ಜಾತಿನಿಂದನೆ ಪ್ರಕರಣ: 98 ದೋಷಿಗಳಿಗೆ ಜೀವಾವಧಿ ಶಿಕ್ಷೆ ಮಹತ್ವದ ತೀರ್ಪು
ಕೊಡತಗೇರಿ ಎಕ್ಸಪ್ರೆಸ್ ಸುದಗದಿ
10 ವರ್ಷಗಳ ನಂತರ ಕೊಪ್ಪಳ ಜಿಲ್ಲಾ ನ್ಯಾಯಾಲಯದ ಮಹತ್ವದ ತೀರ್ಪು | ದೇಶದ ಇತಿಹಾಸದಲ್ಲೇ ಮೊದಲ ಪ್ರಕರಣ
ಕೊಪ್ಪಳ: ಜಾತಿ ನಿಂದನೆ ಮತ್ತು ದೌರ್ಜನ್ಯ ಪ್ರಕರಣದಲ್ಲಿ 98 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ಮತ್ತು ತಲಾ 5 ಸಾವಿರ ರು. ದಂಡ ವಿಧಿಸಿ ಕೊಪ್ಪಳ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆದೇಶಿಸಿದೆ. ಪ್ರಕರಣ ಉಳಿದ 3 ಅಪರಾಧಿಗಳಿಗೆ 5 ವರ್ಷ ಜೈಲು, ತಲಾ 2 ಸಾವಿರ ದಂಡ ಹಾಕಿ ಆದೇಶಿಸಿರುವ ಜಿಲ್ಲಾ ನ್ಯಾಯಾಧೀಶ ಸಿ. ಚಂದ್ರಶೇಖರ ಐತಿಹಾಸಿಕ ಆದೇಶದಲ್ಲಿ ಅಮೇರಿಕಾದ ಹೋರಾಟ
ಗಾರ್ತಿ ಮರೀಯನ್ ಆಂಡರ್ಸನ್ ಹೇಳಿಕೆ ಉಲ್ಲೇಖಿಸಿದ್ದಾರೆ. ಪ್ರಕರಣದಲ್ಲಿ ಗಂಗಾವತಿ ಗ್ರಾಮೀಣ ಠಾಣೆ ಪೊಲೀಸರು ಒಟ್ಟು 117 ಜನರ ವಿರುದ್ಧ ಆರೋಪಪಟ್ಟಿ ಸಲ್ಲಿಸಿದ್ದರು. ಈ ಪೈಕಿ ಹಲವರು ಮೃತಪಟ್ಟಿದ್ದಾರೆ. ಇನ್ನು ಕೆಲವರ ಹೆಸರು ಪುನರಾವರ್ತನೆಯಾಗಿದೆ.: ಉಳಿದ 101 ಆರೋಪಿಗಳು ತಪ್ಪಿತಸರು ಎಂದು ನ್ಯಾಯಾಲಯ ತೀರ್ಮಾನಿಸಿತ್ತು. ಈ ಪೈಕಿ ಮೂವರು ಅಪರಾಧಿಗಳು ಪರಿಶಿಷ್ಟ ಜಾತಿ ಮತ್ತು ವರ್ಗಕ್ಕೆ ಸೇರಿದ್ದಾರೆ. ಈ ಹಿನ್ನೆಲೆ ಅವರಿಗೆ ಜಾತಿನಿಂದನೆ ಕಾಯಿದೆ ಅನ್ವಯವಾಗದಿದ್ದರಿಂದ ಶಿಕ್ಷೆಯ ಪ್ರಮಾಣ ಕಡಿಮೆಯಾಗಿದೆ ಎನ್ನಲಾಗಿದೆ.
ಗಂಗಾವತಿ ತಾಲೂಕು ಮರಕುಂಬಿಯಲ್ಲಿ 2014ರ ಆ.28 ರಂದು ಘಟನೆ ನಡೆದಿತ್ತು. 10 ವರ್ಷಗಳ ಸುದೀರ್ಘ ವಿಚಾರಣೆ ನಡೆಸಿದ್ದ ನ್ಯಾಯಾಲಯ, ಅ.21 ರಂದು ಆರೋಪ ಪಟ್ಟಿಯಲ್ಲಿನ
ಮರಿಯನ್ ಆಂಡರ್ಸನ್ ಹೇಳಿಕೆ ಉಲ್ಲೇಖ
ಐತಿಹಾಸಿಕ ಆದೇಶ ನೀಡಿರುವ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಸಿ.ಚಂದ್ರಶೇಖರ, ಎಷ್ಟೇ ದೊಡ್ಡ ದೇಶವಾಗಿದ್ದರೂ, ಅದು ತನ್ನ ದುರ್ಬಲ ದೇಶವಾಸಿಗಳಿಗಿಂತ ಬಲಶಾಲಿಯಾಗಿರದು. ಯಾವುದೇ ವ್ಯಕ್ತಿಯನ್ನು ಕೆಳಗೆ ಇರಿಸಬೇಕೆಂದರೆ, ನಿದ್ದು ಕೆಲ ಭಾಗ ಸಹ ಕೆಳಗೆ ಇರಬೇಕಾಗುತ್ತದೆ. ಆದ್ದರಿಂದ, ನಿಮ್ಮ ನಿರೀಕ್ಷೆಯಂತೆ ಮೇಲಕ್ಕೆ ಏರುವುದು ನಿಮಗೆ ಸಾಧ್ಯವಾಗದು’ ಎಂಬ ಮರಿಯನ್ ಆಂಡರ್ಸನ್ ಅವರ ಹೇಳಿಕೆ ಉಲ್ಲೇಖಿಸಿದ್ದಾರೆ. ಈಕೆ 20ನೇ ಶತಮಾನದಲ್ಲಿ ಯುಎಸ್ ನಲ್ಲಿ ಜನಾಂಗೀಯ ತಾರತಮ್ಯದ ವಿರುದ್ದದ ಹೋರಾಟಗಾರ್ತಿ, ಆಫ್ರಿಕಾ ಮೂಲಕ ಆಮೇರಿಕನ್ ಕಲಾವಿದರ ಹೋರಾಟದಲ್ಲಿ ಆಂಡರ್ಸನ್ ಮುಂದಾಳು ಆಗಿದ್ದರು.
ಎಲ್ಲ ಆರೋಪಿಗಳು ತಪ್ಪಿತಸ್ಥರು ಎಂದು ತೀರ್ಮಾನಿಸಿ, ಶಿಕ್ಷೆ ಪ್ರಮಾಣದ ಆದೇಶ ಕಾಯ್ದಿರಿಸಿದ್ದರು. ಗುರುವಾರ ಸಂಜೆ ನ್ಯಾಯಾಧೀಶರು ಶಿಕ್ಷೆ ಪ್ರಕಟಿಸಿದ್ದಾರೆ.
ಪ್ರಕರಣದ ಹಿನ್ನೆಲೆ: ಮರಕುಂಬಿಯಲ್ಲಿ ಕಳೆದ 2014ರ ಆ.29 ರಂದು ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ
ಅಪರಾಧಿಗಳ ಸಂಬಂಧಿಕರ ಆಕ್ರೋಶ
ನ್ಯಾಯಾಧೀಶರು ಆದೇಶ ಪ್ರಕಟಿಸುತ್ತಿದ್ದಂತೆಯೇ ನ್ಯಾಯಾಲ ಯದ ಆವರಣದಲ್ಲಿ ಸೇರಿದ್ದ ಅಪರಾಧಿಗಳ ಸಂಬಂಧಿಕರು ಮತ್ತು ಕುಟುಂಬದವರ ರೋದನ ಮುಗಿಲು ಮುಟ್ಟಿತ್ತು. ಕೆಲವು ಮಹಿಳೆಯರು ಆದೇಶದ ಬಗ್ಗೆ ಆಕ್ಷೇಪಿಸಿದರು. ಇನ್ನೂ ಹಲವರು ಘಟನೆ ನಡೆದ ದಿನ ಗ್ರಾಮದಲ್ಲಿ ಇರದ ವ್ಯಕ್ತಿಗಳಿಗೂ ಜೀವಾವಧಿ ಶಿಕ್ಷೆ ನೀಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಶಿಕ್ಷೆ ಪ್ರಕಟಿಸಿದ ನಂತರ ಕೊಪ್ಪಳ ಕೋರ್ಟ್ ಆವರಣದಲ್ಲಿ ಅಪರಾಧಿಗಳ ಕುಟುಂಬಸ್ಥರ ಆಕ್ರಂದನ.
ಕಳೆದ ಅ.21 ರಂದು 101 ಜನರೂ ಅಪರಾಧಿಗಳು ಎಂದು ತೀರ್ಮಾನಿಸಿದ್ದ ನ್ಯಾಯಾಲಯ ಇಂದು ಶಿಕ್ಷೆ ಪ್ರಮಾಣ ಪ್ರಕಟಿಸಿದೆ. ಈ ಪೈಕಿ 98 ಜನರಿಗೆ ಜೀವಾವಧಿ ಶಿಕ್ಷೆ ನೀಡಲಾಗಿದೆ. ಉಳಿದ ಮೂವರಿಗೆ 5 ವರ್ಷ ಜೈಲುಶಿಕ್ಷೆ ಮತ್ತು ನೀಡಲಾಗಿದೆ. ಜಾತಿನಿಂದನೆ ಕಾಯಿದೆ ಅನ್ವಯವಾಗದ ಕಾರಣ ಈ ಮೂವರಿಗೆ ಶಿಕ್ಷೆಯ ಪ್ರಮಾಣ ಕಡಿಮೆ ಆಗಿದೆ.
ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿ ಕೋರ್ಟ್ ಆದೇಶ ನೀಡಿದೆ. ಕ್ಷೌರದ ಅಂಗಡಿ ಮತ್ತು ಹೋಟೆಲ್‌ಗೆ ಪ್ರವೇಶ ಸಂಬಂಧ ಗ್ರಾಮದ ದಲಿತರು ಮತ್ತು ಸವರ್ಣೀಯರ ನಡುವೆ ಗಲಾಟೆ ನಡೆದಿತ್ತು. ನಂತರ ಗಂಗಾವತಿಯ ಚಿತ್ರಮಂದಿರದಲ್ಲಿ ಆರಂಭವಾದ ಗಲಾಟೆ ಮರಕುಂಬಿಯಲ್ಲಿ ದಲಿತರ ಕೇರಿಗೆ ನುಗ್ಗಿ ಗುಡಿಸಲಿಗೆ ಬೆಂಕಿ ಇಡುವ ಹಂತ ತಲುಪಿತ್ತು. ಗಲಾಟೆ ಹಿನ್ನೆಲೆ ಪೊಲೀಸರು ಗ್ರಾಮದಲ್ಲಿ ಬೀಡುಬಿಟ್ಟಿದ್ದರೂ ಆರೋಪಿಗಳು ದಲಿತರ ಕೇರಿಗೆ ನುಗ್ಗಿ ಗುಡಿಸಲುಗಳಿಗೆ ಬೆಂಕಿ ಇಟ್ಟಿದ್ದರು ಎಂದು ದೂರಲಾಗಿತ್ತು.
More Stories
Appointment of Kodatageri as KDP Quarterly Committee Member
ಶಾಸಕ ಜನಾರ್ಧನ ರೆಡ್ಡಿ ವಿರುದ್ಧ ಕ್ರಮಕ್ಕೆ- ಕುಬೇರ ಮಜ್ಜಿಗಿ ಅಗ್ರಹ
ವಿಪ್ ಉಲ್ಲಂಘನೆ ಕಾನೂನು ಕ್ರಮ ಒತ್ತಾಯಿಸಿ ಬಿಜೆಪಿ ದೂರು