- ವಿಚ್ಛೇದನ ಪ್ರಕರಣಗಳನ್ನು ಒಂದು ವರ್ಷದೊಳಗೆ ಇತ್ಯರ್ಥಗೊಳಿಸಬೇಕು – ಹೈಕೋರ್ಟ್ ಆದೇಶ
ಕೊಡತಗೇರಿ ಎಕ್ಸ್‌ಪ್ರೆಸ್ ಸುದ್ದಿ
High Court Give Deadline To Divorce Cases: ವಿವಾಹ ವಿಚ್ಛೇದನ ಪ್ರಕರಣಗಳು ವರ್ಷಾನುಗಟ್ಟಲೆ ನಡೆಯುತ್ತಿರುವುದಕ್ಕೆ ಹೈಕೋರ್ಟ್ ಗರಂ ಆಗಿದೆ. ಇನ್ನು ಮುಂದೆ ಒಂದು ವರ್ಷದೊಳಗೆ ವಿಚ್ಛೇಧನ ಪ್ರಕರಣಗಳ ವಿಚಾರಣೆ ನಡೆಸಿ ಇತ್ಯರ್ಥ ಮಾಡಬೇಕು ಎಂದು ಕೆಳ ಹಂತದ ಎಲ್ಲಾ ನ್ಯಾಯಾಲಯಗಳಿಗೆ ಆದೇಶ ನೀಡಿದೆ.
ಹೈಲೈಟ್ಸ್:
ವಿವಾಹ ವಿಚ್ಛೇದನ ಪ್ರಕರಣಗಳು ವರ್ಷಾನುಗಟ್ಟಲೆ ನಡೆಯುತ್ತಿರುವುದಕ್ಕೆ ಹೈಕೋರ್ಟ್ ಗರಂ.
ಒಂದು ವರ್ಷದೊಳಗೆ ವಿಚ್ಛೇಧನ ಪ್ರಕರಣಗಳ ವಿಚಾರಣೆ ನಡೆಸಿ ಇತ್ಯರ್ಥ ಮಾಡಬೇಕು ಎಂದು ಕೆಳ ಹಂತದ ಎಲ್ಲಾ ನ್ಯಾಯಾಲಯಗಳಿಗೆ ಆದೇಶ.
ವಿಳಂಬ ಎರಡೂ ಕುಟುಂಬಗಳ ಮೇಲೆ ಕೆಟ್ಟ ಪರಿಣಾಮ ಎಂದು ಅಭಿಪ್ರಾಯ.
ಬೆಂಗಳೂರು : ವಿವಾಹ ವಿಚ್ಛೇದನ ಸೇರಿ ವೈವಾಹಿಕ ಪ್ರಕರಣಗಳ ವಿಲೇವಾರಿಯಲ್ಲಿ ವಿಳಂಬವಾಗುತ್ತಿರುವ ಬಗ್ಗೆ ಬೇಸರ ವ್ಯಕ್ತಪಡಿಸಿರುವ ಹೈಕೋರ್ಟ್, ವೈವಾಹಿಕ ಪ್ರಕರಣಗಳನ್ನು ಗರಿಷ್ಠ ಒಂದು ವರ್ಷದೊಳಗೆ ಇತ್ಯರ್ಥಪಡಿಸಬೇಕು ಎಂದು ಕೌಟುಂಬಿಕ ನ್ಯಾಯಾಲಯಗಳಿಗೆ ಆದೇಶಿಸಿದೆ.
ತನ್ನ ವಿವಾಹ ವಿಚ್ಛೇದನ ಅರ್ಜಿ ತ್ವರಿತಗತಿಯಲ್ಲಿಇತ್ಯರ್ಥಪಡಿಸುವಂತೆ ಕೌಟುಂಬಿಕ ನ್ಯಾಯಾಲಯಕ್ಕೆ ನಿರ್ದೇಶನ ನೀಡಬೇಕೆಂದು ಕೋರಿ ಎನ್. ರಾಜೀವ್ ಸಲ್ಲಿಸಿದ್ದ ಅರ್ಜಿಯನ್ನು ಮಾನ್ಯ ಮಾಡಿರುವ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ಏಕಸದಸ್ಯ ಪೀಠ, ಈ ಆದೇಶ ನೀಡಿದೆ.
ಎರಡೂ ಕುಟುಂಬ ಮೇಲೆ ಕೆಟ್ಟ ಪರಿಣಾಮ
ಪ್ರಕರಣಗಳ ವಿಚಾರಣೆ ವಿಳಂಬ ಎರಡೂ ಕುಟುಂಬಗಳ ಮೇಲೆ ಅತ್ಯಂತ ಕೆಟ್ಟ ಪರಿಣಾಮ ಬೀರುತ್ತದೆ ಎಂದು ಅಭಿಪ್ರಾಯಪಟ್ಟಿರುವ ನ್ಯಾಯಾಲಯ, ‘ಧಿ’ಮನುಷ್ಯ ಜೀವನದ ಅಲ್ಪಾವಧಿಯನ್ನು ಗಮನದಲ್ಲಿಟ್ಟುಕೊಂಡು ವೈವಾಹಿಕ ಪ್ರಕರಣಗಳ ವಿಲೇವಾರಿಯನ್ನು ಸಮರೋಪಾದಿಯಲ್ಲಿ ಕೈಗೊಳ್ಳಬೇಕಿದೆ
Youre so cool! I dont suppose Ive learn anything like this before. So nice to find anyone with some unique thoughts on this subject. realy thanks for beginning this up. this web site is something that’s needed on the net, somebody with just a little originality. helpful job for bringing one thing new to the web!
tq sir