ಪ್ರಶಸ್ತಿಗಳು ಮಾರಾಟಕ್ಕಿವೆ : ಪತ್ರಕರ್ತ ಗೋವಿಂದ ರಾಜ
ಕೊಡತಗೇರಿ ಎಕ್ಸಪ್ರೆಸ್ ಸುದ್ದಿ
ಕೊಪ್ಪಳ : ಈ ಹಿಂದೆ ಪ್ರಶಸ್ತಿಗಳು ಸಮಾಜ ಮುಖಿ ಕೆಲಸಗಳನ್ನು ನೋಡಿ ಮತ್ತು ಅವರ ಸೇವೆಯನ್ನು ಗುರುತಿಸಿ ಪ್ರಶಸ್ತಿ ಗಳನ್ನು ನೀಡುತ್ತಿದ್ದರು .ಆದರೆ ಇಂದಿನ ಆಧುನಿಕ ಯುಗದಲ್ಲಿ ಪ್ರಶಸ್ತಿ ಗಳು ಮಾರಾಟ ಕ್ಕಿರುವದು ವಿಷಾದನೀಯ ಸಂಗತಿ ಎಂದು ಪತ್ರಕರ್ತ ಹಾಗೂ ಯುವ ಬರಹಗಾರ ಗೋವಿಂದ ರಾಜ್ ಬೂದಗುಂಪಾ ಬೆಸರ ವ್ಯಕ್ತ ಪಡಿಸಿದರು. ಅವರು ನಿನ್ನೆ ನೆಡದ ರಾಜ್ಯಮಟ್ಟದ ಡಿ ವಿ ಗುಂಡಪ್ಪ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.
ಅವರು ಕೊಪ್ಪಳದ ತಾಲೂಕ ಪಂಚಾಯತ ಸಭಾಂಗಣದಲ್ಲಿ ಧ್ರುವ ಮೀಡಿಯಾ ಎಜುಕೇಶನ್ ಸಂಸ್ಥೆಯವರು ನಡೆಸಿದ ಪತ್ರಿಕಾ ದಿನಾಚರಣೆಯಲ್ಲಿ ಗೋವಿಂದರಾಜ್ ಬೂದುಗುಂಪ ಅವರಿಗೆ ರಾಜ್ಯಮಟ್ಟದ ಡಿ ವಿ ಗುಂಡಪ್ಪ ಪ್ರಶಸ್ತಿ ಪ್ರಧಾನ ಮಾಡಲಾಯಿತು. ಪ್ರಶಸ್ತಿ ಸ್ವೀಕರಿಸಿದ ನಂತರ ಮಾತನಾಡಿದ ಗೋವಿಂದರಾಜ ಬುದಗುಂಪ ಪ್ರಶಸ್ತಿಗಳು ಮಾರಾಟಕ್ಕಿವೆ ಇಪ್ಪತ್ತು ಸಾವಿರ ರೂಪಾಯಿ ಕೊಟ್ಟರೆ ಡಾಕ್ಟರೇಟ್ ಕೊಡುತ್ತಾರೆ ಹೀಗಾಗಿ ಪ್ರಶಸ್ತಿಗಳಿಗೆ ಇದ್ದ ಗೌರವ ಕೂಡ ಕಡಿಮೆಯಾಗುತ್ತಿದೆ, ಆದರೆ ನನ್ನ ಜೀವಮಾನದಲ್ಲಿ ಈಗ ನನಗೆ ಕೊಡುತ್ತಿರುವುದು ಎರಡನೇ ಪ್ರಶಸ್ತಿ ಮೊದಲನೇದು ಚಾಲುಕ್ಯ ವಿಕ್ರಮಾದಿತ್ಯ ಪ್ರಶಸ್ತಿ ಮತ್ತು ಎರಡನೆಯದು ಈಗ ಪಡೆದಿರುವ ಡಿವಿ ಗುಂಡಪ್ಪ ಪ್ರಶಸ್ತಿ ಈ ಪ್ರಶಸ್ತಿಗಳು ನಾನು ಕೇಳದೆ ಯಾವುದೇ ಲಾಬಿ ಮಾಡದೆ ನನ್ನನ್ನು ಗುರುತಿಸಿ ಕೊಟ್ಟಂತ ಮತ್ತು ನನ್ನ ಗೌರವ ಹೆಚ್ಚಿಸಿದ ಪ್ರಶಸ್ತಿಗಳಾಗಿವೆ ಎಂದರು,
ಮುದ್ರಣ ಮಾಧ್ಯಮದ ಬಗ್ಗೆ ಮಾತನಾಡಿದ ಅವರು ಪತ್ರಕರ್ತರು ತಂತ್ರಜ್ಞಾನಕ್ಕೆ ಹೋಗಿಕೊಳ್ಳಬೇಕು ಇಲ್ಲದಿದ್ದರೆ ಭಾವಿ ಒಳಗಿನ ಕಪ್ಪೆಯಾಗುತ್ತಾರೆ, ಅಜ್ಜ ಹಾಕಿದ ಆಲದ ಮರದ ನೆರಳೆ ಸಾಕು ಎಂದರೆ ಏನು ಮಾಡಲು ಆಗುವುದಿಲ್ಲ ತಂತ್ರಜ್ಞಾನದ ಜೊತೆಗೆ ಮುದ್ರಣ ಮಾಧ್ಯಮವು ಹೊಂದಿಕೊಂಡು ಹೋಗಬೇಕು ಇಲ್ಲದಿದ್ದರೆ ಮುದ್ರಣ ಪತ್ರಿಕೆಗಳು ಜನರನ್ನು ತಲುಪಲು ಸಾಧ್ಯವಾಗುವುದಿಲ್ಲ,
ಕೆಲವು ಪತ್ರಿಕೆಯ ಸಂಪಾದಕರು ಡಿಜಿಟಲ್ ಮಾಧ್ಯಮದವರ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಅದು ಸರಿಯಲ್ಲ ಡಿಜಿಟಲ್ ಮಾಧ್ಯಮದ ಜೊತೆ ಪೈಪೋಟಿ ಕೊಡಲಾಗದೆ ಈ ರೀತಿಯಾಗಿ ನಡೆದುಕೊಳ್ಳುತ್ತಿದ್ದಾರೆ, ಅವರು ಕೂಡ ಡಿಜಿಟಲ್ ಮಾಧ್ಯಮವನ್ನು ಬಳಸಿಕೊಳ್ಳಬೇಕು ಅದರಿಂದ ಹೆಚ್ಚು ಜನರೊಂದಿಗೆ ಸಂಪರ್ಕಗೊಳ್ಳಲು ಸಾಧ್ಯವಾಗುತ್ತದೆ ಎಂದು ಮಾರ್ಮಿಕವಾಗಿ ನುಡಿದರು
ಕಾರ್ಯಕ್ರಮದಲ್ಲಿ ಹೆಬ್ಬಾಳ ಸಂಸ್ಥಾನ ಮಠದ ಶ್ರೀ ನಾಗಭೂಷಣ ಶಿವಾಚಾರ್ಯ ಸ್ವಾಮಿಗಳು ಭಾಗವಹಿಸಿ ಪತ್ರಕರ್ತರ ಕಷ್ಟ ನಷ್ಟಗಳ ಬಗ್ಗೆ ವಿಸ್ತಾರವಾಗಿ ಮಾತನಾಡಿದರು,
ಕಾರ್ಯಕ್ರಮದಲ್ಲಿ ಜೆಡಿಎಸ್ ಮುಖಂಡರಾದ ವೀರೇಶ್ ಮಾಂತಯ್ಯನ ಮಠ, ಕಾಂಗ್ರೆಸ್ ಮುಖಂಡರಾದ ಕೆ ಎಂ ಸಯ್ಯದ್, ಗಿರೀಶ್ ಹಿರೇಮಠ್, ಕೊಪ್ಪಳದ ಚುಟುಕುಗಳ ಬ್ರಹ್ಮ ಎಂದೇ ಖ್ಯಾತಿಗಳಿಸಿದ ಹನುಮಂತಪ್ಪ ಹಂಡಗಿ, ಪತ್ರಕರ್ತರಾದ ಸಾಧಿಕಲಿ, ಎಚ್ಎಸ್ ಹರೀಶ್, ಜಿಎಸ್ ಗೋನಾಳ್, ಕನ್ನಡಪರ ಹೋರಾಟಗಾರರಾದ ವಿಜಯಕುಮಾರ್ ಕವಲೂರು, ಮತ್ತು ವಕೀಲರಾದ ಕೆ ಎಸ್ ಕೊಡತಗೇರಿ, ಜಿ ಎಮ್ ಶಿವಪುರ, ಮತ್ತು ಕಾಟನ್ ಪಾಷಾ, ಅಲ್ಲಾಭಕ್ಷಿ ಚಳ್ಳಾರಿ ಅತಿಥಿಗಳಾಗಿ ಆಗಮಿಸಿದ್ದರು,
More Stories
ಜಾತಿನಿಂದನೆ ಪ್ರಕರಣ: 98 ದೋಷಿಗಳಿಗೆ ಜೀವಾವಧಿ ಶಿಕ್ಷೆ ಮಹತ್ವದ ತೀರ್ಪು
Appointment of Kodatageri as KDP Quarterly Committee Member
ಶಾಸಕ ಜನಾರ್ಧನ ರೆಡ್ಡಿ ವಿರುದ್ಧ ಕ್ರಮಕ್ಕೆ- ಕುಬೇರ ಮಜ್ಜಿಗಿ ಅಗ್ರಹ