ಆರ್.ಐ.ಬಾಗವಾನ ಶಿಕ್ಷಕ ರತ್ನ ಪ್ರಶಸ್ತಿ
ಕೊಡತಗೇರಿ ಎಕ್ಸಪ್ರೆಸ್ ಸುದ್ದಿ
ಗಜೇಂದ್ರಗಡ: ಇಲ್ಲಿಗೆ ಸಮೀಪದ ಗೋಗೇರಿ ಗ್ರಾಮದ ಸರಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ರಾಜೇಸಾಹೇಬ ಇ ಬಾಗಾವಾನ ಶಿಕ್ಷಕರು ತಮ್ಮ ಶಿಕ್ಷಣ ವೃತ್ತಿಯಲ್ಲಿ ಯಾರೊಂದಿಗು ರಾಜಿಯಾದವರು ಅಲ್ಲಾ ಅವರು ತಮ್ಮದೇಯಾದ ಶಿಸ್ತು ಬದ್ದ ಶಿಕ್ಷಣವನ್ನು ಮಕ್ಕಳಿಗೆ ಕಲಿಸುತ್ತಾ ಬಂದಿದ್ದು . ಮತ್ತು ಸಮಾಜಿಕ ಕಾರ್ಯಗಳನ್ನು ಮಾಡುತ್ತಾ ಜನ ಮೆಚ್ಚುಗೆಯನ್ನು ಪಡೆದ ಬಾಗವಾನ ಶಿಕ್ಷಕರು ಎಂದು ಪ್ರಶಸ್ತಿಗಾಗಿ ಸನ್ಮಾನಕ್ಕಾಗಿ ಅಲೇದಾಡಿದವರು ಅಲ್ಲಾ ಅವರು ತಾವಾಯಿತು ತಮ್ಮ ಶಾಲೆಯಾಯಿತು ಎಂಬ ನಿಟ್ಟಿನಲ್ಲಿ ಕೆಲಸ ಮಾಡಿದವರು. ಇಂತಹ ಉತ್ತಮ ಶಿಕ್ಷಕರನ್ನು ಗುರುತಿಸಿದ ಚೇತನ್ ಫೌಂಡೇಶನ್ ಕರ್ನಾಟಕ ಇವರು ನಡೆಸುವ ಅಖಿಲ ಕರ್ನಾಟಕ ಶಿಕ್ಷಕ ಸಮ್ಮೇಳನದಲ್ಲಿ ಗದುಗಿನ ಗಾಂಧಿ, ಸಂತ ಶಿಕ್ಷಕ ಬಿ ಜಿ ಅಣ್ಣಿಗೇರಿ ಶಿಕ್ಷಕ ರತ್ನ ಪ್ರಶಸ್ತಿ ಲಭಿಸಿದೆ. ಇದೇ ಫೆಬ್ರವರಿ18 ರವಿವಾರ ದಂದು ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಪ್ರಶಸ್ತಿ ಪ್ರಧಾನ ಸಮಾರಂಭ ಜರುಗಲಿದೆ. ಇದೆಲ್ಲಾ ಗೋಗೇರಿ ಗ್ರಾಮದವರಿಗೆ ಹೆಮ್ಮೆಯ ಪಡುವ ಸಂಗತಿಯಾಗಿದ್ದು . ಇನ್ನೂ ಬಾಗವಾನ ಗುರುಗಳಿಗೆ ಉನ್ನತ ಪ್ರಶಸ್ತಿ ದೊರೆಯಲಿ ಎಂದು ಗ್ರಾಮಸ್ಥರು ಹಾರೈಸಿದ್ದಾರೆ.
More Stories
ಜಾತಿನಿಂದನೆ ಪ್ರಕರಣ: 98 ದೋಷಿಗಳಿಗೆ ಜೀವಾವಧಿ ಶಿಕ್ಷೆ ಮಹತ್ವದ ತೀರ್ಪು
Appointment of Kodatageri as KDP Quarterly Committee Member
ಶಾಸಕ ಜನಾರ್ಧನ ರೆಡ್ಡಿ ವಿರುದ್ಧ ಕ್ರಮಕ್ಕೆ- ಕುಬೇರ ಮಜ್ಜಿಗಿ ಅಗ್ರಹ