9 ಕ್ವಿಂಟಾಲ್ ಅನ್ನಭಾಗ್ಯ ಅಕ್ಕಿ ವಶ
ಕೊಡತಗೇರಿ ಎಕ್ಸ್‌ಪ್ರೆಸ್ ಡಿಜಿಟಲ್ ಹೌಸ್
ರೋಣ: ತಾಲೂಕಿನ ಹೊಳೆಸಲೂರ ಕ್ಲಾಸ್ ಬಳಿ ಅಕ್ರಮವಾಗಿ ಅನ್ನಭಾಗ್ಯ ಅಕ್ಕಿ ಸಾಗಾಟ ಮಾಡುತ್ತಿದ್ದ ವಾಹನದ ಮೇಲೆ ದಾಳಿ ನಡೆಸಿ ಜಿತೋ ವಾಹನದಲ್ಲಿ ಸಾಗಿಸುತ್ತಿದ್ದ 9 ಕ್ವಿಂಟಾಲ್ ಅಕ್ಕಿ ಹಾಗೂ 1 ಕ್ವಿಂಟಾಲ್ ಜೋಳ ಮತ್ತು ಚಾಲಕನನ್ನು ವಶಕ್ಕೆ ಪಡೆದುಕೊಂಡ ಘಟನೆ ಶನಿವಾರ ನಡೆದಿದೆ.
ಬಸವರಾಜ ಕಾಶಪ್ಪ ಅಂಗಡಿ (24) ಬಂಧಿತ ಚಾಲಕ
ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಆಹಾರ ಇಲಾಖೆ ಅಧಿಕಾರಿಗಳು ಹುನಗುಂಡಿ ಗ್ರಾಮದಿಂದ ರೋಣಕ್ಕೆ ಸಾಗಿಸುತ್ತಿದ್ದಾಗ ಹೊಳೆಆಲೂರ ಕ್ರಾಸ್ ಬಳಿ ವಾಹನ ತಡೆದು ತಪಾಸಣೆ ನಡೆಸಿದರು. ಅದರಲ್ಲಿ ಅಕ್ರಮವಾಗಿ
ಸಾಗಿಸುತ್ತಿದ್ದ ಅನ್ನಭಾಗ್ಯ ಅಕ್ಕಿಯ 20 ಚೀಲಗಳನ್ನು ವಶಕ್ಕೆ ಪಡೆದುಕೊಂಡಿ ದ್ದಾರೆ.
ಪೊಲೀಸರು ಹಾಗೂ ಆಹಾರ ಇಲಾಖೆ ಅಧಿಕಾರಿಗಳು ಜಂಟಿ ಕಾರ್ಯಾಚರಣೆ
ಆಹಾರ ಇಲಾಖೆ ನಿರೀಕ್ಷಕಿ ಸುವರ್ಣಾ ಜುಮ್ಮನಕಟ್ಟಿ, ಅಪರಾಧ ವಿಭಾಗದ ಪಿಎಸ್‌ಐ ವಿ.ಎಸ್. ಚವಡಿ, ಆಹಾರ ಶಿರಸ್ತೇದಾರೆ ಎಸ್.ಪಿ. ಚವಡಿ, ಪಿಸಿಗಳಾದ ಮಂಜುನಾಥ ಕುರಿ, ಸಿ.ಎಂ. ಹರ್ತಿ ಹಾಗೂ ಪಿಎಸ್ ಡಿ.ಎಂ. ಚಿತ್ರಗಾರ ಇದ್ದರು.

More Stories
ಗಜೇಂದ್ರಗಡ ಸಬ್ರಿಜಿಸ್ಟ್ರಾರ್ ಕಚೇರಿ: ‘ಲಂಚ’ ಕೊಡದಿದ್ದರೆ ಇಲ್ಲಿ ಕೆಲಸ ನಡೆಯಲ್ಲ!
ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಠೋಡ್ ಗೆ ಸನ್ಮಾನ
ಹಿರಿಯ ನಾಗರಿಕರನ್ನು ಗೌರವದಿಂದ ಕಾಣಬೇಕು : ನ್ಯಾಯಧೀಶ ಮಾಹದೇವಪ್ಪ ಎಚ್