ನಿಮ್ಮೂರಿನ ಋಣ ತೀರಿಸಲಾಗುವುದಿಲ್ಲ : ಶಿಕ್ಷಕ ದಾದ್ಮಿ
ಕೊಡತಗೇರಿ ಎಕ್ಸಪ್ರೆಸ್ ಸುದ್ದಿ
ಗಜೇಂದ್ರಗಡ : ಸಮೀಪದ ಗೋಗೇರಿ ಸರಕಾರಿ ಪ್ರೌಢಶಾಲೆಯಲ್ಲಿ ಸುಮಾರು 15 ವರ್ಷಗಳ ಕಾಲ ಸುದೀರ್ಘ ಸೇವೆ ಸಲ್ಲಿಸಿದ ಶಿಕ್ಷಕ ಎನ್.ಜಿ.ದಾದ್ಮಿ ಹಾಗೂ ಶಿಕ್ಷಕಿ ಹವಳಪ್ಪನವರ್ ಬೀಳ್ಕೊಡು ಸಮಾರಂಭದಲ್ಲಿ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ದೈಹಿಕ ಶಿಕ್ಷಕ ಎನ್.ಜಿ.ದಾದ್ಮಿ ಮಾತನಾಡಿ ನಾನು ಮೊದಲು ಸರಕಾರಿ ನೌಕರಿಯನ್ನು ಇದೇ ಊರಿನಲ್ಲಿ ದೈಹಿಕ ಶಿಕ್ಷಕನಾಗಿ ಕಾರ್ಯನಿರ್ವಹಿಸಲು ಬಂದೇ ಅಲ್ಲಿಂದ ಇಲ್ಲಿಯವರೆಗೂ ನನ್ನನ್ನು ನಿಮ್ಮೂರಿನ ಮಗನಾಗಿ ನೋಡಿಕೊಂಡಿದ್ದೀರಿ, ನಿಮ್ಮೂರಿನ ಋಣವನ್ನ ಈ ಜನ್ಮದಲ್ಲಿ ತೀರಿಸಲಾಗುವುದಿಲ್ಲ ಎಂದು ಭಾವನಾತ್ಮಕವಾಗಿ ದೈಹಿಕ ಶಿಕ್ಷಕ ದಾದ್ಮಿಯವರು ಹೇಳಿದರು.
ನಾನು ಈ ಶಾಲೆಯಲ್ಲಿ ಸೇವೆ ಸಲ್ಲಿಸಲು ಬಂದು ಅನೇಕ ಕ್ರೀಡಾಪಟುಗಳನ್ನು ರಾಜ್ಯಮಟ್ಟದವರಿಗೆ ಆಡಿಸಲು ಪ್ರೇರೇಪಿಸಿದ್ದು ನನ್ನೂರಿನ ಗೋಗೇರಿಯ ಹಿರಿಯರು ಪಾಲಕರು ಮತ್ತು ಅನೇಕ ಯುವಕರು ನನಗೆ ಕೈಜೋಡಿಸಿದ್ದೀರಿ ನಾನು ಈ ಊರಿನಲ್ಲಿ ಇಷ್ಟು ದಿನ ಇರಲು ಸಹಕರಿಸಿದ್ದೀರಿ ನನಗೆ ಮಕ್ಕಳನ್ನು ಮತ್ತು ನಿಮ್ಮನ್ನು ಬಿಟ್ಟು ಹೋಗಲು ಕಷ್ಟವಾಗುತ್ತಿದೆ ಅನಿವಾರ್ಯವಾಗಿ ನಾನು ಈ ಊರಿನಿಂದ ನಿರ್ಗಮಿಸಬೇಕಾಗಿದೆ. ಆದರೆ ನನ್ನ ಜೀವ ಇರುವವರೆಗೂ ಕೂಡ ಈ ಊರನ್ನು ನಾನು ಮರೆಯುವುದಿಲ್ಲ ಮಕ್ಕಳನ್ನು ಮರೆಯುವುದಿಲ್ಲ ನನಗೆ ಸಮಯ ಸಿಕ್ಕಾಗ ನಾನು ಈ ಶಾಲೆಗೆ ಬಂದು ಮಕ್ಕಳಿಗೆ ಆಟವನ್ನು ಆಡಿಸುತ್ತೇನೆ ಎಂದರು. ನಂತರ ಶಿಕ್ಷಕಿ ಅವಳಪ್ಪನವರು ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಅವಳಪ್ಪನವರು ನಾನು ಶಿಕ್ಷಕಿಯಾಗಿ ಈ ಊರಿಗೆ ಬಂದು ಸೇವೆಯನ್ನು ಕೈಯಲು ನೀವೆಲ್ಲರೂ ಸಹಕರಿಸಿದ್ದಿರಿ ನಾನು 15 ವರ್ಷಗಳ ಕಾಲ ಸೇವೆಯನ್ನು ಸಲ್ಲಿಸಿದರು ಕೂಡ ನನ್ನನ್ನು ಯಾವುದೇ ಪಾಲಕರು ಬಂದು ಕೂಡ ಏನು ಅಂದಿಲ್ಲ ಅನೇಕ ಮಕ್ಕಳನ್ನು ಹೊಡೆದಿದ್ದೇನೆ ಬೈದಿದ್ದೇನೆ ಈ ಊರಿನ ಹಿರಿಯರು ಎಲ್ಲರೂ ನಮಗೆ ಸಹಕರಿಸಿದ್ದೀರಿ ಅದಕ್ಕೆ ಧನ್ಯವಾದಗಳು ಎಂದು ಊರಿನ ನಡುವಿನ ಸಂಬಂಧ ವನ್ನು ನೆನಪಿಸಿಕೊಂಡು ಕಣ್ಷಿರು ಹಾಕಿದರು.
ಈ ಮೊದಲು ಗ್ರಾಮಸ್ಥರಾದ ಹೇಮಾಪತಿ ಭೋಸಲೆ, ಕೆ.ಎಸ್.ಕೊಡತಗೇರಿ,ಬಸವರಾಜ ಮೂಲಿಮನಿ, ಬಸವರಾಜ ಮಾದರ ಅವರು ಮಾತನಾಡಿದರು.
ಮಕ್ಕಳು ಕೂಡ ಮಾತನಾಡಿ ಶಿಕ್ಷಕರ ಮತ್ತು ಶಿಕ್ಷಕಿಯರ ಸಂಬಂಧವನ್ನು ನೆನದು ಕಣ್ಣಿರು ಹಾಕಿದರು.
ನಂತರ ದೈಹಿಕ ಶಿಕ್ಷಕ ಎನ್.ಜಿ. ದಾದ್ಮಿ ಅವರು ಸರ್ಕಾರಿ ಪ್ರಾಥಮಿಕ ಶಾಲೆ ಗೋಗೇರಿ ಸರಕಾರಿ ಪ್ರೌಢಶಾಲೆ ಗೋಗೇರಿ ಬಿಸಿಯೂಟದ ಸಿಬ್ಬಂದಿಗಳಿಗೆ ಎಲ್ಲರನ್ನು ಸನ್ಮಾನಿಸಿ ಗೌರವಿಸಿ ಅವರ ಜೊತೆ ಇದ್ದ ಒಡನಾಟವನ್ನು ನೆನೆದು ಕಣ್ಣೀರು ಹಾಕಿದರು. ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಶಾಲೆಯ ಮುಖ್ಯೋಪಾಧ್ಯಾಯರಾದ ಕೆ.ಎಸ್ ರಾಜು ರವರು ಮಾತನಾಡಿದರು ಮತ್ತು ಬಳಗೇರ್ ಶಿಕ್ಷಕರು ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಸ್ವಾಗತವನ್ನು ಶಿಕ್ಷಕ ಪರಶುರಾಮ ಹೋರಪೇಟಿಯವರು ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿ ಸದಸ್ಯರಾದ ಕಳಕಪ್ಪ ಬೋಸ್ಲೆ. ಕಟ್ಟಪ್ಪ ಮಾದರ್, ಶಂಕ್ರಯ್ಯಜ್ಜ ಮೇಟಿ ಮಠ ,ಉಪಸ್ಥಿತರಿದ್ದರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಎಸ್‌ಡಿ.ಎಂ.ಸಿ ಅಧ್ಯಕ್ಷರಾದ ಪರಶುರಾಮ್ ಚವಡಿ ವಹಿಸಿಕೊಂಡಿದ್ದರು ಕಾರ್ಯಕ್ರಮದಲ್ಲಿ ಶಾಲೆಯ ಶಿಕ್ಷಕ ಶಿಕ್ಷಕಿಯರು ವಿದ್ಯಾರ್ಥಿ ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.
More Stories
ಜಾತಿನಿಂದನೆ ಪ್ರಕರಣ: 98 ದೋಷಿಗಳಿಗೆ ಜೀವಾವಧಿ ಶಿಕ್ಷೆ ಮಹತ್ವದ ತೀರ್ಪು
Appointment of Kodatageri as KDP Quarterly Committee Member
ಶಾಸಕ ಜನಾರ್ಧನ ರೆಡ್ಡಿ ವಿರುದ್ಧ ಕ್ರಮಕ್ಕೆ- ಕುಬೇರ ಮಜ್ಜಿಗಿ ಅಗ್ರಹ