ಮಗಳು ಮೃತಪಟ್ಟಿದ್ದರೂ ಆಸ್ತಿ ಹಕ್ಕು
ವಿಚಾರಣೆ ವೇಳೆ ಹೈಕೋರ್ಟ್ ಅಭಿಪ್ರಾಯ | ವಾರಸುದಾರರಿಗೆ ಅಧಿಕಾರ
ಕೊಡತಗೇರಿ Express news
ಬೆಂಗಳೂರು: 2005ರ ಹಿಂದು ಉತ್ತರಾಧಿಕಾರ ಕಾಯ್ದೆಗೆ ತಿದ್ದುಪಡಿ ತರುವ ಮುನ್ನವೇ ಮಗಳು ಮೃತಪಟ್ಟಿದ್ದಾಳೆ ಎನ್ನುವ ಕಾರಣದಿಂದಾಗಿ ಆಕೆಯ ಉತ್ತರಾಧಿಕಾರಿಗಳಿಗೆ ಆಸ್ತಿ ಹಕ್ಕು ಇಲ್ಲ ಎಂದೇಳಲು ಸಾಧ್ಯವಿಲ್ಲ. ಕಾನೂನುಬದ್ಧ ವಾರಸುದಾರರು ಅಸ್ತಿಯಲ್ಲಿ ಸಮಾನ ಪಾಲು ಪಡೆಯಲು ಅರ್ಹರು ಎಂದು ಹೈಕೋರ್ಟ್ ಹೇಳಿದೆ.
ಗದಗ ಜಿಲ್ಲೆಯ ನರಗುಂದ ತಾಲೂಕಿನ ಚನ್ನಬಸಪ್ಪ ಎಂಬುವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಸಚಿನ್ ಶಂಕರ್ ಮಗ್ಟಮ್ ಅವರಿದ್ದ ನ್ಯಾಯಪೀಠ ವಜಾಗೊಳಿಸಿದೆ. ಅರ್ಜಿದಾರರ ಪರ ವಕೀಲರು, ಕಾಯ್ದೆ ತಿದ್ದುಪಡಿಗೂ
ಮೊದಲು ನಾಗವ್ವ ಮತ್ತು ಸಂಗವ್ವ ಹೆಸರಿನ ಹೆಣ್ಣು ಮಕ್ಕಳು ಮೃತಪಟ್ಟಿದ್ದು, ಅವರ ಕಾನೂನು ವಾರಸುದಾರರು ಆಸ್ತಿಯಲ್ಲಿ ಸಮಾನಪಾಲು ಪಡೆಯಲು ಅರ್ಹರಲ್ಲ. ಜತೆಗೆ ಕಾಯ್ದೆಯೂ ಹೆಣ್ಣು ಮಕ್ಕಳ ಉತ್ತರಾಧಿಕಾರಿಗಳಿಗೆ ನೂತನ ಹಕ್ಕನ್ನು ಪರಿಚಯಿಸಿದೆ. ಅದರ ನಿಬಂಧನೆಗಳನ್ನು ಶಾಸಕಾಂಗವು ಸ್ಪಷ್ಟವಾಗಿ ಪೂರ್ವಾವಲೋಕನ ಮಾಡಿಲ್ಲ. ಅಲ್ಲದೇ ಈ ಕಾಯ್ದೆಯೂ 2005 ಸೆ.9ರಂದು ಜಾರಿಗೆ ಬಂದಿದ್ದು, ಆ ವೇಳೆಯಲ್ಲಿ ಜೀವಂತವಾಗಿದ್ದ ಹೆಣ್ಣು ಮಕ್ಕಳಿಗೆ ಮಾತ್ರ ಅನ್ವಯಿಸಲಾಗುತ್ತದೆ ಎಂದು ವಾದಿಸಿದರು.
ವಿಚಾರಣೆ ಆಲಿಸಿದ ಪೀಠವು, 2020ರಲ್ಲಿ ವಿನೀತಾ ಶರ್ಮಾ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಹೇಳಿರುವ ಪ್ರಕಾರ ಹೆಣ್ಣು ಮಕ್ಕಳೂ ಗಂಡು ಮಕ್ಕಳಂತೆ ‘ಕೊ-ಪಾರ್ಸೆನರಿ’ (ಆಸ್ತಿ ಸಮಾನ ಹಕ್ಕು) ಪಡೆಯುತ್ತಾರೆ. ಅವರು
ಪ್ರಕರಣವೇನು?
2023ರ ಅ.3ರಂದು ಗದಗ ಪ್ರಧಾನ ಸಿವಿಲ್ ನ್ಯಾಯಾಲಯ ಮೃತ ಪುತ್ರಿಯರ ಕಾನೂನಾತ್ಮಕ ವಾರಸುದಾರರಿಗೆ ಅವರ ಪೂರ್ವಜರ ಆಸ್ತಿಯಲ್ಲಿ ಸಮಪಾಲು ನೀಡಿ ಆದೇಶಿಸಿತ್ತು. ಆದೇಶ ಪ್ರಶ್ನಿಸಿ ಚನ್ನಬಸಪ್ಪ ಹೈಕೋರ್ಟ್ ಮೇಟ್ಟಿಲೇರಿದ್ದರು.
ತಿದ್ದುಪಡಿಗೆ ಮೊದಲು ಜನಿಸಿದ್ದಾರೋ ಇಲ್ಲವೋ ಎನ್ನುವುದನ್ನು ಪರಿಗಣಿಸಲ್ಲ ಎಂದಿತ್ತು. ಅಲ್ಲದೆ, ವ್ಯಕ್ತಿ ಹುಟ್ಟಿನಿಂದಲೇ ಹಕ್ಕು ಹೊಂದಿರುತ್ತಾನೆಯೇ ಹೊರತು ಉತ್ತರಾಧಿಕಾರದಿಂದಲ್ಲ.
ಇದರನ್ವಯ ಮಗಳು ಜೀವಂತವಾಗಿದ್ದರೂ ಅಥವಾ ಇಲ್ಲದೇ ಹೋದರೂ ಹಕ್ಕು ಪಡೆದಿರುತ್ತಾಳೆ. ತಿದ್ದುಪಡಿ ಕಾಯ್ದೆಯು ಲಿಂಗ ಸಮಾನತೆ ಖಾತ್ರಿಪಡಿಸುತ್ತದೆ. ಹೆಣ್ಣುಮಕ್ಕಳು ಮತ್ತು ಅವರ ವಾರಸುದಾರರು ಅವರ ಸರಿಯಾದ ಪಾಲು ಪಡೆಯಲು ಅವಕಾಶ ಕಲ್ಪಿಸುತ್ತದೆ ಎಂದು ನ್ಯಾಯಾಲಯವು ಹೇಳಿದೆ. ಪೂರ್ವಜರ ಅಸ್ತಿ, ಮಗಳು ತೀರಿಕೊಂಡಾಗ ಆಕೆಯ ಕಾನೂನು ವಾರಸುದಾರರಿಗೆ ಲಭಿಸಲಿದೆ. ಮೃತ ಮಗನ ವಾರಸುದಾರರು ಅಸ್ತಿಯಲ್ಲಿ ಪಾಲುಪಡೆಯುವಂತಾದರೆ, ಕಾಯ್ದೆಯ ಅನುಷ್ಠಾನದ ಸಮಯದಲ್ಲಿ ಮಗಳು ಜೀವಂತವಾಗಿಲ್ಲ ಎನ್ನುವ ನಿಟ್ಟಿನಲ್ಲಿ ಆಕೆಯ ವಾರಸುದಾರರು ಹಕ್ಕು ಪಡೆಯುವಂತಿಲ್ಲ ಎಂದು ಹೇಳುವುದು ಗಂಡು-ಹೆಣ್ಣಿನ ನಡುವೆ ತಾರತಮ್ಮ ಮಾಡಿದಂತಾಗುತ್ತದೆ ಎಂದು ಹೈಕೋರ್ಟ್ ಹೇಳಿದೆ.
More Stories
ಸೆಕೆಂಡ್ ಹ್ಯಾಂಡ್ ಮೊಬೈಲ್ ಬಗ್ಗೆ ಎಚ್ಚರ!: ಬೆಂಗಳೂರಿನಲ್ಲಿ 6 ತಿಂಗಳಲ್ಲಿ 2,350 ಅಕೌಂಟ್ಗೆ ಕನ್ನ..!
ಶಾಲೆಗಾಗಿ ಪಡೆದ ಸಿಎ ಸೈಟ್‌ನಲ್ಲಿ ಧಮ್ ಬಿರಿಯಾನಿ ಹೋಟೆಲ್! ಛಲವಾದಿ ನಾರಾಯಣ ಸ್ವಾಮಿ ವಿರುದ್ಧ ಆರೋಪ
ಸ್ನೇಹಮಯಿ ಕೃಷ್ಣ ರೌಡಿಶೀಟರ್: ಸಿಎಂ ಕೇಸ್ ನಲ್ಲಿ ಅವರ ಕಡೆಯವರು 100 ಕೋಟಿ ಡೀಲ್ ಗೆ ಬಂದಿದ್ರು -ಎಂ.ಲಕ್ಷ್ಮಣ್