ಕ್ರೀಡೆಯ ಜೊತೆಗೆ ಕುಟಂಬಕ್ಕು ಬೆಳಕಾಗಿ : ಕೊಡತಗೇರಿ
ಕೊಡತಗೇರಿ ಎಕ್ಸಪ್ರೆಸ್ ಸುದ್ದಿ
ಗಜೇಂದ್ರಗಡ : ಕಬಡ್ಡಿ ಕ್ರೀಡೆ ಅತ್ಯಂತ ಗಟ್ಟಿಯಾದ ಕ್ರೀಡೆಯಾಗಿದ್ದು ಈ ಕ್ರೀಡೆಗೆ ತನ್ನದೆಯಾದ ಇತಿಹಾಸವಿದೆ , ಗ್ರಾಮೀಣ ಭಾಗದಲ್ಲಿ ಅನೇಕ ಕ್ರೀಡಾ ಪಟುಗಳು ಕ್ರೀಡೆಯತ್ತ ಒಲವು ತೋರಿಸುವದು ಹೆಮ್ಮೆಯ ವಿಷಯ ಹಾಗೆ ಕ್ರೀಡೆಯ ಜೊತಗೆ ಓದಿನತ್ತ ಒಲವು ತೊರಿಸಬೇಕು ಮತ್ತು ದುಡಿಮೆಯತ್ತ ನ ಹರಿಸಿ ತಮ್ಮನ್ನು ನಂಬಿದ ಕುಟಂಬಕ್ಕೆ ಕ್ರೀಡಾಪಟಗಳು ಬೆಳಕಾಗಬೇಕು ಎಂದು ಕರವೇ ಯುವಸೈನ್ಯ ರಾಜ್ಯಾಧ್ಯಕ್ಷ ಕೆ.ಎಸ್ ಕೊಡತಗೇರಿ ಹೇಳಿದರು .ಅವರು ಸಮೀಪದ ಗೋಗೇರಿ ಗ್ರಾಮದಲ್ಲಿ ದೀಪಾವಳಿ ಹಬ್ಬದ ಅಂಗವಾಗಿ ಏರ್ಪಡಿಸಿದ್ದ ಕಬಡ್ಡಿ ಪಂದ್ಯಾವಳಿಯನ್ನು ಉದ್ಘಾಟಿಸಿ ಮಾತನಾಡಿದ ಅವರು ಕ್ರೀಡೆಯಲ್ಲಿ ಸೋಲು ಗೆಲವು ಸಾಮನ್ಯ ಕ್ರೀಡಾಪಟು ಗಳು ಸೋಲು ಗೇಲವನ್ನು ಸಮಾನವಾಗಿ ಸ್ವೀಕರಿಸಿ ಎಂದು ಹೇಳಿದರು ನಂತರ ಮಲ್ಲಿಕಾರ್ಜುನ ಗಾರಗಿ ಮಾತನಾಡಿದರು ಕಾಂಗ್ರೆಸ್ ಮುಖಂಡ ಮುತ್ತಣ್ಣ ಲ್ಯಾವಕ್ಕಿ, ಗ್ರಾಮ ಪಂಚಾಯತಿ ಸದಸ್ಯರಾದ
ಇಮಾಮಸಾಬ ಬಾಗವಾನ,ಕಟ್ಟೆಪ್ಪ ಮಾದರ, ರಾಜು.ಗಾರಗಿ, ಸಂಭಾಜಿ ಭೋಸಲೆ ಮುತ್ತು ಯಗರಿ.ಶೇಖಪ್ಪ ಭೋಸಲೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
More Stories