ಅಕ್ಟೋಬರ್ ತಿಂಗಳಿನಿಂದ 10 ಕೆಜಿ ಅಕ್ಕಿ ವಿತರಣೆ: K.H. ಮುನಿಯಪ್ಪ
ಬೆಂಗಳೂರು;ಮುಂದಿನ ತಿಂಗಳಿನಿಂದ 10 ಕೆಜಿ ಅಕ್ಕಿ ವಿತರಣೆ ಮಾಡಲಾಗುತ್ತದೆ ಎಂದು ಸಚಿವ ಕೆ ಹೆಚ್ ಮುನಿಯಪ್ಪ ಹೇಳಿದ್ದಾರೆ.ಈ ಸಂಬಂಧ ಮಾತನಾಡಿದ ಅವರು, ರಾಜ್ಯದಲ್ಲಿ ಅಕ್ಟೋಬರ್ (October)ತಿಂಗಳಿನಿಂದ ಅನ್ನಭಾಗ್ಯ ಯೋಜನೆಯಡಿ ಎಲ್ಲರಿಗೂ ತಲಾ 10 ಕೆ. ಜಿ. ಅಕ್ಕಿಯನ್ನು ವಿತರಣೆ(Distrubution) ಮಾಡಲಾಗುವುದು ಎಂದು ತಿಳಿಸಿದರು.ಬೆಂಗಳೂರಿನಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಈ ಸಂಬಂಧ ಟೆಂಡರ್(Tender) ಪ್ರಕ್ರಿಯೆ ನಡೆದಿದೆ.ಬರ ಪೀಡಿತ ತಾಲೂಕುಗಳಲ್ಲಿ ಹಣದ ಬದಲು ಅಕ್ಕಿಯನ್ನೇ ಕೊಡಲಾಗುವುದು ಎಂದರು. ಅನ್ನಭಾಗ್ಯ ಯೋಜನೆ ಅಡಿ ಯಲ್ಲಿ ಕಾಂಗ್ರೆಸ್ ಪಕ್ಷ 10 ಕೆಜಿ ಅಕ್ಕಿ ಕೊಡುವುದಾಗಿ ಘೋಷಣೆ ಮಾಡಿತ್ತು. ಆದರೆ ಈ ಗ್ಯಾರಂಟಿ(garranty) ಜಾರಿಗೆ ಅಕ್ಕಿಯ ಕೊರತೆ ಎದುರಾಗಿತ್ತು.ಅಕ್ಕಿ ಪೂರೈಕೆ ಮಾಡುವ ನಿಟ್ಟಿನಲ್ಲಿ ಬಿಪಿಎಲ್ ಅಗತ್ಯ ಅಕ್ಕಿಯನ್ನು ಕೇಂದ್ರ ಆಹಾರ ಕೆಲವೆಡೆ ನಿಗಮದಿಂದ ಖರೀದಿ ಮಾಡಲು ರಾಜ್ಯ ಸರ್ಕಾರ(Stategovernment) ಮುಂದಾಗಿದ್ದರೂ ನಿಗಮ ರಾಜ್ಯಕ್ಕೆ ಅಕ್ಕಿ ಪೂರೈಸಲು ನಿರಾಕರಿಸಿತ್ತು,2 ಬಿಪಿಎಲ್(BPL) ಕಾರ್ಡ್‌ಗಳ ತಿದ್ದುಪಡಿ ಮತ್ತು ಹೊಸದಾಗಿ ಹೆಸರು ಸೇರ್ಪಡೆಗೆ ಅವಕಾಶ ಮಾಡಿಕೊಡುವ – ಮೂಲಕ ಎಲ್ಲಾ ಅರ್ಹರಿಗೂ ಅನ್ನಭಾಗ್ಯ ಸೌಲಭ್ಯ ಒದಗಿಸಲಾಗುತ್ತಿದೆ ಎಂದು ಆಹಾರ ಸಚಿವರು ವಿವರಿಸಿದರು.
More Stories
ಸೆಕೆಂಡ್ ಹ್ಯಾಂಡ್ ಮೊಬೈಲ್ ಬಗ್ಗೆ ಎಚ್ಚರ!: ಬೆಂಗಳೂರಿನಲ್ಲಿ 6 ತಿಂಗಳಲ್ಲಿ 2,350 ಅಕೌಂಟ್ಗೆ ಕನ್ನ..!
ಶಾಲೆಗಾಗಿ ಪಡೆದ ಸಿಎ ಸೈಟ್‌ನಲ್ಲಿ ಧಮ್ ಬಿರಿಯಾನಿ ಹೋಟೆಲ್! ಛಲವಾದಿ ನಾರಾಯಣ ಸ್ವಾಮಿ ವಿರುದ್ಧ ಆರೋಪ
ಸ್ನೇಹಮಯಿ ಕೃಷ್ಣ ರೌಡಿಶೀಟರ್: ಸಿಎಂ ಕೇಸ್ ನಲ್ಲಿ ಅವರ ಕಡೆಯವರು 100 ಕೋಟಿ ಡೀಲ್ ಗೆ ಬಂದಿದ್ರು -ಎಂ.ಲಕ್ಷ್ಮಣ್