೋಗಬೇಕಾಗುತ್ತದೆ. ಆದರೆ, ಗದಗ ಜಿಲ್ಲೆಯ ಆರ್.ಟಿ.ಓ ಅಧಿಕಾರಿ ಲಕ್ಷ್ಮೀಕಾಂತ ನಾಲ್ವಾರ ಅವರು, ಈ ಹಿಂದೆ ಕೊಪ್ಪಳದಲ್ಲಿ ಕೆಲಸ ನಿರ್ವಹಿಸಿದ್ದರು. ಈ ಹಿನ್ನೆಲೆಯಲ್ಲಿ ಕೊಪ್ಪಳ ಆರ್ಟಿಓ ಇಲಾಖೆಗೆ ಆಗಾಗ ಭೇಟಿ ನೀಡಿ ಅಲ್ಲಿ ಅಕ್ರಮ ಕಡಿತಗಳ ವಿಲೇವಾರಿ ಮಾಡುತ್ತಾರೆ ಎಂಬ ಕೂಡ ಇದೆ. ಇದಲ್ಲದೆ, ಕೊಪ್ಪಳದಲ್ಲಿ ಮನೆ ಮಾಡಿರುವ ಆರ್ಟಿಓ ಲಕ್ಷ್ಮೀಕಾಂತ ನಿತ್ಯ ಕೊಪ್ಪಳ-ಗದಗ ಸರ್ಕಾರಿ ವಾಹನದಲ್ಲಿ ಪ್ರಯಾಣ ಬೆಳೆಸಿ, ಸರ್ಕಾರಿ ನಿಯಮ ಗಾಳಿಗೆ ತೂರಿದ್ದಾರೆಂದು ಆರೋಪಿಸಲಾಗಿದೆ.
ಯಾವುದೇ ಸರ್ಕಾರಿ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿ ವಾಸವಿದ್ದರೆ ಯಾವುದೇ ಸಂದರ್ಭದಲ್ಲಿ ಜನರ ಸಂಕಷ್ಟಕ್ಕೆ ನೆರವಾಗಲು ಅನುಕೂಲ ಎಂದು ಸರ್ಕಾರ ಕಡ್ಡಾಯವಾಗಿ ಕೇಂದ್ರ ಸ್ಥಾನದಲ್ಲಿ ವಾಸ ಇರಬೇಕೆಂದು ಆದೇಶ ಮಾಡಿದೆ. ಅದಕ್ಕಾಗಿ ಅಧಿಕಾರಿ/ಸಿಬ್ಬಂದಿಗೆ ಹೆಚ್.ಆರ್.ಎ ಮೊದಲಾದ ಭತ್ಯೆಗಳ ಮೂಲಕ ಹಣವನ್ನೂ ನೀಡಲಾಗುತ್ತಿದೆ ಎನ್ನಲಾಗಿದೆ.
ಆದರೆ,ಆರ್ಟಿಓ ಅಧಿಕಾರಿ ಲಕ್ಷ್ಮೀಕಾಂತ ಮಾತ್ರ ಕೇಂದ್ರ ಸ್ಥಾನದಲ್ಲಿ ವಾಸ ಇರದೆ ದಿನನಿತ್ಯ ಕೊಪ್ಪಳದಿಂದ ಪ್ರಯಾಣಿಸಿ ಬರುತ್ತಾರೆ. ಗದಗ-ಕೊಪ್ಪಳಕ್ಕೆ ಸರ್ಕಾರಿ ವಾಹನವನ್ನೆ ಬಳಸಿಕೊಂಡು ಕಛೇರಿಗೆ ತೆರಳುವ ಮೂಲಕ ಸರ್ಕಾರಿ ವಾಹನ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆಂದು ಆರೋಪಿಸಲಾಗಿದೆ.
ಅಕ್ರಮ ಆಸ್ತಿ ಒಡೆಯ ಆರ್ಟಿಓ ಗದಗ ಆರ್.ಟಿ.ಓ ಅಧಿಕಾರಿ ಲಕ್ಷ್ಮೀಕಾಂತ ನಾಲವಾರ?
ಮೂಲತಃ ಸಿಂಧನೂರಿನವರಾದ ಲಕ್ಷ್ಮೀಕಾಂತ ನಾಲವಾರ ಕೊಪ್ಪಳ ದಲ್ಲಿ ಕೊಪ್ಪಳ ೨೦೧೭ ರಿಂದ ಬ್ರೇಕ್ ಇನ್ಸ್ಪೆಕ್ಟರ್ ಆಗಿ ಕೆಲಸ ನಿರ್ವಹಿಸುತ್ತಿದ್ದರು. ಇವರ ಅವಧಿಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ಎಸೆಯಲಾಗಿದೆ. ಇದಲ್ಲದೆ, ಸಧ್ಯಕ್ಕೆ ಕೊಪ್ಪಳ ಜಿಲ್ಲೆಯ ಹಲವು ಅಕ್ರಮ ಆಸ್ತಿ ಇದ್ದು, ರಿಯಲ್ ಎಸ್ಟೇಟ್ ಕ್ಷೇತ್ರದಲ್ಲೂ ಲಕ್ಷೀಕಾಂತ ಅವರ ಛಾಪು ಇದೆ. ರೆಸಾರ್ಟ್ ಕಟ್ಟಿಸುತ್ತಿದ್ದಾರೆ, ಫೈನಾನ್ಸ್ ಕೂಡ ಇದೆ ಎಂದು ಸಾಮಾಜಿಕ ಕಾರ್ಯಕರ್ತ ಹನುಮಂತ ಎಲ್, ಅವರು ಪತ್ರಿಕೆಗೆ ಮಾಹಿತಿ ನೀಡಿದರು.
ಒಟ್ಟಾರೆ,
ಜಿಲ್ಲಾಧಿಕಾರಿಗಳಾಗಲಿ ಅಥವಾ ಸಂಬಂಧಪಟ್ಟವರು ಇತ್ತಕಡೆ ಗಮನಹರಿಸಿ ಅಧಿಕಾರ ಮತ್ತು ವಾಹನ ದುರುಪಯೋಗಪಡಿಸಿಕೊಳ್ಳುತ್ತಿರುವ ಅಧಿಕಾರಿಗಳ ಮೇಲೆ ಕ್ರಮ ಜರುಗಿಸಬೇಕಿದೆ. ಆ ಮೂಲಕ ಪಾರದರ್ಶಕ ಆಡಳಿತಕ್ಕಾಗಿ ಮತ್ತು ಜನತೆಯ ಅನುಕೂಲಕ್ಕಾಗಿ ಸರ್ಕಾರದ ಗೌರವ ಉಳಿಸುವ ಕೆಲಸ ಆಗಬೇಕಿದೆ ಎಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ.
*”” ಭಾಕ್ಸ*”
ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿ ವಾಸ ಇರದ ಕಾರಣ ಅಧಿಕಾರಿಗಳು ಸಮಯಕ್ಕೆ ಸರಿಯಾಗಿಯಾಗಿ ಕಛೇರಿಗಳಿಗೆ ಬರುವುದಿಲ್ಲ. ಸಾರ್ವಜನಿಕರು ದಿನನಿತ್ಯ ಕಛೇರಿಗಳಿಗೆ ಅಲೆದಾಡುವ ಪರಿಸ್ಥಿತಿ ಮುಂದುವರೆದಿದೆ. ಜೊತೆಗೆ ಜನಪ್ರತಿನಿಧಿಗಳ ಮನೆಗಳಿಗೆ ಹೋಗಿ ಅವರ ಕೆಲಸಗಳನ್ನು ಮಾಡಿಕೊಡುವುದರಿಂದ ಜನಕ್ಕೆ ಅಧಿಕಾರಿಗಳು ಕಛೇರಿಗಳಲ್ಲಿ ಸಿಗುತ್ತಿಲ್ಲ. ಪ್ರತಿದಿನ 11 ಘಂಟೆಯ ನಂತರ ಅಧಿಕಾರಿಗಳು ಕಛೇರಿಗೆ ಬರುವುದರಿಂದ ಜನತೆಗೆ ತೊಂದರೆಯಾಗಿದೆ. ಮದ್ಯಾನ್ಹ ಊಟಕ್ಕೆ ಹೊರಗೆ ಹೋದರೆ ಘಂಟೆಗಟ್ಟಲೆ ಬರುವುದಿಲ್ಲ. ಇಂಥಹ ಜನ ವಿರೋಧಿ ಅಧಿಕಾರಿಗಳ ಮೇಲೆ ಕ್ರಮ ಜರುಗಿಸಿ ಬೇರೆ ಡೆಗೆ ವರ್ಗಾವಣೆ ಮಾಡಬೇಕು”
-ಶಿವಾನಂದ ಕಲ್ಗುಡಿ, ಗದಗ ಜಿಲ್ಲಾಧ್ಯಕ್ಷರು, ರೈತ ಯುವ ವೇದಿಕೆ.
More Stories
ಜಾತಿನಿಂದನೆ ಪ್ರಕರಣ: 98 ದೋಷಿಗಳಿಗೆ ಜೀವಾವಧಿ ಶಿಕ್ಷೆ ಮಹತ್ವದ ತೀರ್ಪು
Appointment of Kodatageri as KDP Quarterly Committee Member
ಶಾಸಕ ಜನಾರ್ಧನ ರೆಡ್ಡಿ ವಿರುದ್ಧ ಕ್ರಮಕ್ಕೆ- ಕುಬೇರ ಮಜ್ಜಿಗಿ ಅಗ್ರಹ