*ಬಾಲ ಕಾರ್ಮಿಕ ಪದ್ಧತಿ ಸಮಾಜಕ್ಕೆ ಅಂಟಿಕೊಂಡಿರುವ ಪಿಡುಗು*
ಗದಗ (ಕರ್ನಾಟಕ ವಾರ್ತೆ) ಜೂನ್ 12 : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ,ಕಾರ್ಮಿಕ ಇಲಾಖೆ, ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಶಿಕ್ಷಣ ಇಲಾಖೆ ಇವರುಗಳ ಸಂಯುಕ್ತ ಆಶ್ರಯದಲ್ಲಿ ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ-2023 ಸೋಮವಾರ ಸಿದ್ಧಲಿಂಗ ನಗರದ ಸರ್ಕಾರಿ ಪ್ರೌಢಶಾಲೆಯಲ್ಲಿ ಜರುಗಿತು.
ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಅಧ್ಯಕ್ಷ ಬಸವರಾಜ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತಾನಾಡಿ ಬಾಲ ಕಾರ್ಮಿಕ ಪದ್ಧತಿಯು ಪ್ರಪಂಚದ ಕೆಲವು ಭಾಗಗಳಲ್ಲಿ ಇಂದಿಗೂ ಸಾಮಾನ್ಯವಾಗಿದೆ, ಮೊದಲು 14 ವರ್ಷದ ಮಕ್ಕಳನ್ನು ಬಾಲ ಕಾರ್ಮಿಕರು ಎಂದು ಕರೆಯುತ್ತಿದ್ದರು 1986 ರಲ್ಲಿ ಬಾಲಾ ಕಾರ್ಮಿಕ ಪದ್ಧತಿ ವಿರೋಧ ದಿನ ಜಾರಿಗೆ ಬಂದಿದ್ದು 2002 ರಲ್ಲಿ ಈ ಪದ್ಧತಿಯ ತಿದ್ದುಪಡಿ ಆದ ನಂತರ 18 ವರ್ಷದ ಒಳಗಿನ ಮಕ್ಕಳು ಬಾಲಾಕಾರ್ಮಿಕರು ಕಾರ್ಖಾನೆ ಕೆಲಸ, ಗಣಿಗಾರಿಕೆ,ಕಲ್ಲು ಒಡೆಯುವ ಕೆಲಸ, ಕೃಷಿ-ಬೇಸಾಯ, ವ್ಯವಹಾರಗಳಲ್ಲಿ ಪೆÇೀಷಕರಿಗೆ ಸಹಾಯ ಮಾಡುವುದು, ತಮ್ಮದೇ ಸ್ವಂತ ಸಣ್ಣ ವ್ಯವಹಾರವನ್ನು ಹೊಂದಿದ್ದಾರೆ, ಎಲ್ಲಿಯವರೆಗೆ ಕುಟುಂಬದಲ್ಲಿ ಬಡತನವಿರುತ್ತದೋ ಅಲ್ಲಿಯವರೆಗೂ ಬಾಲಕಾರ್ಮಿಕ ಪದ್ದತಿಯು ಇರುತ್ತದೆ. ಬಾಲಕಾರ್ಮಿಕರಿಗೆ ಶಿಕ್ಷಣವನ್ನು ನೀಡಬೇಕು ಎಲ್ಲಾ ಇಲಾಖೆಯವರು ಒಗ್ಗೂಡಿ ಈ ಒಂದು ಪದ್ಧತಿಯನ್ನು ನಿರ್ಮೂಲನೆ ಮಾಡಬೇಕು ಎಂದು ಹೇಳಿದರು.
ಸಾಮಾಜಿಕ ಪಿಡುಗು ಆಗಿರುವ ಬಾಲಕಾರ್ಮಿಕ ಪದ್ಧತಿಗೆ ನಿರ್ಮೂಲನೆಗೆ ಗಮನ ನೀಡುವದರ ಜೊತೆಗೆ ಬಾಲ ಕಾರ್ಮಿಕ ಮಕ್ಕಳನ್ನು ಕಡ್ಡಾಯವಾಗಿ ಶಿಕ್ಷಣ ದೊರಕಿಸುವ ಕಾರ್ಯವಾಗಬೇಕು. ಈ ಕಾರ್ಯದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಪಾಲ್ಗೊಂಡು ಯಶಸ್ವಿಗೊಳಿಸಬೇಕು. ಬಾಲ ಕಾರ್ಮಿಕ ಪದ್ಧತಿ, ಮಕ್ಕಳ ಸಾಗಾಣಿಕೆ, ಬಾಲ್ಯ ವಿವಾಹ, ಮಕ್ಕಳ ಮಾರಾಟ ಕಾನೂನು ಬಾಹಿರ, ಬಾಲ ಕಾರ್ಮಿಕರ ಪುನರವಸತಿ ಹಾಗೂ ಇನ್ನಿತರ ಸೌಲಭ್ಯಗಳನ್ನು ಅವರಿಗೆ ತಲುಪಿಸುವ ಮಹತಕಾರ್ಯದಲ್ಲಿ ಎಲ್ಲರೂ ಕೈಜೋಡಿಸಬೇಕು ಎಂದರು.
ಹದಿಹರೆಯದ 18 ವರ್ಷದ ಒಳಗಿನ ಮಕ್ಕಳು ಕೆಲಸದಲ್ಲಿ ತೊಡಗಿದ್ದರೆ ಅದು ಬಾಲ ಕಾರ್ಮಿಕ ಪದ್ಧತಿ ವಿರೋಧವಾಗುತ್ತದೆ ಜನರಿಗೆ ಈ ಪದ್ಧತಿಯ ಬಗ್ಗೆ ಜಾಗೃತಿ ಮೂಡಿಸಿ ಮಕ್ಕಳನ್ನು ಶಾಲೆಗೆ ಕಳುಹಿಸುವ ಉದ್ಧೇಶದಿಂದ ಈ ಒಂದು ದಿನದ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಜಿಲ್ಲಾ ಕಾರ್ಮಿಕ ಇಲಾಖೆ ಅಧಿಕಾರಿ ಭೀಮರಾವ್ ಆರ್ ಜಾಧವ ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಮಕ್ಕಳ ರಕ್ಷಣಾ ಅಧಿಕಾರಿ ರಾಧಾ ಮಣ್ಣೂರ, ಕಾರ್ಮಿಕ ಇಲಾಖೆ ನಿರೀಕ್ಷಕ ಉಮೇಶ ಎಸ್. ಹುಲ್ಲಣ್ಣವರ, ಮಧುಸೂದನ, ನಿವೃತ್ತ ಕಾರ್ಮಿಕ ಅಧಿಕಾರಿ ಚಂದ್ರಶೇಖರ ಐಲಿ, ಸಮಾಜ ಕಲ್ಯಾಣ ಇಲಾಖೆ ವಿಜಯಲಕ್ಷ್ಮಿ , ಜಿಲ್ಲಾ ಬಾಲಕಾರ್ಮಿಕ ನಿರ್ಮೂಲನಾ ಸೊಸೈಟಿ ಯೋಜನಾ ನಿರ್ದೇಶಕ ಸಂದೇಶ ಚ. ಪಾಟೀಲ, ಜಯಶ್ರೀ , ಚೇಂಬರ್ ಆಪ್ ಕಾಮರ್ಸ್, ನೊಂದಾಯಿತ ಕಟ್ಟಡ ಕಾರ್ಮಿಕ ಸಂಘಗಳು, ಜಿಲ್ಲೆಯ ಸ್ವಯಂ ಸೇವಾ ಸಂಘಗಳು, ಅಂಗಡಿ ಮತ್ತು ವಾಣಿಜ್ಯ ಸಂಸ್ಥೆ ಮಾಲಿಕರು, ಸರ್ಕಾರಿ ಪ್ರೌಢಶಾಲಾ ಶಿಕ್ಷಕರು ಹಾಗೂ ಶಿಕ್ಷಕಿಯರು, ಶಾಲಾ ಸೇವಾ ಸಿಬ್ಬಂದಿಗಳು ಭಾಗವಹಿಸಿದ್ದರು.
ಹಿರಿಯ ದಿವಾಣಿ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕೆ.ಗುರುಪ್ರಸಾದ ಅವರು ಕಾರ್ಯಕ್ರಮದಲ್ಲಿ ಪ್ರಮಾಣ ವಚನ ಬೋಧಿಸಿದರು. ಶಾಲಾ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು, ಸರ್ಕಾರಿ ಪ್ರೌಢಶಾಲಾ ಶಿಕ್ಷಕಿ ಕಾರ್ಯಕಮದಲ್ಲಿ ವಂದಿಸಿದರು.
More Stories
ಜಾತಿ ನಿಂದನೆ ಉದ್ದೇಶವಿದ್ದರೆ ಮಾತ್ರ ಅಟ್ರಾಸಿಟಿ ಕಾಯ್ದೆ ಅನ್ವಯ- ಸುಪ್ರೀಂಕೋರ್ಟ್
ನಾನು ಸರ್ಕಾರಿ ಸವಲತ್ತುಗಳನ್ನು ನಿರಾಕರಿಸಿದ್ದೇನೆ ; ಶಾಸಕ ಬಸವರಾಜ ರಾಯರಡ್ಡಿ