ನಾನು ಸರ್ಕಾರಿ ಸವಲತ್ತುಗಳನ್ನು ನಿರಾಕರಿಸಿದ್ದೇನೆ ; ಶಾಸಕ ಬಸವರಾಜ ರಾಯರಡ್ಡಿ

 

ಕೊಪ್ಪಳ : ನೂತನವಾಗಿ ರಾಜ್ಯ ಸರ್ಕಾರದಲ್ಲಿ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರಾಗಿ ನೇಮಕವಾದ ಹಿನ್ನಲೆಯಲ್ಲಿ ನಾನು ಯಾವುದೇ ಸರ್ಕಾರಿ ಸವಲತ್ತುಗಳನ್ನು ನನ್ನ ವಯಕ್ತಿಕವಾಗಿ ಪಡಿಯುವುದಿಲ್ಲ, ಅವುಗಳನ್ನು ಪೂರ್ಣವಾಗಿ ನಿರಾಕರಿಸಿದ್ದೇನೆ ಎಂದು ಮಾಜಿ ಸಚಿವ, ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಯಲಬುರ್ಗಾ ಶಾಸಕ ಬಸವರಾಜ ರಾಯರಡ್ಡಿ ಹೇಳಿದರು.
ನಗರದ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು. ನನಗೆ ಯಾವುದೇ ಅಧಿಕಾರದ ವ್ಯಾಮೋಹವಿಲ್ಲ, ಜನರಿಗೆ ಹತ್ತಿರವಾಗಿ ಅವರ ಸಮಸ್ಯೆಗಳಿಗೆ ಸ್ಪಂದಿಸುವಂತಹ ಸೇವೆಯನ್ನು ಮಾಡುವೆ. ಸರ್ಕಾರದಿಂದ ವಿನೂತನ ಕಾರು, ಬಂಗ್ಲೆ, ಕನಿಷ್ಟ ವೇತನ, ಸಾಮಾಗ್ರಿ ಖರೀದಿಗೆ ಅನುದಾನವಿದೆ, ಆದರೆ ನನಗೆ ವಯಕ್ತಿವಾಗಿ ಏನು ಬೇಡವೇ ಬೇಡ, ನಾನು ನನ್ನ ಹಳೆಯ ಕಾರಿನಲ್ಲೇ ಓಡಾಡುತ್ತೇನೆ. ಈಗಿರುವ ಸೌಲಭ್ಯಗಳೇ ಸಾಕು ಎಂದು ಪುನರುಚ್ಛರಿಸಿದರು.
ಲೋಕಸಭೆ ಚುನಾವಣೆಗೆ ನಾನು ಸ್ಪರ್ಧಿಯಲ್ಲ  ಈ ಹಿಂದೆ ಲೋಕಸಭೆ ಸದಸ್ಯನಾಗಿ ರಾಜ್ಯದಲ್ಲಿ ರಾಷ್ಟ್ರೀಯ ರಸ್ತೆ, ರೈಲ್ವೆ ಇಲಾಖೆ ಸೇರಿದಂತೆ ಅನೇಕ ಕೆಲಸ ಕಾರ್ಯಗಳನ್ನು ಮಾಡಿದ್ದೇನೆ. ಹೀಗಾಗಿ ನಾನು ಯಾವುದೇ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವ ಪ್ರಮೆಯೇ ಇಲ್ಲ ನಾನು ಸ್ಪರ್ಧಿಯಲ್ಲ ಎಂದರು. ಹೈಕಮಾಂಡ್ ಟಿಕೇಟ್ ನೀಡಿದರೆ ಸ್ಪರ್ಧೆ ಮಾಡುತ್ತೀರಾ..? ಎನ್ನುವ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಯಾವುದೇ ಒತ್ತಡಕ್ಕೆ ಮಣಿದು ನಾನು ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ, ನಾನು ಆವಾಗಲೇ ನನ್ನ ಸ್ವಂತ ನಿರ್ಧಾರವನ್ನು ಪ್ರಕಟಿಸಿದ್ದೇನೆ ಎಂದರು.
ರಾಜ್ಯದ ಆರ್ಥಿಕಾಭಿವದ್ಧಿಗೆ ಒತ್ತು ರಾಜ್ಯ ಸರ್ಕಾರದ ಜನಪ್ರಿಯ ‘ಉಚಿತ’ ಯೋಜನೆಗಳಿಂದ ಸಾಕಷ್ಟು ಹಣಕಾಸಿನ ಹೊರೆಯಾಗಿದೆಯಾದರೂ ಕೂಡ ಅದನ್ನು ಸರ್ಕಾರ ಸಂಪೂರ್ಣವಾಗಿ ನಿಬಾಯಿಸಲಿದೆ, ರಾಜ್ಯದಲ್ಲಿ ಸಹಕಾರಿಯಾಗುವ ವಿವಿಧ ಸಂಪನ್ಮೂಲಗಳ ಕೃಢೀಕರಣದಿಂದ ರಾಜ್ಯದ ಆರ್ಥಿಕ ಅಭಿವೃದ್ಧಿಗೆ ಚಿಂತನೆ ಮಾಡುವೆ. ರಾಜ್ಯ ಸರ್ಕಾರದಲ್ಲಿ ಹಣಕಾಸಿನ ಬಿಕ್ಕಟ್ಟು ಏನು ಇಲ್ಲ, ಸರಿಯಾದ ರೀತಿ ನಿರ್ವಾಹಣೆ ಕುರಿತು ಸಮಗ್ರ ಚರ್ಚೆ ಮಾಡಿ ಆರ್ಥಿಕಾಭಿವೃದ್ಧಿಗೆ ಸಂಘಟಿತ ಒತ್ತು ನೀಡುವುದಾಗಿ ಹೇಳಿದರು.
error: Content is protected !!