ಪೋಲಿಸರು ಜನರ ಕಾವಲುಗಾರರು ಆಗದೆ ಕಂಪನಿಯ ಕಾವಲುಗಾರರಾಗಿರುವದು ವಿಪರ್ಯಾಸ : ಬೊಮ್ಮನಾಳ
ಕೊಡತಗೇರಿ Express ಡಿಜಿಟಲ್ ಡೆಸ್ಕ್
ಯಲಬುರ್ಗಾ : ತಾಲ್ಲೂಕಿನಲ್ಲಿ ಸಾವಿರಾರು ಎಕರೆ ಫಲವತ್ತಾದ ಕೃಷಿ ಭೂಮಿ ಖಾಸಗಿ ಪವನ ವಿದ್ಯುತ್ ಉತ್ಪಾದನಾ ಕಂಪನಿಗಳಿಗೆ ಪ್ರತಿನಿತ್ಯ ಮಾರಾಟವಾಗುತ್ತಿದ್ದು, ಬಹುತೇಕ ಸಣ್ಣ ಹಿಡುವಳಿದಾರರು ತಮ್ಮ ಅಲ್ಪಸ್ವಲ್ಪ ಭೂಮಿಯನ್ನು ಮಾರಾಟ ಮಾಡುವ ಮೂಲಕ ಕೃಷಿಯಿಂದ ವಿಮುಖರಾಗಿ ಅತಂತ್ರರಾಗುತ್ತಿದ್ದಾರೆ. ಇಂತಹ ಸಂಧರ್ಭದಲ್ಲಿ ಪೋಲಿಸರು ರೈತರ ಪರವಾಗಿ ನಿಲ್ಲದೆ ಜನರ ಕಾವಲುಗಾರರು ಆಗದೆ ಖಾಸಗಿ ಕಂಪನಿಯವರ ಕಾವಲುಗಾರರಾಗಿರುವದು ವಿಪರ್ಯಾಸ ಎಂದು ಸಮಾಜಿಕ ಕಾರ್ಯಕರ್ತ ಬಸವರಾಜ ಬೊಮ್ಮನಾಳ ಆರೋಪಿಸಿದ. ಅವರು ನಿನ್ನೆ ನೆಡದ ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಕೋಳಿಹಾಳ ಗ್ರಾಮದಲ್ಲಿ ಅನಧಿಕೃತ ಹೈಟೆನ್ಶನ್ ಪವನ ವಿದ್ಯುತ್ ತಂತಿ ಎಳೆಯುತ್ತಿರುವದನ್ನು ರೈತರ ಪರವಾಗಿ ಪ್ರಶ್ನಿಸಿದ್ದಕ್ಕಾಗಿ, ಬಿಜೆಪಿ ನಾಯಕ ಶರಣಪ್ಪ ಗುಂಗಾಡಿ ಅವರನ್ನು ಬಂಧಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಪ್ರಜಾಪ್ರಭುತ್ವ ವಿರೋಧಿ ನೀತಿಯಾಗಿದೆ ಇಂತಹ ಧಮಕಿ ಹಾಕುವದನ್ನು ಮತ್ತು ಜನರ ಮೇಲೆ ದೌರ್ಜನ್ಯ ಎಸಗಯವದನ್ನು ನಿಲ್ಲಿಸಬೇಕು ಮತ್ತು ಭೂಮಿ ಕಳೆದುಕೊಂಡ ರೈತರಿಗೆ ಸರಿಯಾದ ಪರಿಹಾರವನ್ನು ನೀಡಬೇಕು ಮತ್ತು ಬಲವಂತವಾಗಿ ಭೂಮಿಯನ್ನು ಸ್ವಾಧಿನ ಪಡಿಸಿಕೊಳ್ಳಬಾರದು ಇದಕ್ಕೆ ಜನಪ್ರತಿಧಿನಗಳು ಕೂಡ ಕಂಪನಿಯವರ ಪರವಾಗಿ ಧ್ವನಿ ಯಾಗುತ್ತಿರುವದರ ಪರಿಣಾಮ ಮುಂದಿನ ಚುನಾವಣೆಯಲ್ಲಿ ಎದರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
More Stories
ರಸ್ತೆ ಅಗಲೀಕರಣ ಕಾಮಗಾರಿಗೆ ಶಾಸಕ ಜಿ.ಎಸ್ ಪಾಟೀಲ ಭೂಮಿಪೂಜೆ ನೆರವೇರಿಸಿದರು
ಅಕ್ರಮ ಅಕ್ಕಿ ಸಂಗ್ರಹ: 3.6 ಕ್ವಿಂಟಲ್ ಪಡಿತರ ಅಕ್ಕಿ ವಶಕ್ಕೆ: ಆರೋಪಿ ಅರೆಸ್ಟ್!
ಭಾರತದ ಸ್ವತಂತ್ರ ಸಂಗ್ರಾಮಕ್ಕೆ ಅನೇಕರ ತ್ಯಾಗವಿದೆ – ಡಾ.ಹನಸಿ