ಸೂಡಿ ಶಾಲೆಯ ಮುಖ್ಯೋಪಾಧ್ಯಾಯ ಬಾಗವಾನ ಅವರಿಗೆ ಉತ್ತಮ ಶಿಕ್ಷಕ ಪ್ರಶಸ್ತಿ

ಸೂಡಿ ಶಾಲೆಯ ಮುಖ್ಯೋಪಾಧ್ಯಾಯ ಬಾಗವಾನ ಅವರಿಗೆ ಉತ್ತಮ ಶಿಕ್ಷಕ ಪ್ರಶಸ್ತಿ
ಕೊಡತಗೇರಿ ಎಕ್ಸ್‌ಪ್ರೆಸ್‌ ಸುದ್ದಿ
ಗಜೇಂದ್ರಗಡ :
ಗೋಗೇರಿ ಗ್ರಾಮದ ಮಾದರಿ ಶಿಕ್ಷಕ ಮತ್ತು ಗ್ರಾಮದ ಹಸನ್ಮುಖಿಯಾಗಿ ಶಿಕ್ಷಕನಾಗಿ ಸೇವೆ ಸಲ್ಲಿಸುತ್ತಾ ಮತ್ತು ಸಮಾಜಿಕ ಕಳಕಳಿ ಹೊಂದಿರುವ ನೆರೆಯ ಸರಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ಸೂಡಿಯ ಮುಖ್ಯೋಪಾಧ್ಯಾಯ ರಾದ ಶ್ರೀ ಎಚ್.ಡಿ.ಬಾಗವಾನ ಗುರುಗಳಿಗೆ ರೋಣ ತಾಲೂಕ ಮಟ್ಟದ ಉತ್ತಮ ಪ್ರಶಸ್ತಿ ದೊರಕಿರುವದಕ್ಕೆ ಶಾಲೆಯ ಶಿಕ್ಷಕ ವೃಂದ ಹಾಗೂ ಗೋಗೇರಿ ಗ್ರಾಮದ ಹಿರಿಯರು ಮತ್ತು ಯುವ ಪಡೆ ಹರ್ಷ ವ್ಯಕ್ತ ಪಡಿಸಿದೆ .
ಹುಸೇನಸಾಬ ಬಾಗವಾನ ಶಿಕ್ಷಕರು ಅವರು ಬೆಂಕಿಯಲ್ಲಿ ಅರಳಿದ ಹೂ ಎನ್ನಬಹುದು ಅವರು ಕಡು ಬಡತನದಲ್ಲಿ ಬೆಳೆದರು ಅವರು ಮತ್ತು ಅವರ ಕುಟಂಬ ವೃತ್ತಿ ಕೃಷಿ ಕುಟಂಬ ಅವರು ಕೃಷಿಯಲ್ಲಿ ಖುಷಿ ಕಂಡವರು. ನಂತರ ತಮ್ಮ ಅಭ್ಯಾಸವನ್ನು ಕೂಡ ಅತ್ಯಂತ ಕಠಿಣ ಪರಿಸ್ಥಿತಿಯಲ್ಲಿ ಮುಗಿಸಿ ಶಿಕ್ಷಕರಾಗಿ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವಲ್ಲಿ ಯಶಸ್ವಿಯಾದವರು ಅಂತಹ ಶಿಕ್ಷಕರಿಗೆ . ಪ್ರಶಿಸ್ತಿ ಸಿಕ್ಕಿದ್ದು ಅವರ ಒಡನಾಡಿಗಳು ಸಂತೋಷ ವ್ಯಕ್ತ ಪಡಿಸಿ ಮುಂದಿನ ದಿನಗಳಲ್ಲಿ ಅವರು ಎತ್ತರಕ್ಕೆ ಬೆಳೆಯಲಿ ಎಂದು ಗ್ರಾಮಸ್ಥರು ಸಹಿತ ಹರಿಸಿ ಹಾರೈಸಿದ್ದಾರೆ.

error: Content is protected !!