ಯುವಕರು ದಾರಿತಪ್ಪುತ್ತಿದ್ದಾರೆ ಪೋಲಿಸ್ ಪಾಟೀಲ
ಕೊಡತಗೇರಿ express newsಯಲಬುರ್ಗಾ : ಹದಿಹರಿಯದ ಯುವಕರಿಂದ ಗ್ರಾಮಗಳು ಅಭಿವೃದ್ಧಿ ಸಾಧ್ಯ ಯುವಕರು ಮನಸ್ಸು ಮಾಡಿದರೆ ಏನನ್ನಾದರೂ ಸಾಧಿಸಬಹುದು ಆದರೆ ಇಂದಿನ ಯುವಕರು ದುಶ್ಚಟಕ್ಕೆ ಬಲಿಯಾಗಿ ದಾರಿ ತಪ್ಪುತ್ತಿದ್ದಾರೆ ಎಂದು ಅಂದನಗೌಡ ಪೊಲೀಸ್ ಪಾಟೀಲ್ ಬೇಸರ ವ್ಯಕ್ತಪಡಿಸಿದ್ದರು ಅವರು ತಾಲೂಕಿನ ಬಳೂಟಗಿ ಗ್ರಾಮದಲ್ಲಿ ಶ್ರೀ ಶರಣಬಸವೇಶ್ವರ ಜಾತ್ರಾ ಮಹೋತ್ಸವದ ಪ್ರಯುಕ್ತ ಶ್ರೀ ಶರಣಬಸವೇಶ್ವರ ನಾಟ್ಯ ಸಂಘದವರಿಂದ ಹಮ್ಮಿಕೊಂಡಿದ್ದ ಸಾಕು ಮಗ ಸರ್ದಾರ್ ಎಂಬ ನಾಟಕವನ್ನು ಉದ್ಘಾಟನೆ ಮಾಡಿ ಮಾತನಾಡಿದ ಅವರು ಇಂದಿನ ಯುವಕರಲ್ಲಿ ಭಯ ಭಕ್ತಿ ಹೊರಟುಹೋಗಿದೆ, ಜಾತ್ರೆಯೆಂದರೆ ಮೋಜು ಮಸ್ತಿ ಎಂದು ತಿಳಿದುಕೊಂಡಿದ್ದಾರೆ ಆದರೆ ಯುವಕರಲ್ಲಿ ಭಕ್ತಿ ಹುಟ್ಟಿದಾಗ ಆಧ್ಯಾತ್ಮಿಕ ಚಿಂತನೆಗಳು ಮೂಡುತ್ತವೆ ಆದ್ದರಿಂದ ಯುವಕರು ತಮ್ಮ ಕುಟುಂಬ ಮತ್ತು ಆರ್ಥಿಕವಾಗಿ ಅಭಿವೃದ್ಧಿ ಹೊಂದಬೇಕು ನಾಟಕ ನಮ್ಮೂರಿನಲ್ಲಿ ಪ್ರದರ್ಶನಗೊಳ್ಳಲಿದೆ ಈ ನಾಡಿನ ಕಲೆಯನ್ನ ಉಳಿಸಿ ಬೆಳೆಸುವಂತಹ ಕೆಲಸವನ್ನ ನಮ್ಮೂರಿ ಹವ್ಯಾಸಿ ರಂಗಭೂಮಿ ಕಲಾವಿದರು ಮಾಡುತ್ತಿದ್ದಾರೆ ಅವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತಾ ನಾಟಕದಲ್ಲಿ ಬರುವ ಒಳ್ಳೆಯ ಸನ್ನಿವೇಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ನಾವು ಬದಲಾಗೋಣ ಎಂದರು. ನಂತರ ಮಾತನಾಡಿದ ಯುವ ಮುಖಂಡ ಎಲ್ಲಾ ಸಾಬ್ ಮಾತನಾಡಿ ನಾಟಕಗಳು ಜನಪ್ರಿಯತೆಗಳನ್ನು ಇಂದಿನ ದಿನಮಾನಗಳಲ್ಲಿ ಕೂಡ ಹಳ್ಳಿಗಾಡು ಪ್ರದೇಶದಲ್ಲಿ ತಮ್ಮ ದೊಡ್ಡತನವನ್ನು ಉಳಿಸಿಕೊಂಡಿವೆ ಅಂತ ನಾಟಕ ಗಳಿಂದ ಜೀವನದಲ್ಲಿ ಅನೇಕ ಜನರು ಬದಲಾಗಿದ್ದಾರೆ ನಾಟಕದ ಕೊನೆಯದಲ್ಲಿ ಕೆಟ್ಟದ್ದು ಅಳೆಯುತ್ತದೆ ಒಳ್ಳೆಯದು ಎಂದು ಹೇಳಿದವರು ಈ ನಾಟಕ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು. ಸಾನಿಧ್ಯವನ್ನು ಗ್ರಾಮದ ಶಿವಕುಮಾರದೇವರು ಹಿರೇಮಠ ಬಳೂಟಗಿ ವಹಿಸಿಕೊಂಡಿದ್ದರು ಮುಖ್ಯಾಥಿಗಳಾಗಿ ಗ್ರಾಮದ ಹಿರಿಯರು ಮಾಜಿ ಸೈನಿಕರು ಪೋಲಿಸ್ ಸಿಬ್ಬಂದಿಗಳು ವಹಿಸಿಕೊಂಡಿದ್ದರು
More Stories
ಎಪ್ರಿಲ್ ನಲ್ಲಿ ಜಿಲ್ಲೆಯಾದ್ಯಂತ ನರೇಗಾ ಕೆಲಸ ಪ್ರಾರಂಭ : ಭರತ್ ಎಸ್
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಕರಿಬಸಪ್ಪ ನಿಡಗುಂದಿ ನೇಮಕ
ಗದಗ: ಕ್ಷೀರ ಭಾಗ್ಯ ಯೋಜನೆಯ ಹಾಲಿನ ಪುಡಿ ಅಕ್ರಮ ಸಾಗಾಟ; ಇಬ್ಬರ ಬಂಧನ