ಡಿ.೨೫ ರಂದು ಗಜೇಂದ್ರಗಡದಲ್ಲಿ ಕನಕದಾಸ ಜಯಂತಿ ಆಚರಣೆ.

 ಡಿ.೨೫ ರಂದು ಗಜೇಂದ್ರಗಡದಲ್ಲಿ ಕನಕದಾಸ ಜಯಂತಿ ಆಚರಣೆ.

ಕೊಡತಗೇರಿ ಎಕ್ಸ್‌ಪ್ರೆಸ್‌ ಸುದ್ದಿ
ಗಜೇಂದ್ರಗಡ::

ಡಿಸೆಂಬರ್ ತಿಂಗಳ ೨೫ ನೇ ತಾರೀಖಿನಂದು ದಾಸ ಶ್ರೇಷ್ಠ ಭಕ್ತ ಕನಕದಾಸರ ೫೩೬ ನೇ ಜಯಂತೋತ್ಸವವನ್ನು ನಗರದ ಬಾಬು‌ ಜಗಜೀವನರಾವ ಭವನದಲ್ಲಿ ಅದ್ದೂರಿಯಾಗಿ ಆಚರಣೆ ಮಾಡಲಾಗುತ್ತದೆ ಎಂದು ಹಿರಿಯ ನ್ಯಾಯವಾದಿ ವಿ.ಆರ್.ಗುಡಿಸಾಗರ ಹೇಳಿದರು.

ನಗರದ ರೋಣ ರಸ್ತೆಯಲ್ಲಿನ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಗಜೇಂದ್ರಗಡ ಹಾಗೂ ರೋಣ ತಾಲೂಕಿನ ಕುರುಬರ ಸಂಘದಿಂದ ಬೃಹತ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಮುಂಜಾನೆ ೧೦ ಗಂಟೆಗೆ ನಗರದ ಗರಡಿ ಮನೆಯಿಂದ ನಾಡಿನ ವಿವಿಧ ಕಡೆಗಳಿಂದ ಆಗಮಿಸಿದ ಡೊಳ್ಳು ಕುಣಿತ , ಸಕಲ ವಾದ್ಯಗಳೊಂದಿಗೆ ಮಹಿಳೆಯರು ಕುಂಭ ಕಳಸ ಹೊತ್ತು ಭಕ್ತ ಕನಕದಾಸರ ಭಾವಚಿತ್ರದ ಭವ್ಯ ಮೆರವಣಿಗೆ ಸಾಗಲಿದೆ. ಸು.೧೧:೪೫ ಕ್ಕೆ ಬಾಬು ಜಗಜೀವನರಾವ್ ಭವನಕ್ಕೆ ತೆರಳಿ ವೇದಿಕೆ ಕಾರ್ಯಕ್ರಮ ಜರುಗುವುದು.

ಕಾರ್ಯಕ್ರಮದ ದಿವ್ಯ ಸಾನಿದ್ಯವನ್ನು ಪರಮಪೂಜ್ಯ ಶ್ರೀ ಬಸವರಾಜ ದೇವರು, ಪರಮಪೂಜ್ಯ ಶ್ರೀ ಶಿವಸಿದ್ದೇಶ್ವರ‌ ಮಹಾಸ್ವಾಮಿಗಳು, ಪರಮಪೂಜ್ಯ ಶ್ರೀ ಷಣ್ಮುಖಪ್ಪಜ್ಜ ಧರ್ಮರ ಇವರು ವಹಿಸಲಿದ್ದಾರೆ.
ಕಾರ್ಯಕ್ರಮವನ್ನು ರೋಣ ಶಾಸಕ ಜಿ.ಎಸ್.ಪಾಟೀಲ ಉದ್ಘಾಟಿಸುವರು, ಕನಕದಾಸರ ಭಾವಚಿತ್ರಕ್ಕೆ ಮಾಲಾರ್ಪಣೆಯನ್ನು ಮಿಥುನ ಪಾಟೀಲ ಹಾಗೂ ಸಂಗೊಳ್ಳಿ ರಾಯಣ್ಣರವರ ಭಾವಚಿತ್ರಕ್ಕೆ ಮಾಲಾರ್ಪಣೆಯನ್ನು ಎಚ್.ಎಸ್.ಸೋಂಪೂರ ನೆರವೇರಿಸುವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿ.ಆರ್.ಗುಡಿಸಾಗರ ವಹಿಸಲಿದ್ದಾರೆ. ಇನ್ನೂ ಪ್ರಾಸ್ತಾವಿಕವಾಗಿ ಗಜೇಂದ್ರಗಡ ತಾಲೂಕಾ ಕುರುಬರ ಸಂಘದ ಅಧ್ಯಕ್ಷರಾದ ಅಂದಪ್ಪ ಬಿಚ್ಚೂರ ಮಾತನಾಡಲಿದ್ದಾರೆ.ಕಾರ್ಯಕ್ರಮ‌ ನಿರೂಪಣೆಯನ್ನು ತಾಲೂಕಾ ಪ್ರದಾನ ಕಾರ್ಯದರ್ಶಿಗಳಾದ ಕೆ.ಎಸ್.ಕೊಡತಗೇರಿ ನಡೆಸಿಕೊಡಲಿದ್ದಾರೆ ಕಾರ್ಯಕ್ರಮಕ್ಕೆ ನಾಡಿನ ಹಾಗೂ ತಾಲೂಕಿನ ಗಣ್ಯ ವ್ಯಕ್ತಿಗಳು ಅಥಿತಿಗಳಾಗಿ ಭಾಗಿಯಾಗಲಿದ್ದಾರೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಎಚ್.ಎಸ್.ಸೋಂಪೂರ, ಅಂದಪ್ಪ ಬಿಚ್ಚೂರ, ಕೆ.ಎಸ್.ಕೊಡತಗೇರಿ, ಕಾಂಗ್ರೆಸ್ ಪಕ್ಷದ ಸೇವಾದಳದ ಜಿಲಾಧ್ಯಕ್ಷರಾದ ಬಸವರಾಜ ಬೆನಕನವಾರಿ, ರಾಮಚಂದ್ರ ಹುದ್ದಾರ, ಶರಣಪ್ಪ ಕೆಂಪನಾಳ ಅಶೋಕ ವದೇಗೋಳ, ಸೇರಿದಂತೆ ಅನೇಕರು

error: Content is protected !!