ರಂಭಾಪುರಿ ಸ್ವಾಮೀಜಿ ಹೇಳಿಕೆಗೆ ಹಿಂದುಳಿದ ದಲಿತರ ಮಠಾಧೀಶರ ಒಕ್ಕೂಟ ಖಂಡನೆ

ರಂಭಾಪುರಿ ಸ್ವಾಮೀಜಿ ಹೇಳಿಕೆಗೆ ಹಿಂದುಳಿದ ದಲಿತ ಮಠಾಧೀಶರ ಒಕ್ಕೂಟ ಖಂಡನೆ

ಕೊಡತಗೇರಿ ಎಕ್ಸಪ್ರೆಸ್ ಡಿಜಿಟಲ್‌ ನ್ಯೂಸ್
ದಾವಣಗೆರೆ: ಜಾತಿಗೊಂದು ಮಠದಿಂದ ಸಮಾಜ ಕಲುಷಿತ ಎಂಬ ರಂಭಾಪುರಿ ಸ್ವಾಮೀಜಿ ಹೇಳಿಕೆಗೆ ಹಿಂದುಳಿದ ದಲಿತ ಮಠಾಧೀಶರ ಒಕ್ಕೂಟ ಖಂಡಿಸಿದೆ.

ಭದ್ರಾವತಿಯ ಸಮಾರಂಭವೊಂದರಲ್ಲಿ ಸ್ವಾಮೀಜಿ ಈ ರೀತಿಯ ಹೇಳಿಕೆ ನೀಡಿದ್ದರು. ಈ ಬಗ್ಗೆ ಹಿಂದುಳಿದ, ದಲಿತ ಮಠಾಧೀಶರಿಂದ ಸುದ್ದಿಗೋಷ್ಠಿ ನಡೆಸಿ ಖಂಡಿಸಿದೆ.

ರಂಭಾಪುರಿ ಸ್ವಾಮೀಜಿ ತಮ್ಮ ಹೇಳಿಕೆ ಬಹಿರಂಗವಾಗಿ ವಾಪಸ್‌ ಪಡೆಯಬೇಕು. ಇಲ್ಲದ್ದಿದ್ದರೆ ತಮ್ಮ ಹೇಳಿಕೆ ಸಾಬೀತು ಪಡಿಸಬೇಕು. ರಂಭಾಪುರಿ ಸ್ವಾಮೀಜಿ ಇದೇ ರೀತಿಯ ಹೇಳಿಕೆ ಮುಂದುವರಿಸಿದರೆ ಹಿಂದುಳಿದ, ದಲಿತ ಮಠಾಧೀಶರೆಲ್ಲ ಸೇರಿ ರಾಜ್ಯಾದ್ಯಂತ ಉಗ್ರ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದರು.

ಕನಕ, ವಾಲ್ಮೀಕಿ, ಭೋವಿ, ಯಾದವ, ಮಾದಾರ ಚನ್ನಯ್ಯ ಸೇರಿದಂತೆ 15ಕ್ಕೂ ಹೆಚ್ಚು ಮಠಾಧೀಶರು ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿದ್ದರು.

ಪಂಚಪೀಠದ ಅನೇಕ ಶಾಖಾ ಮಠಗಳು ಪರಿಶಿಷ್ಟ ಜಾತಿ ಹೆಸರಲ್ಲಿ ಸರ್ಕಾರದ ಅನುದಾನ ಪಡೆದಿದ್ದು, ಎಷ್ಟು ಹಣ ಪಡೆದಿವೆ ಎಂಬುದರ ಬಗ್ಗೆ ಶ್ವೇತಪತ್ರ ಹೊರಡಿಸಲು ಆಗ್ರಹ ಪಡಿಸಿದರು.

error: Content is protected !!