ವಿಧಿಗೇ ಸವಾಲು ಹಾಕಿ ಗೆದ್ದ ‘ಡಿಕೆ’: ನಂಬಿಕೆದ್ರೋಹದ ಸುಳಿಯಿಂದ RCB ಚಾಂಪಿಯನ್ ಪಟ್ಟದವರೆಗೆ

ವಿಧಿಗೇ ಸವಾಲು ಹಾಕಿ ಗೆದ್ದ ‘ಡಿಕೆ’: ನಂಬಿಕೆದ್ರೋಹದ ಸುಳಿಯಿಂದ RCB ಚಾಂಪಿಯನ್ ಪಟ್ಟದವರೆಗೆ!

ಕೊಡತಗೇರಿ ಎಕ್ಸ್‌ಪ್ರೆಸ್‌ ಡಿಜಿಟಲ್ ಹೌಸ್

ಕ್ರಿಸ್ ಗೇಲ್, ಎಬಿ ಡಿವಿಲಿಯರ್ಸ್, ಯುವರಾಜ್ ಸಿಂಗ್, ಶೇನ್ ವಾಟ್ಸನ್, ಗ್ಲೆನ್ ಮ್ಯಾಕ್ಸ್’ವೆಲ್, ಫಾಫ್ ಡುಪ್ಲೆಸಿಸ್.. ಇವರೆಲ್ಲಾ ಕೇವಲ ಹೆಸರುಗಳಲ್ಲ, ಟಿ20 ಕ್ರಿಕೆಟ್ ಸಾಮ್ರಾಜ್ಯದ ಒಂದೊಂದು ಮೈಲುಗಲ್ಲುಗಳು, ಧಗಧಗಿಸುವ ಚರಿತ್ರೆಗಳು! ಆದರೆ, ಇಷ್ಟೆಲ್ಲಾ ದೈತ್ಯ ದಾಂಡಿಗರು ಆಡಿದ್ದಾಗಲೂ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡಕ್ಕೆ ಐಪಿಎಲ್ ಕಪ್ ಗೆಲ್ಲಲು ಸಾಧ್ಯವಾಗಿರಲಿಲ್ಲ. ಕಾರಣ ಇಷ್ಟೇ— ಅಂದು ತೆರೆಯ ಹಿಂದೆ ಆ ಒಬ್ಬ ‘ಮಾಸ್ಟರ್ ಮೈಂಡ್’ ಇರಲಿಲ್ಲ

​ಯಾವಾಗ 2025ರಲ್ಲಿ ಆರ್‌ಸಿಬಿ ಕಪ್ ಗೆದ್ದು ಇತಿಹಾಸ ನಿರ್ಮಿಸಿತೋ, ಆಗ ತಂಡದಲ್ಲಿ ಗೇಲ್ ಇರಲಿಲ್ಲ, ಡಿವಿಲಿಯರ್ಸ್ ಇರಲಿಲ್ಲ. ಆದರೆ, 18 ವರ್ಷಗಳ ಸೋಲು, ಅವಮಾನ, ಹತಾಶೆ ಮತ್ತು ನಿಂದನೆಗಳನ್ನೆಲ್ಲಾ ಎದುರಿಸಿ ನಿಂತಿದ್ದ ಬೆಂಗಳೂರು ತಂಡದ ಬೆನ್ನಿಗೆ ಒಬ್ಬ ಚಾಣಾಕ್ಷ ನಿಂತಿದ್ದ. ಆತನೇ ತೆರೆಯ ಮರೆಯ ಸೂತ್ರಧಾರ, ದಿನೇಶ್ ಕಾರ್ತಿಕ್!

​ಧೋನಿ ಎಂಬ ಸುನಾಮಿ ಮತ್ತು ಅಗ್ನಿಪರೀಕ್ಷೆಯ ದಿನಗಳು

​2004ರಲ್ಲಿ ಭಾರತ ತಂಡದ ಪರ ದಿನೇಶ್ ಕಾರ್ತಿಕ್ ಮೊದಲ ಬಾರಿಗೆ ಪ್ಯಾಡ್ ಕಟ್ಟಿ ಮೈದಾನಕ್ಕಿಳಿದಾಗ ಭಾರತೀಯ ಕ್ರಿಕೆಟ್‌ನಲ್ಲಿ ದೊಡ್ಡ ಭವಿಷ್ಯದ ಭರವಸೆ ಮೂಡಿತ್ತು. ಆದರೆ ಮೂರೇ ತಿಂಗಳಲ್ಲಿ ಭಾರತೀಯ ಕ್ರಿಕೆಟ್ ಜಗತ್ತಿನಲ್ಲಿ ಒಂದು ಸುನಾಮಿ ಎದ್ದಿತು— ಅದೇ ಮಹೇಂದ್ರ ಸಿಂಗ್ ಧೋನಿ! ಧೋನಿ ಎಂಬ ಚಂಡಮಾರುತದ ಮುಂದೆ ಕಾರ್ತಿಕ್ ಅವರ ಅಗ್ನಿಪರೀಕ್ಷೆಯ ದಿನಗಳು ಆರಂಭವಾದವು. ಧೋನಿ ಇರುವವರೆಗೆ ತಂಡದಲ್ಲಿ ಖಾಯಂ ಸ್ಥಾನ ಸಿಗುವುದು ಅಸಾಧ್ಯವಾಗಿತ್ತು. ಸಿಕ್ಕ ಅಲ್ಪಸ್ವಲ್ಪ ಅವಕಾಶಗಳಲ್ಲೇ ಹೋರಾಡಿದ ಕಾರ್ತಿಕ್, ಎಂದಿಗೂ ಧೋನಿ ವಿರುದ್ಧ ದ್ವೇಷ ಸಾಧಿಸಲಿಲ್ಲ.

​”ಅದು ನನ್ನ ದೌರ್ಭಾಗ್ಯ ಇರಬಹುದು. ಆದರೆ ನನ್ನ ಸ್ಥಾನದಲ್ಲಿ ಆಡಿದವನು ಯಾರೋ ಸಣ್ಣ ಕ್ರಿಕೆಟಿಗನಲ್ಲ, ದಿಗ್ಗಜ ಧೋನಿ. ಆ ಬಗ್ಗೆ ನನಗೆ ಹೆಮ್ಮೆಯಿದೆ” ಎಂದು ದೊಡ್ಡಗುಣ ತೋರಿದ್ದರು ಡಿಕೆ.

​ವೈಯಕ್ತಿಕ ಬದುಕಲ್ಲಿ ಸುಂಟರಗಾಳಿ: ಪ್ರಾಣಸ್ನೇಹಿತನಿಂದಲೇ ನಂಬಿಕೆದ್ರೋಹ!

​ವೃತ್ತಿಬದುಕಿನಲ್ಲಿ ಬಿರುಗಾಳಿ ಬೀಸುತ್ತಿದ್ದರೆ, ಅವರ ವೈಯಕ್ತಿಕ ಬದುಕಿನಲ್ಲಿ ವಿಧಿಯೇ ಸುಂಟರಗಾಳಿಯನ್ನೆಬ್ಬಿಸಿತು. ಪ್ರಾಣಕ್ಕೆ ಪ್ರಾಣವಾಗಿದ್ದ ಗೆಳೆಯನೇ ಬೆನ್ನಿಗೆ ಇರಿದಿದ್ದ. ಸಪ್ತಪದಿ ತುಳಿದು ಮನೆಗೆ ಬಂದ ಹೆಂಡತಿ, ಅದೇ ಸ್ನೇಹಿತನ ಕೈ ಹಿಡಿದು ಹೊರಟು ನಿಂತಿದ್ದಳು!

​”ನಾನು ನಿನ್ನ ಸ್ನೇಹಿತನನ್ನು ಪ್ರೀತಿಸುತ್ತಿದ್ದೇನೆ, ನಮಗೆ ಹುಟ್ಟಿದ ಮಕ್ಕಳೂ ಅವನದ್ದೇ.. ನನಗೆ ವಿಚ್ಛೇದನ ಕೊಟ್ಟುಬಿಡು” ಎಂದು ಪತ್ನಿ ಹೇಳಿದಾಗ ದಿನೇಶ್ ಕಾರ್ತಿಕ್ ಅವರ ಹೃದಯ ಚೂರಾಗಿದ್ದಷ್ಟೇ ಅಲ್ಲ, ನಂಬಿಕೆ ಮತ್ತು ಸ್ನೇಹ ಎಂಬ ಪವಿತ್ರ ಬಂಧಗಳೇ ಕಳಚಿ ಬಿದ್ದಿದ್ದವು. ಮಾನಸಿಕವಾಗಿ ತೀವ್ರ ಕುಗ್ಗಿ ಹೋದ ಕಾರ್ತಿಕ್, ನಾಲ್ಕು ಗೋಡೆಗಳ ಮಧ್ಯೆ ಬಂಧಿಯಾದರು. ತಿಂಗಳುಗಟ್ಟಲೆ ಹೊರಬರಲಿಲ್ಲ. ಒಂದು ಹಂತದಲ್ಲಿ ಆತ್ಮಹತ್ಯೆಯ ಆಲೋಚನೆಯೂ ಬಂದಿತ್ತು. ಆದರೆ ವಿಧಿಯ ಆಟ ಬೇರೆಯೇ ಇತ್ತು.

​ಹೊಸ ಬದುಕು ಕೊಟ್ಟ ‘ಅದೃಷ್ಟದೇವತೆ’ ದೀಪಿಕಾ ಪಳ್ಳಿಕಲ್

​ಉಸಿರು ಚೆಲ್ಲಲು ಹೊರಟಿದ್ದ ಕಾರ್ತಿಕ್ ಕೈಯನ್ನು ಹಿಡಿದು, ಅವರಿಗೆ ಹೊಸ ಉಸಿರು ಕೊಟ್ಟವಳು ದೇಶದ ಹೆಮ್ಮೆಯ ಸ್ಕ್ವಾಷ್ ಆಟಗಾರ್ತಿ ದೀಪಿಕಾ ಪಳ್ಳಿಕಲ್. ಜಿಮ್‌ನಲ್ಲಿ ಪರಿಚಯವಾದ ದೀಪಿಕಾ ಎದುರು ಕಾರ್ತಿಕ್ ತಮ್ಮ ಕಣ್ಣೀರಿನ ಕಥೆಯನ್ನೆಲ್ಲಾ ತೆರೆದಿಟ್ಟರು. “ಸೌಂದರ್ಯ ಮುಖದಲ್ಲಿರುವುದಿಲ್ಲ, ಹೃದಯದಲ್ಲಿರುತ್ತದೆ” ಎಂಬುದನ್ನು ಸಾಬೀತುಪಡಿಸಿದ ದೀಪಿಕಾ, ಕಾರ್ತಿಕ್ ಅವರನ್ನು ಮದುವೆಯಾದರು. ಈ ಮದುವೆ ಕಾರ್ತಿಕ್ ಬದುಕಿಗೆ ಹೊಸ ಬೆಳಕನ್ನು, ಅದೃಷ್ಟವನ್ನು ಹೊತ್ತು ತಂದಿತು.

​39ನೇ ವಯಸ್ಸಿನ ಮರುಹುಟ್ಟು ಮತ್ತು RCB ಮೆಂಟರ್ ಆಗಿ ಮ್ಯಾಜಿಕ್!

​ಕ್ರಿಕೆಟ್ ಮುಗಿಯಿತು ಎನ್ನುವಾಗಲೇ 15 ವರ್ಷಗಳ ನಂತರ ವಿಶ್ವಕಪ್ ಆಡಿದರು. ಅಲ್ಲಿ ವಿಫಲರಾದಾಗ ಮತ್ತೆ ಟೀಕೆಗಳು ಕೇಳಿಬಂದವು. ಆದರೆ ಆರ್‌ಸಿಬಿ ತಂಡ ಸೇರಿದ ಮೇಲೆ ಕಾರ್ತಿಕ್ ಅವರ ಆಟವೇ ಬದಲಾಯಿತು. 37ನೇ ವಯಸ್ಸಿನಲ್ಲಿ ಮತ್ತೆ ಭಾರತ ತಂಡಕ್ಕೆ ಕಂಬ್ಯಾಕ್ ಮಾಡಿದರು. ಆರ್‌ಸಿಬಿ ಪರ ಆಡಿದ ಕೊನೆಯ ವರ್ಷ 39ರ ಹರೆಯದಲ್ಲೂ 174 ಎಸೆತಗಳಲ್ಲಿ 326 ರನ್ ಚಚ್ಚಿ ‘ಬೆಸ್ಟ್ ಫಿನಿಷರ್’ ಎನಿಸಿಕೊಂಡರು.

​ಆಟ ಮುಗಿಸಿದ ನಂತರ, ಆಟವಾಡಿಸುವ ಜವಾಬ್ದಾರಿಯನ್ನು ಹೊತ್ತ ದಿನೇಶ್ ಕಾರ್ತಿಕ್ ಆರ್‌ಸಿಬಿ ತಂಡದ ಮೆಂಟರ್ ಮತ್ತು ಬ್ಯಾಟಿಂಗ್ ಕೋಚ್ ಆಗಿ ಅಧಿಕಾರ ವಹಿಸಿಕೊಂಡರು. ಅಲ್ಲಿ ಅವರು ದೊಡ್ಡ ಹೆಸರುಗಳ ಹಿಂದೆ ಬೀಳದೆ, ಪಂದ್ಯ ಗೆಲ್ಲಿಸಿಕೊಡುವ ಆಟಗಾರರ ದಂಡನ್ನೇ ಕಟ್ಟಿದರು.

  • ಭುವನೇಶ್ವರ್ ಕುಮಾರ್ ಮತ್ತು ಕೃಣಲ್ ಪಾಂಡ್ಯ: “ಇವರ ಸಾಮರ್ಥ್ಯ ಮುಗಿದುಹೋಗಿದೆ” ಎಂದು ಜಗತ್ತು ದೂರ ಇಟ್ಟಾಗ, ಇವರನ್ನು ನಂಬಿ ಆರ್‌ಸಿಬಿಗೆ ಕರೆತಂದರು.
  • ಟಿಮ್ ಡೇವಿಡ್: ಮುಂಬೈ ಇಂಡಿಯನ್ಸ್ ಕೈಬಿಟ್ಟಿದ್ದ ಈ ದೈತ್ಯನಿಗೆ ಬೆಂಗಳೂರು ತಂಡದಲ್ಲಿ ಸೂಕ್ತ ಸ್ಥಾನ ನೀಡಿ ಮ್ಯಾಚ್ ವಿನ್ನರ್ ಆಗಿ ರೂಪಿಸಿದರು.

​ಫಲಿತಾಂಶ ಕಣ್ಣಮುಂದಿದೆ!

​ಯಾವ ಬೆಂಗಳೂರು ತಂಡ ಕಪ್ ಗೆಲ್ಲಲು 18 ವರ್ಷಗಳ ಕಾಲ ಕಾಯಬೇಕಿತ್ತೋ, ಅದೇ ತಂಡವನ್ನು ಕೇವಲ ಆಟಗಾರನಾಗಿ ಅಷ್ಟೇ ಅಲ್ಲದೆ, ಮಹಾನ್ ಮೆಂಟರ್ ಆಗಿ ತನ್ನ ಚಾಣಾಕ್ಷ ತಂತ್ರಗಳಿಂದ ಐಪಿಎಲ್ ಚಾಂಪಿಯನ್ ಪಟ್ಟಕ್ಕೇರಿಸಿದರು ದಿನೇಶ್ ಕಾರ್ತಿಕ್!

​ಸೋತ ಜಾಗದಲ್ಲೇ ಗೆದ್ದು ತೋರಿಸಬೇಕು, ಬಿದ್ದ ಕಡೆಯಿಂದಲೇ ಫೀನಿಕ್ಸ್‌ನಂತೆ ಎದ್ದು ಬರಬೇಕು ಎಂಬುದಕ್ಕೆ ದಿನೇಶ್ ಕಾರ್ತಿಕ್ ಅವರ ಈ ಪುನರ್ಜನ್ಮದ ಬದುಕೇ ಸಾಕ್ಷಿ. ಬದುಕನ್ನು ಪ್ರೀತಿಸಿ ಗೆದ್ದವನು, ಕೊನೆಗೂ ಆರ್‌ಸಿಬಿಯನ್ನೂ ಗೆಲ್ಲಿಸಿಬಿಟ್ಟ!

ಸಿಂಗ್, ಶೇನ್ ವಾಟ್ಸನ್, ಗ್ಲೆನ್ ಮ್ಯಾಕ್ಸ್’ವೆಲ್, ಫಾಫ್ ಡುಪ್ಲೆಸಿಸ್.. ಇವರೆಲ್ಲಾ ಕೇವಲ ಹೆಸರುಗಳಲ್ಲ, ಟಿ20 ಕ್ರಿಕೆಟ್ ಸಾಮ್ರಾಜ್ಯದ ಒಂದೊಂದು ಮೈಲುಗಲ್ಲುಗಳು, ಧಗಧಗಿಸುವ ಚರಿತ್ರೆಗಳು! ಆದರೆ, ಇಷ್ಟೆಲ್ಲಾ ದೈತ್ಯ ದಾಂಡಿಗರು ಆಡಿದ್ದಾಗಲೂ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡಕ್ಕೆ ಐಪಿಎಲ್ ಕಪ್ ಗೆಲ್ಲಲು ಸಾಧ್ಯವಾಗಿರಲಿಲ್ಲ. ಕಾರಣ ಇಷ್ಟೇ— ಅಂದು ತೆರೆಯ ಹಿಂದೆ ಆ ಒಬ್ಬ ‘ಮಾಸ್ಟರ್ ಮೈಂಡ್’ ಇರಲಿಲ್ಲ!

​ಯಾವಾಗ 2025ರಲ್ಲಿ ಆರ್‌ಸಿಬಿ ಕಪ್ ಗೆದ್ದು ಇತಿಹಾಸ ನಿರ್ಮಿಸಿತೋ, ಆಗ ತಂಡದಲ್ಲಿ ಗೇಲ್ ಇರಲಿಲ್ಲ, ಡಿವಿಲಿಯರ್ಸ್ ಇರಲಿಲ್ಲ. ಆದರೆ, 18 ವರ್ಷಗಳ ಸೋಲು, ಅವಮಾನ, ಹತಾಶೆ ಮತ್ತು ನಿಂದನೆಗಳನ್ನೆಲ್ಲಾ ಎದುರಿಸಿ ನಿಂತಿದ್ದ ಬೆಂಗಳೂರು ತಂಡದ ಬೆನ್ನಿಗೆ ಒಬ್ಬ ಚಾಣಾಕ್ಷ ನಿಂತಿದ್ದ. ಆತನೇ ತೆರೆಯ ಮರೆಯ ಸೂತ್ರಧಾರ, ದಿನೇಶ್ ಕಾರ್ತಿಕ್!

​ಧೋನಿ ಎಂಬ ಸುನಾಮಿ ಮತ್ತು ಅಗ್ನಿಪರೀಕ್ಷೆಯ ದಿನಗಳು

​2004ರಲ್ಲಿ ಭಾರತ ತಂಡದ ಪರ ದಿನೇಶ್ ಕಾರ್ತಿಕ್ ಮೊದಲ ಬಾರಿಗೆ ಪ್ಯಾಡ್ ಕಟ್ಟಿ ಮೈದಾನಕ್ಕಿಳಿದಾಗ ಭಾರತೀಯ ಕ್ರಿಕೆಟ್‌ನಲ್ಲಿ ದೊಡ್ಡ ಭವಿಷ್ಯದ ಭರವಸೆ ಮೂಡಿತ್ತು. ಆದರೆ ಮೂರೇ ತಿಂಗಳಲ್ಲಿ ಭಾರತೀಯ ಕ್ರಿಕೆಟ್ ಜಗತ್ತಿನಲ್ಲಿ ಒಂದು ಸುನಾಮಿ ಎದ್ದಿತು— ಅದೇ ಮಹೇಂದ್ರ ಸಿಂಗ್ ಧೋನಿ! ಧೋನಿ ಎಂಬ ಚಂಡಮಾರುತದ ಮುಂದೆ ಕಾರ್ತಿಕ್ ಅವರ ಅಗ್ನಿಪರೀಕ್ಷೆಯ ದಿನಗಳು ಆರಂಭವಾದವು. ಧೋನಿ ಇರುವವರೆಗೆ ತಂಡದಲ್ಲಿ ಖಾಯಂ ಸ್ಥಾನ ಸಿಗುವುದು ಅಸಾಧ್ಯವಾಗಿತ್ತು. ಸಿಕ್ಕ ಅಲ್ಪಸ್ವಲ್ಪ ಅವಕಾಶಗಳಲ್ಲೇ ಹೋರಾಡಿದ ಕಾರ್ತಿಕ್, ಎಂದಿಗೂ ಧೋನಿ ವಿರುದ್ಧ ದ್ವೇಷ ಸಾಧಿಸಲಿಲ್ಲ.

​”ಅದು ನನ್ನ ದೌರ್ಭಾಗ್ಯ ಇರಬಹುದು. ಆದರೆ ನನ್ನ ಸ್ಥಾನದಲ್ಲಿ ಆಡಿದವನು ಯಾರೋ ಸಣ್ಣ ಕ್ರಿಕೆಟಿಗನಲ್ಲ, ದಿಗ್ಗಜ ಧೋನಿ. ಆ ಬಗ್ಗೆ ನನಗೆ ಹೆಮ್ಮೆಯಿದೆ” ಎಂದು ದೊಡ್ಡಗುಣ ತೋರಿದ್ದರು ಡಿಕೆ.

​ವೈಯಕ್ತಿಕ ಬದುಕಲ್ಲಿ ಸುಂಟರಗಾಳಿ: ಪ್ರಾಣಸ್ನೇಹಿತನಿಂದಲೇ ನಂಬಿಕೆದ್ರೋಹ!

​ವೃತ್ತಿಬದುಕಿನಲ್ಲಿ ಬಿರುಗಾಳಿ ಬೀಸುತ್ತಿದ್ದರೆ, ಅವರ ವೈಯಕ್ತಿಕ ಬದುಕಿನಲ್ಲಿ ವಿಧಿಯೇ ಸುಂಟರಗಾಳಿಯನ್ನೆಬ್ಬಿಸಿತು. ಪ್ರಾಣಕ್ಕೆ ಪ್ರಾಣವಾಗಿದ್ದ ಗೆಳೆಯನೇ ಬೆನ್ನಿಗೆ ಇರಿದಿದ್ದ. ಸಪ್ತಪದಿ ತುಳಿದು ಮನೆಗೆ ಬಂದ ಹೆಂಡತಿ, ಅದೇ ಸ್ನೇಹಿತನ ಕೈ ಹಿಡಿದು ಹೊರಟು ನಿಂತಿದ್ದಳು!

​”ನಾನು ನಿನ್ನ ಸ್ನೇಹಿತನನ್ನು ಪ್ರೀತಿಸುತ್ತಿದ್ದೇನೆ, ನಮಗೆ ಹುಟ್ಟಿದ ಮಕ್ಕಳೂ ಅವನದ್ದೇ.. ನನಗೆ ವಿಚ್ಛೇದನ ಕೊಟ್ಟುಬಿಡು” ಎಂದು ಪತ್ನಿ ಹೇಳಿದಾಗ ದಿನೇಶ್ ಕಾರ್ತಿಕ್ ಅವರ ಹೃದಯ ಚೂರಾಗಿದ್ದಷ್ಟೇ ಅಲ್ಲ, ನಂಬಿಕೆ ಮತ್ತು ಸ್ನೇಹ ಎಂಬ ಪವಿತ್ರ ಬಂಧಗಳೇ ಕಳಚಿ ಬಿದ್ದಿದ್ದವು. ಮಾನಸಿಕವಾಗಿ ತೀವ್ರ ಕುಗ್ಗಿ ಹೋದ ಕಾರ್ತಿಕ್, ನಾಲ್ಕು ಗೋಡೆಗಳ ಮಧ್ಯೆ ಬಂಧಿಯಾದರು. ತಿಂಗಳುಗಟ್ಟಲೆ ಹೊರಬರಲಿಲ್ಲ. ಒಂದು ಹಂತದಲ್ಲಿ ಆತ್ಮಹತ್ಯೆಯ ಆಲೋಚನೆಯೂ ಬಂದಿತ್ತು. ಆದರೆ ವಿಧಿಯ ಆಟ ಬೇರೆಯೇ ಇತ್ತು.

​ಹೊಸ ಬದುಕು ಕೊಟ್ಟ ‘ಅದೃಷ್ಟದೇವತೆ’ ದೀಪಿಕಾ ಪಳ್ಳಿಕಲ್

​ಉಸಿರು ಚೆಲ್ಲಲು ಹೊರಟಿದ್ದ ಕಾರ್ತಿಕ್ ಕೈಯನ್ನು ಹಿಡಿದು, ಅವರಿಗೆ ಹೊಸ ಉಸಿರು ಕೊಟ್ಟವಳು ದೇಶದ ಹೆಮ್ಮೆಯ ಸ್ಕ್ವಾಷ್ ಆಟಗಾರ್ತಿ ದೀಪಿಕಾ ಪಳ್ಳಿಕಲ್. ಜಿಮ್‌ನಲ್ಲಿ ಪರಿಚಯವಾದ ದೀಪಿಕಾ ಎದುರು ಕಾರ್ತಿಕ್ ತಮ್ಮ ಕಣ್ಣೀರಿನ ಕಥೆಯನ್ನೆಲ್ಲಾ ತೆರೆದಿಟ್ಟರು. “ಸೌಂದರ್ಯ ಮುಖದಲ್ಲಿರುವುದಿಲ್ಲ, ಹೃದಯದಲ್ಲಿರುತ್ತದೆ” ಎಂಬುದನ್ನು ಸಾಬೀತುಪಡಿಸಿದ ದೀಪಿಕಾ, ಕಾರ್ತಿಕ್ ಅವರನ್ನು ಮದುವೆಯಾದರು. ಈ ಮದುವೆ ಕಾರ್ತಿಕ್ ಬದುಕಿಗೆ ಹೊಸ ಬೆಳಕನ್ನು, ಅದೃಷ್ಟವನ್ನು ಹೊತ್ತು ತಂದಿತು.

​39ನೇ ವಯಸ್ಸಿನ ಮರುಹುಟ್ಟು ಮತ್ತು RCB ಮೆಂಟರ್ ಆಗಿ ಮ್ಯಾಜಿಕ್!

​ಕ್ರಿಕೆಟ್ ಮುಗಿಯಿತು ಎನ್ನುವಾಗಲೇ 15 ವರ್ಷಗಳ ನಂತರ ವಿಶ್ವಕಪ್ ಆಡಿದರು. ಅಲ್ಲಿ ವಿಫಲರಾದಾಗ ಮತ್ತೆ ಟೀಕೆಗಳು ಕೇಳಿಬಂದವು. ಆದರೆ ಆರ್‌ಸಿಬಿ ತಂಡ ಸೇರಿದ ಮೇಲೆ ಕಾರ್ತಿಕ್ ಅವರ ಆಟವೇ ಬದಲಾಯಿತು. 37ನೇ ವಯಸ್ಸಿನಲ್ಲಿ ಮತ್ತೆ ಭಾರತ ತಂಡಕ್ಕೆ ಕಂಬ್ಯಾಕ್ ಮಾಡಿದರು. ಆರ್‌ಸಿಬಿ ಪರ ಆಡಿದ ಕೊನೆಯ ವರ್ಷ 39ರ ಹರೆಯದಲ್ಲೂ 174 ಎಸೆತಗಳಲ್ಲಿ 326 ರನ್ ಚಚ್ಚಿ ‘ಬೆಸ್ಟ್ ಫಿನಿಷರ್’ ಎನಿಸಿಕೊಂಡರು.

​ಆಟ ಮುಗಿಸಿದ ನಂತರ, ಆಟವಾಡಿಸುವ ಜವಾಬ್ದಾರಿಯನ್ನು ಹೊತ್ತ ದಿನೇಶ್ ಕಾರ್ತಿಕ್ ಆರ್‌ಸಿಬಿ ತಂಡದ ಮೆಂಟರ್ ಮತ್ತು ಬ್ಯಾಟಿಂಗ್ ಕೋಚ್ ಆಗಿ ಅಧಿಕಾರ ವಹಿಸಿಕೊಂಡರು. ಅಲ್ಲಿ ಅವರು ದೊಡ್ಡ ಹೆಸರುಗಳ ಹಿಂದೆ ಬೀಳದೆ, ಪಂದ್ಯ ಗೆಲ್ಲಿಸಿಕೊಡುವ ಆಟಗಾರರ ದಂಡನ್ನೇ ಕಟ್ಟಿದರು.

  • ಭುವನೇಶ್ವರ್ ಕುಮಾರ್ ಮತ್ತು ಕೃಣಲ್ ಪಾಂಡ್ಯ: “ಇವರ ಸಾಮರ್ಥ್ಯ ಮುಗಿದುಹೋಗಿದೆ” ಎಂದು ಜಗತ್ತು ದೂರ ಇಟ್ಟಾಗ, ಇವರನ್ನು ನಂಬಿ ಆರ್‌ಸಿಬಿಗೆ ಕರೆತಂದರು.
  • ಟಿಮ್ ಡೇವಿಡ್: ಮುಂಬೈ ಇಂಡಿಯನ್ಸ್ ಕೈಬಿಟ್ಟಿದ್ದ ಈ ದೈತ್ಯನಿಗೆ ಬೆಂಗಳೂರು ತಂಡದಲ್ಲಿ ಸೂಕ್ತ ಸ್ಥಾನ ನೀಡಿ ಮ್ಯಾಚ್ ವಿನ್ನರ್ ಆಗಿ ರೂಪಿಸಿದರು.

​ಫಲಿತಾಂಶ ಕಣ್ಣಮುಂದಿದೆ!

​ಯಾವ ಬೆಂಗಳೂರು ತಂಡ ಕಪ್ ಗೆಲ್ಲಲು 18 ವರ್ಷಗಳ ಕಾಲ ಕಾಯಬೇಕಿತ್ತೋ, ಅದೇ ತಂಡವನ್ನು ಕೇವಲ ಆಟಗಾರನಾಗಿ ಅಷ್ಟೇ ಅಲ್ಲದೆ, ಮಹಾನ್ ಮೆಂಟರ್ ಆಗಿ ತನ್ನ ಚಾಣಾಕ್ಷ ತಂತ್ರಗಳಿಂದ ಐಪಿಎಲ್ ಚಾಂಪಿಯನ್ ಪಟ್ಟಕ್ಕೇರಿಸಿದರು ದಿನೇಶ್ ಕಾರ್ತಿಕ್!

​ಸೋತ ಜಾಗದಲ್ಲೇ ಗೆದ್ದು ತೋರಿಸಬೇಕು, ಬಿದ್ದ ಕಡೆಯಿಂದಲೇ ಫೀನಿಕ್ಸ್‌ನಂತೆ ಎದ್ದು ಬರಬೇಕು ಎಂಬುದಕ್ಕೆ ದಿನೇಶ್ ಕಾರ್ತಿಕ್ ಅವರ ಈ ಪುನರ್ಜನ್ಮದ ಬದುಕೇ ಸಾಕ್ಷಿ. ಬದುಕನ್ನು ಪ್ರೀತಿಸಿ ಗೆದ್ದವನು, ಕೊನೆಗೂ ಆರ್‌ಸಿಬಿಯನ್ನೂ ಗೆಲ್ಲಿಸಿಬಿಟ್ಟ!

error: Content is protected !!