ಗಜೇಂದ್ರಗಡದಲ್ಲಿ ಬೆಳ್ಳಂಬೆಳಿಗ್ಗೆ ಜೆಸಿಬಿ ಆರ್ಭಟ : ಪುರಸಭೆಯಿಂದ ನಗರದಲ್ಲಿನ ಅನಧಿಕೃತ ಗೂಡಂಗಡಿಗಳ ತೆರವು
ಕೊಡರಗೇರಿ ಎಕ್ಸಪ್ರೆಸ್ ಸುದ್ದಿ
ಗಜೇಂದ್ರಗಡ : ಗಜೇಂದ್ರಗಡ ನಗರದ ತಹಶಿಲ್ದಾರರ ಕಾರ್ಯಾಲಯದ ಸುತ್ತಮುತ್ತಲಿನಲ್ಲಿರುವ ಅನಧಿಕೃತ ಗೂಡಂಗಡಿಗಳನ್ನು ಪುರಸಭೆ ಅಧಿಕಾರಿಗಳು ಬೆಳ್ಳಂಬೆಳ್ಳಿಗೆ ತೆರವು ಕಾರ್ಯಾಚರಣೆ ನಡೆಸಿದರು. ತಹಶಿಲ್ದಾರರ ಕಾರ್ಯಾಲಯದ ಸುತ್ತಮುತ್ತಲೂ ಸು.೫೦ ಕ್ಕೂ ಹೆಚ್ಚು ಅಂಗಡಿಗಳು ಇದ್ದು ಅವುಗಳನ್ನು ಪೋಲಿಸ್ ಇಲಾಖೆಯ ಭಧ್ರತೆಯಲ್ಲಿ ತೆರವು ಕಾರ್ಯಾ ನಡೆದಿದೆ.
ಕೆಲ ಅಂಗಡಿ ಮಾಲೀಕರು ತಾವಾಗಿಯೇ ಅಂಗಡಿಯ ತೆರವು ಕಾರ್ಯದಲ್ಲಿ ಮುಂದಾದರೆ , ಇನ್ನೂ ಕೆಲ ಅಂಗಡಿಗಳ ಪುರಸಭೆ ಜೆಸಿಬಿಯಿಂದ ತೆರವು ಕಾರ್ಯ ಮಾಡಲಾಯಿತು. ಈ ವೇಳೆ ಪುರಸಭೆ ಅಧಿಕಾರಿಗಳು ಹಾಗೂ ವ್ಯಾಪಾರಸ್ಥರ ಮಧ್ಯ ವಾಗ್ವಾದ, ಗೊಂದಲದ ವಾತಾವರಣ ಸೃಷ್ಟಿಯಾಯಿತು.
ಈ ಕುರಿತಂತೆ ಪುರಸಭೆ ಪ್ರಭಾರಿ ಮುಖ್ಯಾಧಿಕಾರಿ ಬಸವರಾಜ ಬಳಗಾನೂರ ಮಾಧ್ಯಮದ ಜೊತೆ ಮಾತನಾಡಿ ತಹಶಿಲ್ದಾರರ ಕಛೇರಿಗೆ ಸು.೨೫ ಕ್ಕೂ ಹೆಚ್ಚು ಹಳ್ಳಿಯ ಜನರು ನಿತ್ಯ ಕಛೇರಿಗೆ ಬೇಟಿ ನೀಡುತ್ತಾರೆ. ಈ ನಿಟ್ಟಿನಲ್ಲಿ ಸಾರ್ವಜನಿಕರಿಗೆ, ವಾಹನ ಸವಾರರಿಗೆ, ಬಸ್ ಸಂಚಾರಕ್ಕೆ ತೊಂದರೆಯಾದ ಹಿನ್ನಲೆಯಲ್ಲಿ ಅನಧಿಕೃತ ಅಂಗಡಿಗಳನ್ನು ತೆರವು ಮಾಡಿರುವುದಾಗಿ ತಿಳಿಸಿದರು.
More Stories
ಜಾತಿನಿಂದನೆ ಪ್ರಕರಣ: 98 ದೋಷಿಗಳಿಗೆ ಜೀವಾವಧಿ ಶಿಕ್ಷೆ ಮಹತ್ವದ ತೀರ್ಪು
Appointment of Kodatageri as KDP Quarterly Committee Member
ಶಾಸಕ ಜನಾರ್ಧನ ರೆಡ್ಡಿ ವಿರುದ್ಧ ಕ್ರಮಕ್ಕೆ- ಕುಬೇರ ಮಜ್ಜಿಗಿ ಅಗ್ರಹ