ಪರೀಕ್ಷೆಯಲ್ಲಿ ಬ್ರಾಹ್ಮಣ ವಿದ್ಯಾರ್ಥಿಗಳ ಜನಿವಾರ ತೆಗೆಸಿದಕ್ಕೆ ಜೋಶಿ ಖಂಡನೆ

 ಪರೀಕ್ಷೆಯಲ್ಲಿ ಬ್ರಾಹ್ಮಣ ವಿದ್ಯಾರ್ಥಿಗಳ ಜನಿವಾರ ತೆಗೆಸಿದಕ್ಕೆ ಜೋಶಿ ಖಂಡನೆ

ಕೊಡತಗೇರಿ Express News 

18th April 2025ಕೊಪ್ಪಳ : ರಾಜ್ಯದಲ್ಲಿ ದಿನಾಂಕ 17/04/2025 ರಂದು ಸಿಇಟಿ ಪರೀಕ್ಷೆ ನಡೆಸಲಾಗಿದೆ ಪರೀಕ್ಷಾ ಕೊಠಡಿಗೆಕೆ ಕೆಲವೊಂದು ವಸ್ತುಗಳು ತರುವುದನ್ನು ನಿಷೇಧಿಸಲಾಗಿದೆ ಆದರೆ ಇದನ್ನೇ ನೆಪವಾಗಿಟ್ಟುಕೊಂಡು ಪರೀಕ್ಷಾ ಮೇಲ್ವಿಚಾರಕರು ಬ್ರಾಹ್ಮಣ ವಿದ್ಯಾರ್ಥಿಗಳ ಜನಿವಾರವನ್ನು ತೆಗೆಸಿರುವ ಘಟನೆ ಹಲವಡೆ ನಡೆದಿರುತ್ತದೆ. ಇದು ಖಂಡನೀಯ ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಕೊಪ್ಪಳ ಜಿಲ್ಲಾ ಪ್ರತಿನಿಧಿ ಗುರುರಾಜ್ ಎನ್ ಜೋಶಿ ಖಂಡಿಸಿದ್ದಾರೆ.

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ಆದಿಚುಂಚನಗಿರಿ ಪದವಿಪೂರ್ವ ಕಾಲೇಜು ಪರೀಕ್ಷಾ ಕೇಂದ್ರ ಹಾಗೂ ಬೀದರನ ಸಾಯಿ ಸ್ಫೂರ್ತಿ ಪರೀಕ್ಷಾ ಕೇಂದ್ರ ಅಲ್ಲದೇ ರಾಜ್ಯದ ಇತರೆಡೆ ನಡೆದ ಸಿಇಟಿ ಪರೀಕ್ಷೆಯಲ್ಲಿ, ಪರೀಕ್ಷೆ ಬರೆಯಲು ಆಗಮಿಸಿದ್ದ ವಿದ್ಯಾರ್ಥಿಗಳು ಧರಿಸಿದ್ದ ಜನಿವಾರವನ್ನು ಭದ್ರತಾ ಸಿಬ್ಬಂದಿಗಳು ಬಲವಂತವಾಗಿ ತೆಗೆಸಿರುತ್ತಾರೆ. ಜನಿವಾರ ತೆಗೆಯಲೊಪ್ಪದ ಬೀದರನ ವಿದ್ಯಾರ್ಥಿಗೆ ಪರೀಕ್ಷೆಗೆ ಅವಕಾಶ ಕೊಟ್ಟಿರುವುದಿಲ್ಲ.

ಸಿಇಟಿ ಪರೀಕ್ಷೆ ಬರೆಯಲು ಜನಿವಾರ ಹೇಗೆ

ಅಡ್ಡಿಯಾಗುತ್ತದೆ ಎಂದು ಪ್ರಶ್ನಿಸಿದ್ದಾರೆ. ಕೇವಲ ಬ್ರಾಹ್ಮಣರ ಮೇಲೆ ಮಾತ್ರ ಕಾನೂನುಗಳನ್ನು ಹೇರುವುದು ಏಕೆ?, ಅನ್ಯ ಕೋಮಿನವರ ವಿಚಾರದಲ್ಲಿ ಅಧಿಕಾರಿಗಳ ನಿಲುವು ಭಿನ್ನವಾಗಿರಲು ಕಾರಣ ಏನು ಎಂದು ಕೇಳಿದ್ದಾರೆ. ಜನಿವಾರ ಧರಿಸಿದವರು ಪರೀಕ್ಷೆ ಬರೆಯಲು ಅನರ್ಹರೇ, ಇದು ತಾರತಮ್ಯವಲ್ಲದೆ ಮತ್ತೇನು. ಇದರ ಬಗ್ಗೆ ಅಧಿಕಾರಿಗಳು ಸ್ಪಷ್ಟನೆ ನೀಡಬೇಕು, ಹಾಗೂ ಬೇಶರತ್ ಕ್ಷಮೆಯಾಚಿಸಬೇಕು ಮತ್ತು ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು. ಇಲ್ಲದಿದ್ದಲ್ಲಿ ಬರುವ ದಿನಗಳಲ್ಲಿ ವಿಪ್ರ ಸಮಾಜವು ಪ್ರತಿಭಟನೆ ನಡೆಸಲು ಸಿದ್ಧವಾಗಬೇಕಾಗುತ್ತದೆ. ಯಾರ ತಂಟೆಗೂ ಹೋಗದೇ ತಮ್ಮಷ್ಟಕ್ಕೆ ತಾವು ಇರುವ ಬ್ರಾಹ್ಮಣ ಸಮುದಾಯದ ಮೇಲೆ ಈ ರೀತಿ ಮೇಲಿಂದ ಮೇಲೆ ಅವಮಾನಾಸ್ಪದ ಘಟನೆಗಳು ಆಗುತ್ತಿರುವುದು ಖಂಡನಾರ್ಹ, ಜನಿವಾರ ಧರಿಸುವುದು ಬ್ರಾಹ್ಮಣರ ಧಾರ್ಮಿಕ ಹಕ್ಕು, ಅದನ್ನು ತೆಗೆಸಿದ ಅಧಿಕಾರಿಗಳ ಮೇಲೆ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಎಚ್ಚರಿಸಿದ್ದಾರೆ.

ಈ ಘಟನೆಯನ್ನು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಕೊಪ್ಪಳ ಜಿಲ್ಲಾ ಪ್ರತಿನಿಧಿ ಗುರುರಾಜ್ ಎನ್ ಜೋಶಿ ಮತ್ತು ವಿಪ್ರ ಮುಖಂಡರಾದ ಎಚ್ ಬಿ ದೇಶಪಾಂಡೆ, ವೇಣುಗೋಪಾಲಾಚಾರ ಜಹಗೀರದಾರ, ಜಗನಾಥ ಹುನಗುಂದ, ಪ್ರಾಣೇಶ್ ಮಾದಿನೂರ, ಡಾ. ಕೆ.ಜಿ.ಕುಲಕರ್ಣಿ, ಡಿ.ವಿ ಜೋಶಿ, ಸುರೇಶ್ ಗಾವರಾಳ, ಅಪ್ಪಣ ಪದಕಿ, ರಾಘವೆಂದ್ರ ಕುಲಕರ್ಣಿ, ರಾಮಮೂರ್ತಿ ಸಿದ್ಧಾಂತಿ, ಭೀಮಸೇನ ಜೋಷಿ, ಮಂಜುನಾಥ ಹಳ್ಳಿಕೇರಿ. ಅರವಿಂದ

ಕುಲಕರ್ಣಿ, ಪ್ರಕಾಶ್ ಜೋಶಿ, ಪ್ರಶಾಂತ ಕುಲಕರ್ಣಿ, ಶ್ರೀಮತಿ ವೈಷ್ಣವಿ ಹುಲಗಿ, ಶ್ರೀಮತಿ ಲತಾ

ಮುದೊಳ, ರಾಘವೇಂದ್ರ ನರಗುಂದ, ರಮೇಶ್ ಜಹಗೀರದಾರ, ನಾಗರಾಜ್‌ ಸಿದ್ಧಾಂತಿ,

ಅನಿಲ್ ಕುಲಕರ್ಣಿ, ನಾಗೆಶ್ವರಾವ್ ದೇಶಪಾಂಡೆ ಹಾಗೂ ಇನ್ನೂ ಪ್ರಮುಖ ಮುಖಂಡರು ಘಟನೆಯನ್ನು

ತೀವ್ರವಾಗಿ ಖಂಡಿಸಿರುತ್ತಾರೆ.

error: Content is protected !!