ವಿದ್ಯಾರ್ಥಿ ಗಳು ಯಶಸ್ಸು ಗಳಿಸಲು ಕಠಿಣ ಶಿಕ್ಷಣ ಅವಶ್ಯ : ಎಚ್.ಎಂ.ಭೋಸಲೆ
ಕೊಡತಗೇರಿ ಎಕ್ಸಪ್ರೇಸ್ ಸುದ್ದಿ
ಗಜೇಂದ್ರಗಡ :
ಜೀವನದಲ್ಲಿ ವಿದ್ಯಾರ್ಥಿಗಳು ಅತ್ಯಂತ ಕಠಿಣ ಪರಿಶ್ರಮ ಪಡಬೇಕು ಅಂದಾಗ ಮಾತ್ರ ವಿದ್ಯಾರ್ಥಿಗಳು ಜೀವನದಲ್ಲಿ ಗುರಿ ಮುಟ್ಟಲು ಮತ್ತು ಯಶಸ್ಸು ಗಳಿಸಲು ಸಾಧ್ಯ ಎಂದು ಶಿಕ್ಷಣ ಪ್ರೇಮಿ ಎಚ್.ಎಂ.ಭೋಸಲೆ ಹೇಳಿದರು.
ಅವರು ಸರಕಾರಿ ಪ್ರೌಢ ಶಾಲೆ ಗೋಗೇರಿ ಯಲ್ಲಿ ಈ ಹಿಂದೆ ಮುಖ್ಯೋಫಧ್ಯಾಯರಾದ ಸೇವೆ ಸಲ್ಲಿಸಿದ ಕೆ.ಎಸ್.ರಾಜೂರ ಅವರ ಸನ್ಮಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ನಂತರ ಸನ್ಮಾನ ಸ್ವೀಕರಿಸಿ ಮಾತನಾಡಿದ ಮುಶಿಗೇರಿ ಸರಕಾರಿ ಪ್ರೌಢ ಶಾಲೆಯ ಪ್ರಾಚಾರ್ಯರಾದ ಕೆ.ಎಸ್.ರಾಜೂರ ಅವರು ಮಾತನಾಡಿ ವಿದ್ಯಾರ್ಥಿಗಳು ಓದಬೇಕು ಓದಿನಿಂದ ಅಭಿವೃದ್ಧಿ ಹೊಂದಲು ಸಾಧ್ಯ ಎಂದ ಅವರು ನಾನು ಈ ಊರಿನಲ್ಲಿ ಸೇವೆ ಸಲ್ಲಿಸಿದಾಗ ಎಲ್ಲಾ ಹಿರಿಯರು ಸಹಕರಿಸಿದ್ದಿರಿ ಅವರ ಋಣ ಎಂದು ನಾನು ತಿರಿಸಲು ಸಾಧ್ಯವಿಲ್ಲಾ ಎಂದರು.
ಕಾರ್ಯಕ್ರಮ ಅಧ್ಯಕ್ಷತೆಯನ್ನು ಶಾಲೆಯ ಮುಖ್ಯೋಪಾಧ್ಯಾಯ ರಾದ ಶ್ರೀಮತಿ ಟಿ.ಸಿ. ನಾಗನೂರ ಮೇಡಂ ಮಾತನಾಡಿ ಈ ಊರಿನಲ್ಲಿ ನಾನು ಮುಖ್ಯೋಪಾಧ್ಯಾಯ ಸೇವೆ ಸಲ್ಲಿಸಲು ಬಂದಿರುವದು ನನ್ನ ಭಾಗ್ಯ ಎಂದ ಅವರು . ನಾನು ಶಾಲೆಯಲ್ಲಿ ಸೇವೆಸಲ್ಲಿಸಲು ಬಂದಿದ್ದೇನೆ ನನ್ನ ಕೈಯಲ್ಲಿ ವಿದ್ಯಾರ್ಥಿಗಳಾದವರು ಇಂದಿನ ಸಮಾಜದಲ್ಲಿ ಗಣ್ಯಮಕ್ಕಳಾಗಿ ಬೇಳದಿರುವದು ನನಗೆ ಸಂತಸ ತಂದಿದೆ ನನ್ನ ಸ್ವಂತ ಮಕ್ಕಳು ಕೂಡ ಇಷ್ಟು ಗೌರವ ಕೊಡುತ್ತಾರೆ ಇಲ್ಲವೋ ಗೊತ್ತಿಲ್ಲಾ ಆದರೆ ನನ್ನ ಸ್ವಂತ ಮಕ್ಕಳಗಿಂತ ಹೆಚ್ಚು ನನ್ನ ಕೈಯಲ್ಲಿರುವ ಮಕ್ಕಳು ನನಗೆ ಗೌರವ ಕೊಡುತ್ತಿರುವದು ನನಗೆ ಗೌರವ ತಂದಿದೆ . ನಾನು ಹೆಚ್ಚಿನ ರೀತಿಯಲ್ಲಿ ಶ್ರಮ ಪಟ್ಟು ವಿದ್ಯಾರ್ಥಿಗಳಿಗೆ ಶಿಕ್ಷಣ ಕೊಡಲು ಶ್ರಮೀಸುತ್ತೇನೆ ಎಂದರು
ಕಾರ್ಯಕ್ರಮದಲ್ಲಿ ವಕೀಲರಾದ ಕೆ.ಎಸ್.ಕೊಡತಗೇರಿ , ಮುಖಂಡರಾದ ಮಲ್ಲಿಕಾರ್ಜುನ ಗಾರಗಿ,ಗ್ರಾ.ಪಂ.ಸದಸ್ಯರಾದ ಇಮಾಮಸಾಬ ಬಾಗವಾನ, ಕಟ್ಟೆಪ್ಪ ಮಾದರ, ಗುತ್ತಿಗೆದಾರರು ಆದ ಮುದಿಯಪ್ಪ ಮುಧೋಳ. ಎಸ್.ಬಿ.ಡೋಳ್ಳಿನವರು, ಶರಣಪ್ಪ ಭೋಸಲೆ, ಸಂಭಾಜಿ ಭೋಸಲೆ, ಯಂಕಪ್ಪ ಭೋಸಲೆ ಸರಕಾರಿ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ರಾದ ಎಸ್.ಬಿ.ಚಳಗೆರಿ ಬಸವರಾಜ ಮಾದರ.ಸೇರಿದಂತೆ ಶಾಲೆಯ ಶಿಕ್ಷಕಿಯರಾದ ಡಿ.ಎಸ್.ಕುಸಗಲ್ಲರವರು, ಎಂ.ಬಿ.ಬಿರಾದರ.ಶಿಕ್ಷಕರಾದ ಎಂ.ಎಚ್.ಮಠದ ರವರು. ಪರಶು ಹೋರಪೇಟಿಯವರು.ಆಯ್.ಎಚ್.ಇದ್ಲಿ.ಮೈನು ಬಾಗವಾನ . ಶಿವಣ್ಣ ಮುಗಳಿ.ಸೇರಿದಂತೆ ಉಪಸ್ಥಿತರಿದ್ದರು.
More Stories
ಜಾತಿನಿಂದನೆ ಪ್ರಕರಣ: 98 ದೋಷಿಗಳಿಗೆ ಜೀವಾವಧಿ ಶಿಕ್ಷೆ ಮಹತ್ವದ ತೀರ್ಪು
Appointment of Kodatageri as KDP Quarterly Committee Member
ಶಾಸಕ ಜನಾರ್ಧನ ರೆಡ್ಡಿ ವಿರುದ್ಧ ಕ್ರಮಕ್ಕೆ- ಕುಬೇರ ಮಜ್ಜಿಗಿ ಅಗ್ರಹ