ಮಹಿಳೆ ಕಾಣೆ ಪ್ರಕರಣ ದಾಖಲು

ಮಹಿಳೆ ಕಾಣೆ ಪ್ರಕರಣ ದಾಖಲು

ಕೊಡತಗೇರಿ ಎಕ್ಸ್‌ಪ್ರೆಸ್‌ ಡಿಜಿಟಲ್ ಹೌಸ್‌

ಕೊಟ್ಟೂರು:
ದಿನಾಂಕ 5-08-2025 ರಂದು ಪಿರ್ಯಾದಾರರಾದ ಶ್ರೀ ಮತಿ ರತ್ನಮ್ಮ ಗಂಡ ಲೇಟ್ ನಾಗಪ್ಪ .48 ವರ್ಷ ಭೋವಿ ಜನಾಂಗ ಕೂಲಿ ಕೆಲಸ ವಾಸ: ಮಡ್ಡೇರ್ ಓಣಿ ಪಿ ಎಲ್ ಡಿ ಬ್ಯಾಂಕ್ ಹಿಂದಗಡೆ ಕೊಟ್ಟೂರು ವಿಜಯನಗರ ಜಿಲ್ಲೆ ಇವರು ಕೊಟ್ಟೂರು ಪೊಲೀಸ್ ಠಾಣೆಗೆ ಹಾಜರಾಗಿ ಪಿರ್ಯಾದಿಯಾ ಠಾಣೆಗೆ ನೀಡಿದ ದೂರಿನ ಸಾರಂಶ 03-08-2025 ರಂದು ರಾತ್ರಿ 11-00 ಗಂಟೆಯಿಂದ 04- 8-2025 ರಂದು ಬೆಳಿಗ್ಗೆ 6-00 ಗಂಟೆಯ ಅವಧಿಯಲ್ಲಿ ಕೊಟ್ಟೂರು ಪಟ್ಟಣದ ಮಢ್ಡೇರ್ ಓಣಿಯಲ್ಲಿ ಪಿ, ಎಲ್, ಡಿ ಬ್ಯಾಂಕ್ ಹಿಂದಗಡೆ ಇರುವ ತನ್ನ ಮನೆಯಿಂದ ತನ್ನ ಮಗಳು ವಿ,ಅಕ್ಷತಾ ವಯಸ್ಸು: 23 ವರ್ಷ ಈಕೆಯು ಮನೆಯಲ್ಲಿ ಮಲಗಿದ್ದವಳು ಯಾರಿಗೂ ಹೇಳದೇ ಎದ್ದು ಹೋಗಿ ಕಾಣೆಯಾಗಿರುತ್ತಾಳೆಂದು ಕಾಣೆಯಾಗಿರುವ ತನ್ನ ಮಗಳನ್ನು ಹುಡುಕಿ ಪತ್ತೆ ಮಾಡಲು ಇದ್ದ ದೂರಿನ ಸಾರಂಶದ ಮೇರಿಗೆ
ಕಾಣೆಯಾಗಿರುವ ತನ್ನ ಮಗಳನ್ನು ಪತ್ತೆಮಾಡುವಂತೆ ಇದ್ದ ದೂರಿನ ಸಾರಂಶದ ಮೇರೆಗೆ ಕೊಟ್ಟೂರು ಪೊಲೀಸ್ ಠಾಣೆಯಲ್ಲಿ ಗುನ್ನೆ ನಂ168/2025 ಕಲಂ ಮಹಿಳೆ ಕಾಣೆ ರಿತ್ಯ ಪ್ರಕರಣ ದಾಖಲಿಸಿಕೊಂಡು ಕಾಣೆಯಾದ
ಮಹಿಳೆಯನ್ನು ಪತ್ತೆಮಾಡಲು ಪೊಲೀಸ್ ಸಿಬ್ಬಂದಿಗಳು ಮುಂದಿನ ಕ್ರಮ ಕೈಗೊಂಡಿದ್ದಾರೆಂದು,

ಪಿ ಎಸ್ ಐ ಗೀತಾಂಜಲಿ ಶಿಂಧೆ ರವರು ಪತ್ರಿಕೆ ಪ್ರಕಟಣೆಗೆ ತಿಳಿಸಿದ್ದಾರೆ

ವರದಿ: ಚಿಗಟೇರಿ ಜಯಪ್ಪ

error: Content is protected !!