ಮೈಸೂರು ದಸರಾದಲ್ಲಿ ಗೋಗೇರಿಯ ಕವಿ ಬಾಗವಾನರವರಿಂದ ಕವನ ವಾಚನ
KODATAGERI EXPRESS NEWS
ಮೈಸೂರ : ನಾಡಿನ ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಗಜೇಂದ್ರಗಡ ತಾಲ್ಲೂಕಿನ ಗೋಗೇರಿ ಗ್ರಾಮದ ಅಪ್ಪಟ ಗ್ರಾಮೀಣ ಪ್ರತಿಭೆ ಆರ್.ಕೆ.ಬಾಗವಾನರಿಗೆ ಒಲಿದು ಬಂದ ಕವಿಗೋಷ್ಠಿ ವೇದಿಕೆ ತಾಲ್ಲೂಕಿನ ಜನತೆಗೆ ಗೋಗೇರಿ ಗ್ರಾಮದ ಜನರಿಗೆ ಖುಷಿ ತಂದಿದೆ ಇಂತಹ ಪ್ರತಿಭೆಯನ್ನು ಗುರುತಿಸಿ ಅವಕಾಶ ದೊರೆತಿರುವುದು ತಾಲ್ಲೂಕಿನ ಮೆರುಗು ಹೆಚ್ಚಿದಂತಾಗಿದೆ .
ಗಜೇಂದ್ರಗಡ ತಾಲ್ಲೂಕಿನ ಗೋಗೇರಿ ಗ್ರಾಮದ ಆರ್.ಕೆ.ಬಾಗವಾನರವರು ಪ್ರಸ್ತುತ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ, ಮಾನಸ ಗಂಗೋತ್ರಿಯ, ರಾಣಿಬಾಹದ್ದೂರ್, ಸಭಾಂಗಣದಲ್ಲಿ ನಡೆದ ೨೦೨೩ ನೇ ಸಾಲಿನ ಮೈಸೂರು ದಸರಾ ಪ್ರಾದೇಶಿಕ ಕವಿಗೋಷ್ಠಿಯಲ್ಲಿ ಭಾಗವಹಿಸಿ ಅವರು ಅಪ್ಪನ ಕುರಿತ ಕವನ ವಾಚನ ಮಾಡಿದರು.
ಕಾಲೇಜು ಹಂತದಿಂದಲೇ ಕಥೆ, ಕವಿತೆ, ನಾಟಕ, ಚುಟುಕು, ಮುಂತಾದವುಗಳನ್ನು ಬರೆದು ನಾಟಕಗಳನ್ನು ನಿರ್ದೇಶಿಸುವದರ ಮೂಲಕ ಜನಮನಗಳಿಸಿದ್ದಾರೆ.
ಜಿಲ್ಲಾ, ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ಹಾಗೂ ನಾಡಿನ ಪ್ರಮುಖ ಸಮಾರಂಭಗಳಲ್ಲಿ ಭಾಗವಹಿಸಿ ಕವನ ವಾಚನ ಮಾಡಿದ್ದಾರೆ.
ಗೋಗೇರಿ ಗ್ರಾಮದ ಕವಿ ಆರ್ ಕೆ ಬಾಗವಾನ ವೇದಿಕೆಯಲ್ಲಿ ಎಸ್ ಜಿ ಸಿದ್ಧರಾಮಯ್ಯ, ಎಚ್ ಟಿ ಪೋತೆ, ಚ ಸರ್ವಮಂಗಳಾ ಉಪಸ್ಥಿತರಿದ್ದರು.
More Stories
ಸೆಕೆಂಡ್ ಹ್ಯಾಂಡ್ ಮೊಬೈಲ್ ಬಗ್ಗೆ ಎಚ್ಚರ!: ಬೆಂಗಳೂರಿನಲ್ಲಿ 6 ತಿಂಗಳಲ್ಲಿ 2,350 ಅಕೌಂಟ್ಗೆ ಕನ್ನ..!
ಶಾಲೆಗಾಗಿ ಪಡೆದ ಸಿಎ ಸೈಟ್‌ನಲ್ಲಿ ಧಮ್ ಬಿರಿಯಾನಿ ಹೋಟೆಲ್! ಛಲವಾದಿ ನಾರಾಯಣ ಸ್ವಾಮಿ ವಿರುದ್ಧ ಆರೋಪ
ಸ್ನೇಹಮಯಿ ಕೃಷ್ಣ ರೌಡಿಶೀಟರ್: ಸಿಎಂ ಕೇಸ್ ನಲ್ಲಿ ಅವರ ಕಡೆಯವರು 100 ಕೋಟಿ ಡೀಲ್ ಗೆ ಬಂದಿದ್ರು -ಎಂ.ಲಕ್ಷ್ಮಣ್