ಆರ್.ಕೆ.ಬಾಗವಾನ ಶಿಕ್ಷಕರಿಗೆ ರಾಷ್ಟ್ರೀಯ ಶಿಕ್ಷಕ ರತ್ನ ಪ್ರಶಸ್ತಿ

ಆರ್.ಕೆ.ಬಾಗವಾನ ಶಿಕ್ಷಕರಿಗೆ ರಾಷ್ಟ್ರೀಯ ಶಿಕ್ಷಕ ರತ್ನ ಪ್ರಶಸ್ತಿ

KODATAGERI Express News

ಬೆಂಗಳೂರಿನ ಚೇತನ ಫೌಂಡೇಶನ್, ಕರ್ನಾಟಕ ಹಾಗೂ ಸಾಧನಾ ಕೋಚಿಂಗ್ ಸೆಂಟರ್ ಬೆಂಗಳೂರು ಇವರು ಪ್ರತಿ ವರ್ಷ ನಡೆಸುವ ಅಖಿಲ ಭಾರತ ಶಿಕ್ಷಕರ ಸಮ್ಮೇಳನದಲ್ಲಿ ಕೊಡ ಮಾಡುವ ಡಾ ಎಸ್ ರಾಧಾಕೃಷ್ಣನ್ ರಾಷ್ಟ್ರೀಯ ಶಿಕ್ಷಕ ರತ್ನ ಪ್ರಶಸ್ತಿ ಗೆ ಗೋಗೇರಿ ಗ್ರಾಮದ ಶ್ರವಣದೋಷ ಮಕ್ಕಳ‌ ವಿಶೇಷ ಶಿಕ್ಷಕರಾದ ಆರ್ ಕೆ ಬಾಗವಾನ ಅವರಿಗೆ ಪ್ರಶಸ್ತಿ ಗೆ ಆಯ್ಕೆಯಾಗಿದ್ದಾರೆ . ಪ್ರಶಸ್ತಿಯನ್ನು ಇದೇ ಸಪ್ಟೆಂಬರ್28 ಗುರುವಾರ ದಂದು ಬೆಂಗಳೂರಿನ ಗಾಂಧಿಭವನದಲ್ಲಿ ಪ್ರಶಸ್ತಿ ಪ್ರಧಾನ ಸಮಾರಂಭ ಜರುಗಲಿದೆ. ಬಾಗವಾನ ಶಿಕ್ಷಕರಿಗೆ ಪ್ರಶಸ್ತಿ ಲಭಿಸಿರುವದರಿಂದ ಅವರ ಊರಿನ ಗ್ರಾಮಸ್ಥರು ಹಾಗೂ ಅವರ ಗೇಳೆಯರ ಬಳಗ ಹಾಗೂ ಶಿಕ್ಷಕ ವೃಂದ ಹರ್ಷ ವ್ಯಕ್ತ ಪಡಿಸಿದೆ.

error: Content is protected !!