ಶಾರದಾ ಇಂಟರ್ ನ್ಯಾಷನಲ್ ಶಾಲೆ ಮಾಲಿಕನ ಮನೆ ಮೇಲೆ ಐಟಿ ದಾಳಿ
ಕೊಡತಗೇರಿ express ಸುದ್ದಿ
ಕೊಪ್ಪಳ,,೦೭ – ಜಿಲ್ಲೆಯ ಖ್ಯಾತ ಉದ್ಯಮಿ ಹಾಗೂ ಕಿಡದಾಳ ಶಾರದಾ ಇಂಟರ್ ನ್ಯಾಷನಲ್ ಶಾಲೆ ಮಾಲಿಕ ವಿ.ಆರ್.ಪಾಟೀಲ್ ಮನೆ ಮೇಲೆ ಬುಧವಾರ ಐಟಿ ದಾಳಿ ನಡೆದಿದೆ.
ಕೊಪ್ಪಳ ತಾಲೂಕಿನ ಹೊಸ ಲಿಂಗಾಪುರ ಗ್ರಾಮದಲ್ಲಿರೋ ಮನೆ ಹಾಗೂ ಅವರಿಗೆ ಸಂಬಂಧಿಸಿದ ಸ್ಥಳಗಳು ಇತರಡೆ ಏಕ ಕಾಲಕ್ಕೆ ದಾಳಿ ಮಾಡಿ ತನಿಖೆ ನಡೆಸುತ್ತಿದ್ದಾರೆ. ಡಿಸಿಎಂ ಡಿ.ಕೆ.ಶಿವಕುಮಾರ್ ಆಪ್ತರು ಹಾಗೂ ಏಲೇಟ್ರಿಕಲ್ ಗುತ್ತಿಗೆ ದಾರರು ಹಾಗೂ ಶಾಲಾ ಮಾಲಿಕರಾದ ವಿ, ಆರ್ ಪಾಟೀಲಾ ಹಾಗೂ ಎಸ್ ಆರ್ ಪಾಟೀಲ್ ಅವರ ಮನೆ ಮೇಲೆ ಐಟಿ ದಾಳಿ ನಡೆದಿದೆ.
ಗೋವಾ, ಹುಬ್ಬಳ್ಳಿಯಿಂದ ಬಂದಿರೋ ಇಪ್ಪತ್ತಕ್ಕೂ ಹೆಚ್ಚು ಅಧಿಕಾರಿಗಳ ತಂಡ ಮುಂಜಾನೆಯಿಂದ ದಾಖಲಾತಿಗಳ ಪರಿಶೀಲನೆ ನಡೆಸುತ್ತಿದ್ದಾರೆ. ಕಳೆದ ಜನೆವರಿ 27 ರಂದು ಡಿಸಿಎಂ ಡಿ.ಕೆ.ಶಿವಕುಮಾರ ವಿ.ಆರ್ ಪಾಟೀಲ್ ಅವರ ಶಾಲೆಗೆ ಭೇಟಿ ನೀಡಿದ್ದರು. ಗವಿಮಠ ಜಾತ್ರೆಯಲ್ಲಿ ಭಾಗವಹಿಸಿದ್ದರು. ಅಕ್ರಮ ಆಸ್ತಿ ಹಿನ್ನೆಲೆಯಲ್ಲಿ ದಾಳಿ ನಡೆದಿದೆ ಎನ್ನಲಾಗುತ್ತಿದೆ.
More Stories
ರಸ್ತೆ ಅಗಲೀಕರಣ ಕಾಮಗಾರಿಗೆ ಶಾಸಕ ಜಿ.ಎಸ್ ಪಾಟೀಲ ಭೂಮಿಪೂಜೆ ನೆರವೇರಿಸಿದರು
ಅಕ್ರಮ ಅಕ್ಕಿ ಸಂಗ್ರಹ: 3.6 ಕ್ವಿಂಟಲ್ ಪಡಿತರ ಅಕ್ಕಿ ವಶಕ್ಕೆ: ಆರೋಪಿ ಅರೆಸ್ಟ್!
ಭಾರತದ ಸ್ವತಂತ್ರ ಸಂಗ್ರಾಮಕ್ಕೆ ಅನೇಕರ ತ್ಯಾಗವಿದೆ – ಡಾ.ಹನಸಿ