ಭ್ರಷ್ಟ ಡಿಡಿಪಿಐ ಶ್ರೀಶೈಲ ಬಿರಾದಾರ್ ಔಟ್, ಸಿಐಡಿ ವಿಚಾರಣೆ
ಕೊಡತಗೇರಿ ಎಕ್ಸ್‌ಪ್ರೆಸ್ ಡಿಜಿಟಲ್ ಡೆಸ್ಕ್
ಕೊಪ್ಪಳದ ಭ್ರಷ್ಟ ಡಿಡಿಪಿಐ ಶ್ರೀಶೈಲ ಬಿರಾದಾರ್ ಶಿಕ್ಷಕರ ನಿಯೋಜನೆಯಲ್ಲಿ ಅಕ್ರಮ ಎಸಗುತ್ತಿದ್ದಾರೆ ಎಂದು ಕೊಪ್ಪಳ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೃಷ್ಣ ಇಟ್ಟಂಗಿ ಆರೋಪಿಸಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದರು. ಇವರು ಪತ್ರಿಕೆ ಹೇಳಿಕೆ ಬೆನ್ನಲೆ ಜಿಲ್ಲೆಯಲ್ಲಿ ವ್ಯಾಪಕ ಚರ್ಚೆ ಸುರುವಾಗಿತ್ತು . ಅದರ ಹಿನ್ನೆಲೆಯಲ್ಲಿ ನಿನ್ನೆ ನಡೆದ ಬೆಳವಣಿಗೆಯಲ್ಲಿ ಸರಕಾರ ಕೈಗೊಂಡಿರುವ ನಿರ್ಧಾರದಂತೆ, ಬಿರಾದಾರ್ ಅವರನ್ನು ತಕ್ಷಣ ಡಿಡಿಪಿಐ ಹುದ್ದೆಯಿಂದ ಬಿಡುಗಡೆ ಮಾಡಲು ಆದೇಶಿಸಲಾಗಿದೆ. ಅವರಿಗೆ ಯಾವುದೇ ಹುದ್ದೆ ತೋರಿಸದೇ, ಸರಕಾರಕ್ಕೆ ವರದಿ ಮಾಡಿಕೊಳ್ಳುವಂತೆ ಸೂಚಿಸಲಾಗಿದೆ.
ಶಿಕ್ಷಕರ ನೇಮಕಾತಿ ಹಗರಣ ಕುರಿತು ಸಿಐಡಿ ನಡೆಸುತ್ತಿರುವ ತನಿಖೆಯಲ್ಲಿ ಪ್ರಮುಖ ಆರೋಪಿಯಾಗಿರುವ ಶ್ರೀಶೈಲ ಬಿರಾದಾರ್ ಹಾಗೂ ಅವರಂತಹ ಸರಕಾರಿ ನೌಕರನಿಗೆ ಯಾವುದೇ ಆಡಳಿತಾತ್ಮಕ ಜವಾಬ್ದಾರಿಗಳನ್ನು ನೀಡಬಾರದು ಎಂಬ ನಿಯಮವೇ ಇದೆ. ಆದರೂ, ಭ್ರಷ್ಟ ಶ್ರೀಶೈಲ ಬಿರಾದಾರ್ ತಮಗಿಂತ ಭ್ರಷ್ಟರಾಗಿರುವ ಕೆಲ ರಾಜಕಾರಣಿಗಳಿಗೆ ಬೆಣ್ಣೆ ತಿಕ್ಕಿ, ಡಿಡಿಪಿಐ ಆಗಿ ಕೊಪ್ಪಳಕ್ಕೆ ಒಕ್ಕರಿಸಿಕೊಂಡಿದ್ದರು.
ಶಿಕ್ಷಕರ ನಿಯೋಜನೆ ನಾಟಕದಲ್ಲಿಯೇ ಬಿರಾದಾರ್ ಸಾಕಷ್ಟು ದುಡ್ಡು ಮಾಡಿದ್ದರು. ಎಂಬ ಆರೋಪ ಕೇಳಿ ಬಂದಿದ್ದು. ಇನ್ನು ಇವರ ಅವಧಿಯಲ್ಲಿ ನಡೆದ ಕಟ್ಟಡ ನಿರ್ಮಾಣ, ಸಾಮಾಗ್ರಿಗಳ ಖರೀದಿ, ಸ್ಮಾರ್ಟ್ ಕ್ಲಾಸ್ ಹಗರಣಗಳು ಅವರನ್ನು ಇನ್ನಷ್ಟು ಶ್ರೀಮಂತರಾಗಿಸಿರುವುದರಲ್ಲಿ ಅನುಮಾನವಿಲ್ಲ. ಸಂಶಯ ವ್ಯಕ್ತವಾಗಿದೆ.
More Stories
ಗದಗ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭರತ್ ಎಸ್. ಎತ್ತಂಗಡಿ
ಒಳಮೀಸಲಾತಿ ಜಾರಿಗೆ ಆಗ್ರಹ: ಜಗದೀಶ್ ತೊಂಡಿಹಾಳ ರಾಜ್ಯಾಧ್ಯಕ್ಷರು ಬಹುಜನ ದಲಿತ ಸೇನೆ ಕರ್ನಾಟಕ
ಸಂಜೆಯೊಳಗೆ ಮಹೇಶ್ ಶೆಟ್ಟಿ ತಿಮರೋಡಿ ಅರೆಸ್ಟ್ ಮಾಡಲು ಪರಮೇಶ್ವರ್ ಸೂಚನೆ