inಇಎಂಐ ಕಂತು ಮಿಸ್ ಆದರೆ ನರಕವೇ ಗತಿ: ಸಾಲಗಾರರ ಕಣ್ಣೀರ ಕಥೆ!
ಸಾಲದ ಕಂತು ಒಂದೇ ದಿನ ತಡವಾದರೂ ಸಾಲಗಾರರ ಬದುಕಿನಲ್ಲಿ ಶುರುವಾಗುವ ನರಕಯಾತನೆ
ದಿನಕ್ಕೆ ಮುನ್ನೂರು ಕರೆಗಳು ಹಾಗೂ ಬೆದರಿಕೆ ಹಾಕುವ ಭಾರತದ ಸಾಲ ವಸೂಲಾತಿ ವ್ಯವಸ್ಥೆ
ಐದು ಬ್ಯಾಂಕ್‌ಗಳಿಂದ ಸಾಲ ಪಡೆದು ಕಂಗಾಲಾಗಿ ಕೊನೆಗೆ ಶೇಕಡಾ 45ರಷ್ಟು ಮೊತ್ತಕ್ಕೆ ಸಾಲ ಇತ್ಯರ್ಥಪಡಿಸಿಕೊಂಡ ವಿಕ್ರಮ್
ಸಾಲ ವಸೂಲಾತಿ ವೇಳೆ ಬೆದರಿಕೆ ಹಾಗೂ ನಿಂದನೆ ಮಾಡುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಿರುವ ಆರ್ಬಿಐ ನಿಯಮಗಳು
Loan Recovery : ನಮ್ಮ ದೇಶದಲ್ಲಿ ಸಾಲದ ಕಂತು (EMI) ಒಂದೇ ಒಂದು ದಿನ ತಡವಾದರೆ ಸಾಕು, ಸಾಲಗಾರರ ನರಕ ಅಲ್ಲಿಂದಲೇ ಶುರುವಾಗುತ್ತದೆ. ಸಾಲ ಪಾವತಿಗೆ ಪ್ರತಿದಿನ ಬರುವ ನೂರಾರು ಕರೆಗಳು, ಅವಾಚ್ಯ ಶಬ್ದಗಳ ನಿಂದನೆ, ಬೆದರಿಕೆಗಳು ಹಾಗೂ ನೇರವಾಗಿ ಮನೆ ಅಥವಾ ಕಚೇರಿಗೆ ಬರುವ ರಿಕವರಿ ಏಜೆಂಟ್‌ಗಳ ಕಿರುಕುಳದಿಂದಾಗಿ ಸಾಲಗಾರರ ಬದುಕು ಅಕ್ಷರಶಃ ನರಕ ಸದೃಶವಾಗುತ್ತದೆ ಎಂಬುದಕ್ಕೆ ಭಾರತದಲ್ಲಿ ನಡೆಯುತ್ತಿರುವ ಈ ಆಘಾತಕಾರಿ ಸಾಲ ವಸೂಲಾತಿ ಹಗರಣಗಳೇ ನೇರ ಉದಾಹರಣೆಯಾಗಿವೆ. ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಗಳಿಂದ ಸಾಲ ಪಡೆದವರ ಬದುಕು ನಿತ್ಯವೂ ಮುಳ್ಳಿನ ಮೇಲಿನ ನಡಿಗೆಯಾಗಿದೆ ಎಂದು ಅತಿಶಯೋಕ್ತಿಯಲ್ಲ. ಐದು ಬೇರೆ ಬೇರೆ ಬ್ಯಾಂಕ್‌ಗಳಿಂದ ಒಟ್ಟು 8.3 ಲಕ್ಷ ರೂಪಾಯಿಗಳ ಸಾಲ ಪಡೆದಿದ್ದ ವಿಕ್ರಮ್, ಸಮಯಕ್ಕೆ ಸರಿಯಾಗಿ ಇಎಂಐ (EMI) ಪಾವತಿಸಲು ಸಾಧ್ಯವಾಗದೆ ಅಸಹಾಯಕರಾದರು. ಅಲ್ಲಿಂದಲೇ ಅವರಿಗೆ ಅಸಲಿ ನರಕ ದರ್ಶನ ಶುರುವಾಯಿತು. ಏಕೆಂದರೆ, ಸಾಲ ನೀಡಿದ ವಿವಿಧ ಸಂಸ್ಥೆಗಳಿಂದ ನಿರಂತರ ಕಿರುಕುಳ ಮತ್ತು ಮಾನಸಿಕ ಹಿಂಸೆ ಎದುರಿಸುವಂತಾಯಿತು. ಒಂದು ಬ್ಯಾಂಕ್‌ನ ಫೋನ್ ಕಾಲ್ ಮುಗಿಯುತ್ತಿದ್ದಂತೆ ಮತ್ತೊಂದು ಬ್ಯಾಂಕ್‌ನವರು ಸಂಪರ್ಕಿಸಿ, ಹಣವನ್ನು ಯಾವಾಗ ಮತ್ತು ಎಷ್ಟು ಪಾವತಿಸುತ್ತೀರಿ ಎಂದು ತರಾಟೆಗೆ ತೆಗೆದುಕೊಂಡರು. ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದ ಈ ಒತ್ತಡವನ್ನು ಎದುರಿಸಲಾಗದೆ ಕಂಗಾಲಾದ ವಿಕ್ರಮ್, ಸಾಲ ಮತ್ತು ಸಾಲ ತೀರುವಳಿ ಸಂಸ್ಥೆಯಾದ ‘ಎಕ್ಸ್‌ಪರ್ಟ್ ಪ್ಯಾನೆಲ್’ ನೆರವಿನೊಂದಿಗೆ ಸುಮಾರು ಆರು ತಿಂಗಳ ಮಾತುಕತೆಯ ಬಳಿಕ ಒಟ್ಟು ಸಾಲದ ಶೇ. 45ರಷ್ಟು ಮೊತ್ತಕ್ಕೆ ಅದನ್ನು ಇತ್ಯರ್ಥಪಡಿಸಿಕೊಳ್ಳುವಲ್ಲಿ ಯಶಸ್ವಿಯಾದರು.
ಈ ರೀತಿಯ ಕಥೆಗಳು ಭಾರತದಲ್ಲಿ ಸಾಲ ವಸೂಲಾತಿಯ ಕರಾಳ ಮುಖವನ್ನು ಬಿಚ್ಚಿಡುತ್ತವೆ. ಬ್ಯಾಂಕ್‌ಗಳು ಅಥವಾ ಸಾಲ ನೀಡುವ ಸಂಸ್ಥೆಗಳು ಬಾಕಿ ಪಾವತಿಗಳನ್ನು ವಸೂಲಿ ಮಾಡಲು ಮೂರನೇ ವ್ಯಕ್ತಿಯ ಏಜೆನ್ಸಿಗಳನ್ನು ಅಥವಾ ರಿಕವರಿ ಏಜೆಂಟ್‌ಗಳನ್ನು ನೇಮಿಸಿಕೊಳ್ಳುತ್ತವೆ. ಆದರೆ, ಕೆಲವೊಮ್ಮೆ ಈ ವಸೂಲಾತಿ ಪ್ರಕ್ರಿಯೆಯು ಎಲ್ಲ ಮಿತಿಗಳನ್ನು ಮೀರಿ ಸಾಲಗಾರರಿಗೆ ಮಾನಸಿಕವಾಗಿ ತೀವ್ರ ಹಿಂಸೆ ನೀಡುವ ಅತಿರೇಕದ ಹಂತಕ್ಕೆ ತಲುಪುತ್ತದೆ.
ಇಂಡಿಯಾ ಟುಡೆ ಡಿಜಿಟಲ್ ಜೊತೆ ತಮ್ಮ ಅನುಭವಗಳನ್ನು ಹಂಚಿಕೊಂಡಿರುವ ಇತರ ಸಾಲಗಾರರ ಅನುಭವಗಳೂ ಕೂಡ ಆತಂಕಕಾರಿಯಾಗಿದೆ. ಕೆಲವರು ದಿನಕ್ಕೆ ಬರೋಬ್ಬರಿ 300ಕ್ಕೂ ಹೆಚ್ಚು ಕರೆಗಳನ್ನು ಸ್ವೀಕರಿಸುತ್ತಿದ್ದರೆ, ಇನ್ನು ಕೆಲವರು ಕೆಲಸ ಕಳೆದುಕೊಂಡರೂ ಹಗಲು-ರಾತ್ರಿ ಎನ್ನದೆ ನಿರಂತರ ಸಂದೇಶಗಳು ಮತ್ತು ಬೆದರಿಕೆಗಳ ಸುಳಿಗೆ ಸಿಲುಕಿ ನರಳುತ್ತಿದ್ದಾರೆ. ಅಷ್ಟೇ ಅಲ್ಲದೆ, ವಸೂಲಾತಿ ಏಜೆಂಟರು ಸಾಲಗಾರರ ತಳಮಳವನ್ನು ಲೆಕ್ಕಿಸದೆ ಅವರ ವೃದ್ಧ ಪೋಷಕರು, ಸಂಬಂಧಿಕರು ಹಾಗೂ ಮೇಲಧಿಕಾರಿಗಳನ್ನು ಸಹ ಸಂಪರ್ಕಿಸಿ ಮುಜುಗರ ಉಂಟುಮಾಡುತ್ತಿದ್ದಾರೆ. ಕೆಲವು ಪ್ರಕರಣಗಳಲ್ಲಿ ರಿಕವರಿ ಏಜೆಂಟರು ನೇರವಾಗಿ ಸಾಲಗಾರರ ಮನೆಗಳು ಮತ್ತು ಆಫೀಸ್ಗಳಿಗೆ ಭೇಟಿ ನೀಡಿ ಹೈಡ್ರಾಮ ಮಾಡುತ್ತಾರೆ. ನೆರೆಹೊರೆಯವರ ಮುಂದೆ ಕೂಗಾಡುವುದು ಮತ್ತು ಕುಟುಂಬದವರು ಮಾತ್ರ ಮನೆಯಲ್ಲಿದ್ದಾಗ ಬಂದು ಅವಾಚ್ಯ ಶಬ್ದಗಳಿಂದ ನಿಂದಿಸುವುದು ನಡೆದಿರುವುದಾಗಿ ವರದಿಯಾಗಿದೆ. ಸಾಲ ನಿರ್ವಹಣಾ ಸಂಸ್ಥೆಯ ದತ್ತಾಂಶದ ಪ್ರಕಾರ ಶೇ. 39ರಷ್ಟು ಪ್ರಕರಣಗಳಲ್ಲಿ ನಿರಂತರ ಕರೆಗಳು ಅಥವಾ ನಿಂದನೆಗಳು ನಡೆದಿದ್ದರೆ, ಶೇ. 28ರಷ್ಟು ಮಂದಿ ಬಹು ಬ್ಯಾಂಕ್‌ಗಳಿಂದ ಪದೇ ಪದೇ ಸಂಪರ್ಕಿಸುವುದರಿಂದ ತೊಂದರೆ ಅನುಭವಿಸಿದ್ದಾರೆ.
ಒಟ್ಟಾರೆಯಾಗಿ ಈ ಘಟನೆಗಳು ದೇಶದ ಎಲ್ಲಾ ಸಾಲಗಾರರ ಒಟ್ಟಾರೆ ಚಿತ್ರಣವನ್ನು ಪ್ರತಿನಿಧಿಸದಿದ್ದರೂ ಸಹ, ಭಾರತದ ಸಾಲ ಮರುಪಾವತಿ ವ್ಯವಸ್ಥೆಯಲ್ಲಿ ಸಣ್ಣ ತಪ್ಪು ಸಂಭವಿಸಿದಾಗ ಅದು ಹೇಗೆ ಭೀಕರವಾದ ವಸೂಲಾತಿ ಹೋರಾಟವಾಗಿ ಮತ್ತು ಅಮಾನವೀಯ ಕಿರುಕುಳವಾಗಿ ಬದಲಾಗುತ್ತದೆ ಎಂಬುದಕ್ಕೆ ಸ್ಪಷ್ಟ ಕನ್ನಡಿಯಾಗಿದೆ.
ಆರ್ಬಿಐ ನಿಯಮ ಏನಿದೆ?
ಸಾಲ ವಸೂಲಾತಿ ವೇಳೆ ಬೆದರಿಕೆ ಹಾಕುವುದು, ನಿಂದಿಸುವುದು, ಸಾರ್ವಜನಿಕವಾಗಿ ಅವಮಾನಿಸುವುದು ಹಾಗೂ ನಿಗದಿತ ಸಮಯದ ಹೊರತಾಗಿ ಕರೆ ಮಾಡುವುದನ್ನು ಆರ್‌ಬಿಐ (RBI) ಕಟ್ಟುನಿಟ್ಟಾಗಿ ನಿಷೇಧಿಸಿದೆ. ಆದರೂ, ಲೋಬನ್ ರಿಕವರಿ ಏಜೆಂಟರ ಈ ಎಲ್ಲಾ ವರ್ತನೆಗಳಿಗೆ ಅಂತಿಮವಾಗಿ ಬ್ಯಾಂಕ್‌ಗಳೇ ನೇರ ಹೊಣೆಯಾಗಿರುತ್ತವೆ. ಉದ್ಯೋಗ ಕಳೆದುಕೊಂಡು ಇಎಂಐ ಕಟ್ಟಲಾಗದೆ ಕಷ್ಟದಲ್ಲಿರುವ ಸಾಲಗಾರರಿಗೆ ಈ ನಿಯಮಗಳ ಬಗ್ಗೆ ಸರಿಯಾದ ಅರಿವಿಲ್ಲದೆ, ಪದೇ ಪದೇ ಬರುವ ಕರೆಗಳು ಮತ್ತು ಏಜೆಂಟರ ಕಿರುಕುಳದಿಂದ ಕಂಗಾಲಾಗಿರುತ್ತಾರೆ. ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ಸಾಲಗಾರರಿಗೆ ನೆರವಾಗಲು ಸಾಲ ತೀರುವಳಿ ಸಂಸ್ಥೆಗಳು ಮುಂದೆಬಂದಿದ್ದು, ಮನೋಜ್ ಮತ್ತು ಸಂಜಯ್ ಎಂಬುವರಂತೆ ಹಲವರು ಈ ಸಂಸ್ಥೆಗಳ ಸಹಾಯದಿಂದ ತಮ್ಮ ಸಾಲಗಳನ್ನು ಹಂತ ಹಂತವಾಗಿ ಇತ್ಯರ್ಥಪಡಿಸಿಕೊಳ್ಳುತ್ತಿದ್ದಾರೆ. ಈ ಸಂಸ್ಥೆಗಳು ಬ್ಯಾಂಕ್‌ಗಳೊಂದಿಗೆ ನೇರವಾಗಿ ಮಾತನಾಡಿ ಸಾಲಗಾರರ ಮೇಲಿನ ಕರೆಗಳ ಒತ್ತಡವನ್ನು ಕಡಿಮೆ ಮಾಡುವುದಲ್ಲದೆ, ಇಲ್ಲಿಯವರೆಗೆ ದೇಶಾದ್ಯಂತ 35,000ಕ್ಕೂ ಹೆಚ್ಚು ಸಾಲಗಾರರಿಗೆ ಕೌನ್ಸಿಲಿಂಗ್ ನೀಡಿ, ಬರೋಬ್ಬರಿ 2,200 ಕೋಟಿ ರೂ. ಗೂ ಅಧಿಕ ಸಾಲವನ್ನು ಇತ್ಯರ್ಥಪಡಿಸಿ ನೆರವು ನೀಡಿವೆ,

More Stories
ಗೃಹಲಕ್ಷ್ಮಿ ಯೋಜನೆ ಹೊಸ ಮಾರ್ಗಸೂಚಿ: ಅರ್ಜಿ ಸಲ್ಲಿಕೆ 3 ಕಡೆ ಮಾತ್ರ ಅವಕಾಶ! ಏನೆಲ್ಲಾ ಬದಲಾವಣೆ? ಸೊಸೆ, ಮಗಳಿಗೆ ಅವಕಾಶ
*ಪ್ರಧಾನಿ ಮೋದಿ ಅವರ ದೀರ್ಘಾವಧಿ ಸೇವೆಗೆ : ಭಾಜಪ ಯಲಬುರ್ಗಾ ಮಂಡಲದ ವತಿಯಿಂದ ವಿಶೇಷ ಪೂಜೆ* ,,