ನಮ್ಮದು ಬಿಟ್ಟಿ ಭಾಗ್ಯವಲ್ಲಾ ಗಟ್ಟಿ ಭಾಗ್ಯ ಶಾಸಕ ಜಿ.ಎಸ್.ಪಾಟೀಲ

 

ನಮ್ಮದು ಬಿಟ್ಟಿ ಭಾಗ್ಯವಲ್ಲಾ ಗಟ್ಟಿ ಭಾಗ್ಯ ಶಾಸಕ ಜಿ.ಎಸ್.ಪಾಟೀಲ

ಕೊಡತಗೇರಿ ಎಕ್ಸ್‌ಪ್ರೆಸ್‌ ಸುದ್ದಿ
ಗಜೇಂದ್ರಗಡ : ನಾನು ಸದಾ ಜನರ ಕೆಲಸ‌ಮಾಡುವವನು ನಾನು ರಾಜಕೀಯ ಜೀವನದಲ್ಲಿ ಸೋಲಲಿ ಗೆಲ್ಲಲಿ ಯಾವತ್ತೂ ನಮ್ಮ ಕುಟಂಬ ನಾನು ಜನರಿಂದ ದೂರ ಉಳಿದಿಲ್ಲಾ ಜನರ ಮದ್ಯ ಕೆಲಸ ಮಾಡುವುದೇ ನನಗೆ ಹರ್ಷ, ನಾವು ಚುನಾವಣೆ ಸಮಯದಲ್ಲಿ ಹಲವಾರು ಜನಪರವಾದ ಯೋಜನೆಗಳನ್ನ ಘೋಷಣೆ ಮಾಡಿದೇವು ಕೇಲವರು ಅವುಗಳನ್ನ ಟಿಕೇ ಮಾಡಿದು ಇವೆಲ್ಲಾ ಬಿಟ್ಟಿ ಭಾಗ್ಯವೆಂದು ಬಿಜೆಪಿ ಟಿಕೆ ಮಾಡಿತು ನಾವು ಅಧಿಕಾರಕ್ಕೆ ಬಂದ ಮೊದಲನೇ ಸಚಿವ ಸಂಪುಟದಲ್ಲಿಯೇ ಆ ಎಲ್ಲಾ ಭರವಸೆಗಳಿಗೆ ಅನುಮೋದನೆ ನೀಡಿದ್ದೇವೆ ಆದ್ದರಿಂದ ನಮ್ಮದು ಬಿಟ್ಟಿ ಭಾಗ್ಯವಲ್ಲಾ ಗಟ್ಟಿ ಭಾಗ್ಯ ಎಂದು ಶಾಸಕ‌ಜಿ.ಎಸ್.ಪಾಟೀಲ‌ ಹೇಳಿದರು ಅವರು ಇತ್ತಿಚಿಗೆ ಗೋಗೇರಿ ಗ್ರಾಮದಲ್ಲಿ ನೆಡದ ಅಭಿನಂದನಾ ಸಮಾರಂಭದಲ್ಲಿ ಕಾರ್ಯಕ್ರಮವನ್ನ ಉದ್ಘಾಟಿಸಿ ಮಾತನಾಡಿದ ಅವರು ಗೋಗೇರಿ ಗ್ರಾಮ ನಾನು ಸೋಲಲಿ ಗೆಲ್ಲಲಿ ನನ್ನ ಜೊತೆ ಯಾವಾಗಲೂ ಇದ್ದಾರೆ ಅವರ ಋಣ ನಾನೆಂದು ತಿರಿಸಲಾಗುವದಿಲ್ಲಾ ಯಾವುದೇ ಚುನಾವಣೆ ಬಂದರು ಅವರು ಹೆಚ್ಚಿನ ಮತಗಳನ್ನ ನಮ್ಮ ಕಾಂಗ್ರೆಸ್ ಪಕ್ಷಕ್ಕೆ ನೀಡುತ್ತಾರೆ ಈ ಭಾರಿ ಕೂಡ ಅತ್ಯಂತ ಹೆಚ್ಚು ಮತಗಳನ್ನು ತಮ್ಮ ಗ್ರಾಮದಿಂದ ನೀಡಿದ್ದಾರೆ ಅವರಿಗೆ ನಾನು ಕೃತ್ಞತನಾಗಿದ್ದೇನೆ ಎಂದ ಅವರು ಈ ಗೋಗೇರಿ ,ಮಾಟರಂಗಿ,ನಾಗರಸಕೊಪ್ಪ, ನಾಗರಸಕೊಪ್ಪ ತಾಂಡ ದ ಜನರು ಯಾವಗಲೂ ನನ್ನೊಂದಿಗೆ ಇದ್ದಿರಿ ನಿಮ್ಮೆಲ್ಲಾ ಗ್ರಾಮಗಳ ಅಭಿವೃದ್ದಿಗೆ ನಾನು ಬದ್ಧ ಎಂದರು. ಕಾರ್ಯಕ್ರಮದಲ್ಲಿ ನೆರೆಗಲ್ ಬ್ಲಾಕ್ ಅಧ್ಯಕ್ಷರಾದ ಶರಣಪ್ಪ ಬೆಟಗೇರಿ, ರೋಣ ಬ್ಲಾಕ ಅಧ್ಯಕ್ಷರಾದ ವೀರಣ್ಣ ಶೇಟ್ಟರ, ಎಚ್.ಎಸ್.ಸೊಂಪುರ, ಶಿವರಾಜ ಘೋರ್ಪಡೆ, ಹೇಮಾಪತಿ ಭೋಸಲೆ, ಹನುಮಂತಪ್ಪ ಹೊರಪೇಟೆ, ಕೆ.ಎಸ್.ಕೊಡತಗೇರಿ, ಮಲ್ಲಿಕಾರ್ಜುನ ಗಾರಗಿ, ಕಟ್ಟೆಪ್ಪ ಮಾದರ, ಇಮಾಮಸಾಬ ಬಾಗವಾನ, ಹುಸೇನಸಾಬ ಬಡಿಗೇರ, ಮತ್ತಪ್ಪ ಗುಂಡೆ, ಐ.ಎಚ್.ಬಾಗವಾನ, ಕೆ.ಕೆ.ಬಾಗವಾನ, ಡಾ: ಬಿ.ಎಸ್.ಪಾಟೀಲ, ಸಂಗಪ್ಪ ಅಡವಿ, ಮುರ್ತುಜಾ ಡಾಲಾಯತ, ಹನುಮಂತಪ್ಪ ಮಾದರ, ಷಣ್ಣಮುಖಪ್ಪ ಕರಡಿ, ತಿರುಪತಿ ರಾಠೋಡ, ಸಂಭಾಜಿ ಗಾರಗಿ, ಸೇರಿದಂತೆ ಇತರರು ಉಪಸ್ಥಿತರಿದ್ದರು.

error: Content is protected !!