ದೇವರು ಕೊಟ್ಟ ಮಗ . ಪೋಲಿಸರಲ್ಲಿಯು ಮಾನವೀಯತೆ ಇರುತ್ತೆ

ದೇವರು ಕೊಟ್ಟ ಮಗ . ಪೋಲಿಸರಲ್ಲಿಯು ಮಾನವೀಯತೆ ಇರುತ್ತೆ

ಕೊಡತಗೇರಿ ಎಕ್ಸ್‌ಪ್ರೆಸ್‌.

#ಹೀಗೊಂದು_ವಾಹನ_ತಪಾಸಣೆ
ಅಲ್ಲಿ ಟ್ರಾಫಿಕ್ ಪೊಲೀಸ್ ಎಲ್ಲಾ ಗಾಡಿಗಳನ್ನೂ ನಿಲ್ಲಿಸಿದ್ದರು. Pc ಎಲ್ಲಾ ಗಾಡಿಗಳನ್ನು ಚೆಕ್ ಮಾಡಿ ಲೈಸನ್ಸ್ Polution, RC ದಾಖಲೆ ಗಳನ್ನು ಚೆಕ್ ಮಾಡಿ.. ಎದುರು ಪೊಲೀಸ್ ಗಾಡಿಯಲ್ಲಿ ಕೂತಿದ್ದ ಟ್ರಾಫಿಕ್ SI ಬಳಿ ಕಳಿಸುತ್ತಿದ್ದ.. ದಾಖಲೆ ಸರಿಯಾಗಿಲ್ಲದ ಗಾಡಿ ಗಳಿಗೆ ಸ್ಥಳದಲ್ಲೇ 500,1000 ರೂ ಫೈನ್ ಹಾಕುತಿದ್ದರು.. ಅಲ್ಲೊಬ್ಬರು ಅಜ್ಜ ಆಟೋದಲ್ಲಿ ಪಾಸೆಂಜರ್ ಅನ್ನು ಕೊಂಡೊಯ್ಯುತಿದ್ದರು. ಅವರನ್ನೂ ತಡೆದು ನಿಲ್ಲಿಸಲಾಯಿತು. ಸುಮಾರು 70 ವರ್ಷದ ಅಜ್ಜ.. ತಮ್ಮ ದಾಖಲೆ ಹಿಡಿದು.. ನಡುಗುವ ಕೈಗಳಲ್ಲಿ ಹೆದರುತ್ತಾ PC ಬಳಿ ಬಂದರು…..*
*Pc ನೋಡಿದ ಲೈಸನ್ಸ್ 5 ವರ್ಷ ಹಳೆಯದ್ದು ರಿನಿವಲ್ ಆಗಿರಲಿಲ್ಲಅವರನ್ನೊಮ್ಮೆ ನೋಡಿದ ಬಿಳಿ ಕೂದಲು, ಬಾಡಿದ ಮುಖ, ಕೊಳೆಯಾದ ಯುನಿಫಾರ್ಮ್, ಕೈ ಮುಗಿದು ನಿಂತಿದ್ದರು, “ಏನ್ರೀ 4 ಕತ್ತೆ ವಯಸ್ಸಾಗಿದೆ, ರೆಕಾರ್ಡ್ ಸರಿ ಇಲ್ಲ ಗಾಡಿ ಸೈಡ್ಗೆ ಇಡಿ ಇನ್ಸ್ಪೆಕ್ಟರ್ ಹತ್ರ ಹೋಗಿ” ಎಂದ ಪೊಲೀಸ್ ಭಾಷೆಯಲ್ಲಿ , ಅಜ್ಜ ನ ಕಣ್ಣಲ್ಲಿ ನೀರಿತ್ತು. ವಿಧ ವಿಧವಾಗಿ ಬೇಡಿ ಕೊಂಡರು ಅಜ್ಜ ,ಅವರ ಬಳಿ ಹಣ ಇರಲಿಲ್ಲ, ಅಷ್ಟರಲ್ಲಿ ಅಲ್ಲಿ ತುಂಬ ಜನ ಒಟ್ಟಾಗಿದ್ದರು ಎಲ್ಲರೂ ಅಜ್ಜನನ್ನು ಬೈದು ಕೊಂಡರು. ಅಜ್ಜ ನ ಆಟೋ ದಲ್ಲಿದ್ದ ಕಸ್ಟಮರ್ ಅದಾಗಲೇ ಇಳಿದು ಹೋಗಿದ್ದರು ಬೈದು ಕೊಳ್ಳುತ್ತ.*
*ಅಜ್ಜನಿಗೆ ಗೊತ್ತಿತ್ತು ಒಮ್ಮೆ ಪೊಲೀಸ್ ಸ್ಟೇಷನ್ ಗೆ ಗಾಡಿ ಹೋದರೆ ಮತ್ತೆ ಬರಲು ಹೆಚ್ಚು ಹಣ ಬೇಕು ಎಂದು ಅಜ್ಜ ನ 2 ಕಣ್ಣು ಗಳೂ ನೀರು ತುಂಬಿದ್ದವು. ಇದೆಲ್ಲವನ್ನು ಸೈಡ್ ಮಿರರ್ ಅಲ್ಲಿ ನೋಡುತಿದ್ದ ಇನ್ಸ್ಪೆಕ್ಟರ್ ಅಜ್ಜನನ್ನು ಬರುವಂತೆ ಸನ್ನೆ ಮಾಡಿದರು. ರಿಕ್ಷಾ ಸೈಡ್ ಇಟ್ಟಅಜ್ಜ ಅಳುಕುತ್ತಾ ಹೋದರು ಇನ್ಸ್ಪೆಕ್ಟರ್ ಬಳಿ .*

*”ಎಲ್ಲಿ ಇನ್ಶೂರೆನ್ಸ್? ” ಇನ್ಸ್ಪೆಕ್ಟರ್ ಧ್ವನಿ ಗಡುಸಾಗಿತ್ತು… ಅಜ್ಜ ನಡುಗುವ ಕೈಗಳಿಂದ ಇಂಶುರೆನ್ಸ್ ಕೊಟ್ಟರು. ಇನ್ಸ್ಪೆಕ್ಟರ್ ಅಜ್ಜನನ್ನೊಮ್ಮೆ ನೋಡಿದರು …ಅಜ್ಜ ಅಂಗಲಾಚುತಿದ್ದರು “ಸರ್ ಒಮ್ಮೆ ಬಿಟ್ಬಿಡಿ, ದಮ್ಮಯ್ಯ, 50 ರೂ ಮಾತ್ರ ಇದೆ ಸರ್ ಬೆಳಿಗ್ಗೆ ಇಂದ ಬೋಣಿ ಕೂಡಾ ಆಗಿಲ್ಲ ಸರ್ ಎನ್ನುವಾಗ ಅಜ್ಜನ ಕೊಳಕಾದ ಗುಂಡಿ ಹೋದ ಯುನಿಫಾರ್ಮ್ ಒಳಗಿಂದ ನೂರೆಂಟು ತೂತು ಗಳಿರುವ ಬನಿಯನ್ ಅಜ್ಜನ ಕುಟುಂಬದ ದರ್ಶನ ಮಾಡಿಸಿತ್ತು ಇನ್ಸ್ಪೆಕ್ಟರ್ ಗೆ.*
*”ಗಾಡಿ ಹತ್ತಿ ಎಂದ” ಮತ್ತೆ ಅದೇ ಗಡುಸಾದ ಧ್ವನಿಯಲ್ಲಿ… ಇಲ್ಲ ಎನ್ನುವಷ್ಟು ಧೈರ್ಯ ಅಜ್ಜನಲ್ಲೂ ಇರಲಿಲ್ಲ ಹತ್ತಿ ಕೂತರು ಇನ್ಸ್ಪೆಕ್ಟರ್ ಬಳಿಯ ಸೀಟಲ್ಲಿ.ಕಣ್ಣ ನೀರು ಹರಿಯುತ್ತಲೇ ಇತ್ತು.*
*ಇನ್ಸ್ಪೆಕ್ಟರ್ ಅಜ್ಜನ ಮನೆಯ ಬಗ್ಗೆ ವಿಚಾರಿಸುತಿದ್ದ,ಮನೆ ಎಲ್ಲಿ,? ಯಾರೆಲ್ಲ ಇದ್ದಾರೆ,? ಮಕ್ಕಳಿಲ್ಲವ?ಎಂಬೆಲ್ಲಾ ಪ್ರಶ್ನೆಗಳು ತೋರಿಬಂದವು, ಇಲ್ಲೇ ಉಡುಪಿಯ ಕಟಪಾಡಿ ಬಳಿ ಮನೆ,ನಾನು ಹಾಗೂ ಹೆಂಡತಿ, ಮಗ ಇದ್ದಾನೆ ಮದುವೆ ಆದಮೇಲೆ ನಮ್ಮನ್ನು ಬಿಟ್ಟು ಹೋಗಿದ್ದಾನೆ. ಈ ವಯಸ್ಸಲ್ಲಿ ದುಡಿಮೆ ಅನಿವಾರ್ಯ, ಹೆದರುತ್ತಾ ಹೇಳುತ್ತಿದ್ದ.ಅಜ್ಜನಿಗೆ ಅಲ್ಲೊಂದು ವಿಸ್ಮಯ ಕಾದಿತ್ತು*
*ಪೊಲೀಸ್ ಗಾಡಿ ಪೊಲೀಸ್ ಸ್ಟೇಷನ್ ಅಲ್ಲಿ ನಿಲ್ಲ ಬಹುದು ಎಂದು ಯೋಚಿಸಿದ್ದ, ಆದರೆ ಅಜ್ಜನ ಜೋಪಡಿಯಂತಿದ್ದ ಮನೆ ಬಳಿಯೇ ನಿಂತಿತ್ತು ಗಾಡಿ .*
*ಅಜ್ಜ ಜೋಪಾಡಿ ಒಳಗೆ ಹೋದ, ಇನ್ಸ್ಪೆಕ್ಟರ್ ಯಾರಿಗೋ ಫೋನ್ ಮಾಡಿ ಬಗ್ಗಿ ಒಳಹೋದ. ಅಜ್ಜಿ ಹಾಸಿಗೆಯಲ್ಲಿ ಮಲಗಿದ್ದರು, ಮನೆಯಲ್ಲಿ ಅಜ್ಜಿಯ ಔಷದ, ಬಟ್ಟೆ, ಊಟಕ್ಕೆ ಅಕ್ಕಿ ಎಲ್ಲವೂ ಅಜ್ಜನ ನಿತ್ಯದ ಆಟೋ ದಿಂದ ಬಂದ ಹಣದಿಂದಲೇ ಆಗಬೇಕಿತ್ತು, ಅಜ್ಜಿಯ ಕಣ್ಣಲ್ಲಿ ಅಘಾತವಿತ್ತು ಪೊಲೀಸ್ನನ್ನು ನೋಡಿ, ಅಜ್ಜಿಗೂ ತಿಳಿದು ಹೋಯ್ತು ಇವತ್ತೂ ಕೂಡಾ ಗಂಡನಿಗೆ ಬಾಡಿಗೆ ಆಗಿಲ್ಲ ಎಂದು.ಅಷ್ಟರಲ್ಲಿ ಇಬ್ಬರು PC ಗಳು ಒಳಬಂದಿದ್ದರು. ಒಬ್ಬರ ಕೈಯಲ್ಲಿ ಅಕ್ಕಿ ಚೀಲ ಇದ್ದರೆ, ಇನ್ನೊಬ್ಬರ ಕೈಯಲ್ಲಿ ಮನೆಯ ಸಾಮಾನು ಗಳಿದ್ದವು. ಇನ್ಸ್ಪೆಕ್ಟರ್ ಕಿಸೆ ಇಂದ 5000 ದ ನೋಟು ಗಳನ್ನೆಣಿಸಿ ಅಜ್ಜನ ಕೈಗಿತ್ತು ಹೇಳಿದರು ಇನ್ನು ನಿಮ್ಮ ಮಗನಾಗಿ ನಾನಿರುತ್ತೇನೆ ಹೆದರಬೇಡಿ ಎಂದು.*
ಇದುವರೆಗೆ ಹೆದರಿಕೆ ಇಂದ ಬಂದಿದ್ದ ಕಣ್ಣೀರು ಈ ಬಾರಿ ಆನಂದ ಬಾಷ್ಪವಾಗಿ ಬದಲಾಗಿತ್ತು. ಇನ್ಸ್ಪೆಕ್ಟರ್ PC ಅಲ್ಲಿ ಹೇಳಿದ ನಾಳೆಯೇ ಅಜ್ಜನನ್ನು ಕರೆದು ಕೊಂಡು ಹೋಗಿ ಅಜ್ಜನ ಇನ್ಶೂರೆನ್ಸ್, ಲೈಸನ್ಸ್ ರಿನೀವಲ್ ಮಾಡಿಸು.ಅಜ್ಜನ ಮೇಲೆ ಒಂದು ಕಣ್ಣಿಟ್ಟಿರು ಅವರು ಇಂದಿನಿಂದ ನನ್ನ ತಂದೆ ನೆನಪಿರಲಿ ಎಂದವನೇ PC ಬಳಿ ರಸ್ತೆಯಲ್ಲಿ ನಿಲ್ಲಿಸಿದ ಅಜ್ಜನ ಆಟೋ ತಂದು ಅವರ ಮನೆ ಬಳಿ ಇಡು” ಎಂದು ಹೇಳಿ ವಾಪಸ್ ಹೋಗಿದ್ದ.ಅಜ್ಜ ಅಜ್ಜಿ ಬಿಟ್ಟ ಕಣ್ಣು ಗಳು ಮುಚ್ಚದಂತೆ.ದೇವರು ಕೊಟ್ಟ ಮಗನನ್ನು ನೋಡುತ್ತಲೇ ಇದ್ದರು.

*ಇಲ್ಲಿ ಎರಡು ವಿಷಯ ಮುಖ್ಯ ಮೊದಲನೆಯದು ಆಟೋ ದವರು. ಇವರ ವೃತ್ತಿಗೆ ನಿವೃತ್ತಿ ಎನ್ನುವುದೇ ಇಲ್ಲ ಸಮಾಜದಲ್ಲಿ ಅದೆಷ್ಟು ಜನ 60-70 ದಾಟಿದರೂ ತಮ್ಮ ಆಟೋವನ್ನೇ ನಂಬಿಕೊಂಡು ಜೀವನ ನಡೆಸುತ್ತಾರೆ. ಹೇಳಿ ಅಂತವರ ಬಗ್ಗೆ ಗೌರವವಿರಲಿ. ಇನ್ನು ಟ್ರಾಫಿಕ್ ಪೊಲೀಸ್ ರು ಎಂದಾಕ್ಷಣ ಹಣ ತಿನ್ನೋ ರಾಕ್ಷಸರು ಎಂದು ಕೊಳ್ಳುವ ಜನರ ಬುದ್ದಿ ಬದಲಾಯಿಸುವ ಇಂತಹ ಕೆಲಸ ಮಾಡಿ,ಟ್ರಾಫಿಕ್ ಪೊಲೀಸರೂ ಜನರ ಪಾಲಿಗೆ ದೇವರೆನಿಸಿಕೊಳ್ಳುವ ಜನರೂ ನಮ್ಮದೇ ಸಮಾಜದಲ್ಲಿ ಇದ್ದಾರೆ ಅಲ್ಲವೇ? ನೆನಪಿರಲಿ ಮಾನವೀಯತೆ ಎಲ್ಲಾ ಧರ್ಮಗಳಲ್ಲೂ ಅತ್ಯಂತ ಶ್ರೇಷ್ಠ ಧರ್ಮ ಯಾಕೆಂದರೆ ಹೆತ್ತ ತಾಯಿ- ತಂದೆಗೆ ಮಗ ಎಲ್ಲರೂ ಆಗುತ್ತಾರೆ. ನಮ್ಮಪಾಲಿಗೆ ದೇವರು ಕೊಟ್ಟ ಮಗ ಎನಿಸಿಕೊಳ್ಳುವುದು ನಿಜಕ್ಕೂ ಜೀವನದಲ್ಲಿ ಅತ್ಯಂತ ಶ್ರೇಷ್ಠ ಕ್ಷಣ ಅಲ್ಲವೇ*?

Fb ಇಂದ ಬಂದಿದ್ದು. (ಸಂಗ್ರಹಿತ)

error: Content is protected !!