ಗ್ರಾ.ಪಂ.ಅಧ್ಯಕ್ಷರ ಅಧಿಕಾರ ಮೊಟಕು ಪ್ರಯತ್ನ : 15 ನೇ ಹಣಕಾಸಿನ ಕ್ರೀಯಾ ಯೋಜನೆ ಮಂಜೂರಾತಿಗೆ ಅಡ್ಡಿ
KODATAGERI Expres News
ಸರಕಾರ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ಇಲಾಖೆಯ ಅಧಿಕಾರಿಗಳು ಹಂತ- ಹಂತವಾಗಿ ಗ್ರಾಮ ಪಂಚಾಯತ್ ಅಧ್ಯಕ್ಷರುಗಳ ಅಧಿಕಾರವನ್ನು ಮೊಟಕುಗೊಳಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಗ್ರಾಮ ಪಂಚಾಯತ್ ಒಕ್ಕೂಟದ ಅಧ್ಯಕ್ಷ ಅನಿಲ್ ತಿಳಿಸಿದ್ದಾರೆ.
ಇದೀಗ 15 ನೇ ಹಣಕಾಸು ಕ್ರೀಯಾಯೋಜನೆಯ ಮಂಜೂರಾತಿಗೆ ಅಡ್ಡಿಪಡಿಸುವ ಮೂಲಕ ಕೇಂದ್ರ ಸರಕಾರ ನೀಡುತ್ತಿರುವ ಅನುದಾನದಲ್ಲಿ ಕಾಮಗಾರಿಗಳನ್ನು ಮಾಡಲು ಅಡಚಣೆಯನ್ನುಂಟು ಮಾಡುತ್ತಿರುವದು ಖಂಡನೀಯ ಎಂದರು.
ಕೇಂದ್ರ ಸರಕಾರ ಗ್ರಾಮ ಪಂಚಾಯತಿಗಳಿಗೆ ಬಿಡುಗಡೆ ಮಾಡುವ 15 ನೇ ಹಣಕಾಸಿಗೆ ಗ್ರಾಮ ಪಂಚಾಯತಿಯಲ್ಲಿ ನಿಯಮಾನುಸಾರ ಕ್ರೀಯಾ ಯೋಜನೆ ತಯಾರಿಸಿ ಇ ಗ್ರಾಮ ಸ್ವರಾಜ್ ಗೆ ಆನ್ ಲೈನ್ ನಲ್ಲಿ ಅಪ್ ಲೋಡ್ ಮಾಡುವ ಮೂಲಕ ಅಧ್ಯಕ್ಷರು ಹಾಗೂ ಅಭಿವೃದ್ಧಿ ಅಧಿಕಾರಿಗಳೇ ಕಾಮಗಾರಿಗಳಿಗೆ ಅನುಮೋದನೆ ನೀಡುವಂತಹ ಅವಕಾಶವಿದೆ ಎಂದು ಹೇಳಿದರು.
ಆದರೆ ಇದೀಗ ಕ್ರಿಯಾ ಯೋಜನೆ ತಯಾರಿಸಿ ಅನುಮೋದನೆಗಾಗಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಕಳುಹಿಸಬೇಕೆಂದು ಶಿವಮೊಗ್ಗ ಜಿಲ್ಲಾ ಪಂಚಾಯತ ಮುಖ್ಯಕಾರ್ಯನಿರ್ವಹಣಾಧಿಕಾರಿ ಸ್ನೇಹಲ್ ಸುಧಾಕರ ಲೋಖಂಡೆ ಮೌಖಿಕವಾಗಿ ತಿಳಿಸಿದ್ದಾರೆ ಎಂದು ಅಭಿವೃದ್ಧಿ ಅಧಿಕಾರಿಗಳು ತಾಲೂಕಿನ ಎಲ್ಲಾ ಪಂಚಾಯತಿಯ ಕ್ರೀಯಾ ಯೋಜನೆ ಮಂಜೂರಾತಿಗೆ ಅಡ್ಡಿಪಡಿಸುತ್ತಿದ್ದು ಕಳೆದ ಮುರ್ನಾಲ್ಕು ತಿಂಗಳ ಹಿಂದೆಯೇ ಕೇಂದ್ರ ಸರಕಾರ ಬಿಡುಗಡೆ ಮಾಡಿರುವ 15 ನೇ ಹಣಕಾಸಿನ ಹಣಕ್ಕೆ ಕ್ರಿಯಾಯೋಜನೆ ತಯಾರಿಸಿದರು ಕಾಮಗಾರಿ ಮಾಡಿಸದಂತಾಗಿದೆ ಎಂದು ತಿಳಿಸಿದರು.
ಮಳೆಗಾಲದ ಆರಂಭದಲ್ಲೇ ಹಲವು ಗ್ರಾಮ ಪಂಚಾಯತಿಗಳಲ್ಲಿ ಕ್ರಿಯಾ ಯೋಜನೆ ತಯಾರು ಆಗಿದ್ದರೂ ಮೇಲಾಧಿಕಾರಿಗಳ ಮೌಖಿಕ ಆದೇಶವನ್ನು ಪಾಲಿಸಬೇಕೆಂದು ಅಭಿವೃದ್ಧಿ ಅಧಿಕಾರಿಗಳು ಕೆಲಸ ನಿರ್ವಹಿಸಲು ಬಿಡುತ್ತಿಲ್ಲ . ಕ್ರೀಯಾ ಯೋಜನೆಯನ್ನು ತಾಲೂಕ ಪಂಚಾಯತಿಗೆ ಕಳುಹಿಸಲಾಗಿದೆ ಜಿಲ್ಲಾ ಪಂಚಾಯತ ನಿಂದ ಅನುಮೋದನೆಯಾಗಿಲ್ಲಾ ಎಂದು ಅನುಮೋದನೆ ಆಗಿಲ್ಲಾ ಎಂದು ಅಭಿವೃದ್ಧಿ ಅಧಿಕಾರಿಗಳು ಸಬೂಬು ಹೇಳುತ್ತಿದ್ದಾರೆ ಎಂದರು.
ಜಿಲ್ಲಾ ಪಂಚಾಯತ ನಲ್ಲಿ ಅದಕ್ಕೆ ಸಂಬಂಧಿಸಿದ ಕೇಸ್ ವರ್ಕರ್ ಇಲ್ಲ ಎಂಬುದಾಗಿ ಗ್ರಾಮ ಪಂಚಾಯತಿಯ ಅಧ್ಯಕ್ಷರು ಉಪಾಧ್ಯಕ್ಷ ರು ಆರೋಪಿಸುತ್ತಿದ್ದು. ಪಂಚಾಯತಿಯಲ್ಲಿ 15 ನೇ ಹಣಕಾಸು ಯೋಜನೆಯಡಿ ಹಣವಿದ್ದರೂ ಕಾಮಗಾರಿ ನಿರ್ವಹಿಸದಂತಾಗಿದ್ದು , ಅಭಿವೃದ್ಧಿ ಕುಂಠಿತವಾಗಿದೆ ಎಂದು ಹೇಳಿದರು.
ಯಾವುದೇ ಜಿಲ್ಲೆಯಲ್ಲೂ ಕಾರ್ಯರೂಪದಲ್ಲಿ ಇಲ್ಲದ ನಿಯಮವನ್ನು ಜಾರಿಗೊಳಿಸಲು ಮೌಖಿಕ ಆದೇಶವನ್ನು ನೀಡಿರುವ ಸಿಇಓ ಸ್ನೇಹಲ್ ಸುಧಾಕರ ಅದನ್ನು ಹಿಂಪಡೆಯಬೇಕಿದೆ.ನಿಯಮಾನುಸಾರ ಅಧ್ಯಕ್ಷರು ಹಾಗೂ ಅಭಿವೃದ್ಧಿ ಅಧಿಕಾರಿಗಳೇ 15 ನೇ ಹಣಕಾಸು ಯೋಜನೆಯ ಕಾಮಗಾರಿಗಳ ಅನುಮೋದನೆಗೆ ವಿನಾಃ ಕಾರಣ ಮಂಜೂರಾತಿಗಾಗಿ ಜಿಲ್ಲಾ ಪಂಚಾಯತಿಗೆ ಕಳುಹಿಸಿ ಎಂದು ಹೇಳಿರುವದು ಖಂಡನೀಯವಾಗಿದ್ದು ಯಾವುದೇ ಲಿಖಿತ ಆದೇಶವಿಲ್ಲದೇ ಅಭಿವೃದ್ಧಿ ಅಧಿಕಾರಿಗಳಿಗೆ ಈ ರೀತಿ ಸೂಚನೆ ನೀಡಿರುವದು ಸಮಂಜವಲ್ಲ. ( ಒಂದು ವೇಳೆ ಸರಕಾರಿ ಆದೇಶವಿದ್ದರು ಅದು ಅವೈಜ್ಞಾನಿಕ) ಇದರಿಂದ ಕಾಮಗಾರಿ ನಿರ್ವಹಿಸಲು ಸಾಕಷ್ಟು ವಿಳಂಬವಾಗುತ್ತಿರುವುದಲ್ಲದೆ ಅಡಚನೆಯೂ ಉಂಟಾಗಿದೆ.
ಜೊತೆಗೆ ಈ ರೀತಿ ಅನುಮೋದನೆ ಜಿಲ್ಲಾ ಪಂಚಾಯತ ಗೆ ಕಳುಹಿಸಿ ಎನ್ನುವ ಮೂಲಕ ಗ್ರಾಮ ಪಂಚಾಯತಿ ಯ ಅಧ್ಯಕ್ಷರುಗಳ ಅಧಿಕಾರವನ್ನು ಮೊಟಕುಗೊಳಿಸುವ ಹುನ್ನಾರವೂ ಇದಾಗಿದೆಯೆಂದು ತಿಳಿಸಿರುವ ಒಕ್ಕೂಟದ ಅಧ್ಯಕ್ಷ ಅನಿಲ್ ಕೂಡಲೇ ಎಲ್ಲಾ ಗ್ರಾಮ ಪಂಚಾಯತಿ ಯ ಅಭಿವೃದ್ಧಿ ಅಧಿಕಾರಿಗಳಿಗೆ ಹಿಂದಿನಂತೆ ಕ್ರೀಯಾಯೋಜನೆಯ ಮಂಜೂರಾತಿಗೆ ಅನುಮೋದನೆ ನೀಡುವಂತೆ ಮಾಡಿ ಕಾಮಗಾರಿಗಳನ್ನು ನಡೆಸಲು ಕ್ರಮ ಕೈಗೋಳ್ಳುವಂತೆ ಆದೇಶ ಹೊರಡಿಸಬೇಕಿದೆ ಎಂದು ಅವರು ಒತ್ತಾಯಿಸಿದ್ದಾರೆ.
ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ಈ ಮೊಬೈಲ್ ನಂಬರಗೆ ವಾಟ್ಸಪ್ ಮಾಡಿ M : 9483768882
More Stories
ಬಿಜೆಪಿಯ ಜನಾಕ್ರೋಶ ಯಾತ್ರೆಗೆ ಶುಭ ಕೊರಿದ ಸಿದ್ದರಾಮಯ್ಯ
ಇಂದು ಕುವೆಂಪು ಸಿರಿಕನ್ನಡ ದತ್ತಿ ಪ್ರಶಸ್ತಿಗೆ ಕನ್ನಡಪರ ಹೋರಾಟಗಾರ ಪ್ರವೀಣ್ ಕುಮಾರ್ ಶೆಟ್ಟಿ
ಸೆಕೆಂಡ್ ಹ್ಯಾಂಡ್ ಮೊಬೈಲ್ ಬಗ್ಗೆ ಎಚ್ಚರ!: ಬೆಂಗಳೂರಿನಲ್ಲಿ 6 ತಿಂಗಳಲ್ಲಿ 2,350 ಅಕೌಂಟ್ಗೆ ಕನ್ನ..!