ಶಾಸಕ ಜಿ.ಎಸ್. ಪಾಟೀಲ್ ಅವರಿಗೆ ಸಚಿವ ಸ್ಥಾನ ನೀಡಲು ಒತ್ತಾಯ: ಹುಲಿಗೆಮ್ಮ ದೇವಿ ಸನ್ನಿಧಿಯಲ್ಲಿ ವಿಶೇಷ ಪ್ರಾರ್ಥನೆ
ಕೊಡತಗೇರಿ ಎಕ್ಸಪ್ರೆಸ್ ಡಿಜಿಟಲ್ ಹೌಸ್
ಗದಗ: ರೋಣ ವಿಧಾನಸಭಾ ಕ್ಷೇತ್ರದ ಶಾಸಕರಾದ ಜಿ.ಎಸ್. ಪಾಟೀಲ್ ಅವರಿಗೆ ರಾಜ್ಯ ಸಚಿವ ಸಂಪುಟದಲ್ಲಿ ಸಚಿವ ಸ್ಥಾನ ನೀಡಬೇಕೆಂದು ಒತ್ತಾಯಿಸಿ, ತಾಲೂಕಿನ ನಾಗರಸಿಕೊಪ್ಪ ಗ್ರಾಮದ ಯುವಕರು ಮತ್ತು ಗ್ರಾಮಸ್ಥರು ಹುಲಿಗೆಮ್ಮ ದೇವಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಗದಗ ಜಿಲ್ಲಾ ಕಾಂಗ್ರೆಸ್ ಸಮಿತಿಯ ಕಾನೂನು ಘಟಕದ ಅಧ್ಯಕ್ಷರಾದ ಕೆ.ಎಸ್. ಕೊಡತಗೇರಿ ಅವರು, “ಜಿ.ಎಸ್. ಪಾಟೀಲ್ ಅವರು ಸುದೀರ್ಘ ರಾಜಕೀಯ ಅನುಭವ ಹೊಂದಿರುವ ಹಿರಿಯ ನಾಯಕರು. ಪಕ್ಷದ ಸಂಘಟನೆಗೆ ಮತ್ತು ರೋಣ ಕ್ಷೇತ್ರದ ಅಭಿವೃದ್ಧಿಗೆ ಅವರ ಕೊಡುಗೆ ಅಪಾರ. ಹೀಗಾಗಿ, ಮುಖ್ಯಮಂತ್ರಿಗಳು ಹಾಗೂ ಪಕ್ಷದ ವರಿಷ್ಠರು ಅವರಿಗೆ ಸಚಿವ ಸ್ಥಾನ ನೀಡುವ ಮೂಲಕ ಜಿಲ್ಲೆಯ ಅಭಿವೃದ್ಧಿಗೆ ಬಲ ತುಂಬಬೇಕು” ಎಂದು ಆಗ್ರಹಿಸಿದರು.
ಬಸವೇಶ್ವರ ದೇವಸ್ಥಾನದಿಂದ ಹುಲಿಗೆಮ್ಮ ದೇವಸ್ಥಾನದವರೆಗೆ ಪಾದಯಾತ್ರೆ ನಡೆಸಿದ ಕಾರ್ಯಕರ್ತರು, ತಮ್ಮ ನೆಚ್ಚಿನ ನಾಯಕರಿಗೆ ಮಂತ್ರಿಗಿರಿ ಸಿಗಲಿ ಎಂದು ದೇವಿಯಲ್ಲಿ ಬೇಡಿಕೊಂಡರು. ಜಿ.ಎಸ್. ಪಾಟೀಲ್ ಅವರು ಸಚಿವರಾದರೆ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ಸಿಗಲಿದೆ ಮತ್ತು ಜನಪರ ಕೆಲಸಗಳು ಮತ್ತಷ್ಟು ವೇಗ ಪಡೆಯಲಿವೆ ಎಂಬುದು ಸ್ಥಳೀಯರ ಆಶಯವಾಗಿದೆ.
ಈ ಕಾರ್ಯಕ್ರಮದಲ್ಲಿ ಬ್ಲಾಕ್ ಕಾಂಗ್ರೆಸ್‌ನ ಅಧ್ಯಕ್ಷರಾದ ಶರಣಪ್ಪ ಬೇಟಗೇರಿ ಮುತ್ತಣ್ಣ ಲ್ಯಾವಕ್ಕಿ ಮಲ್ಲಿಕಾರ್ಜುನ ಗಾರಗಿ,ಡಾ ಮುತ್ತು ಗುಜ್ಜಲರ, ಶರಣು ಸೊಬರದ, ಹೇಮಾವತಿ ಭೋಸಲೆ, ಹನುಮಂತಪ್ಪ ಹೊರಪೇಟಿ,ಸೇರಿದಂತೆ, ಗ್ರಾಮದ ಹಿರಿಯರು ಹಾಗೂ ನೂರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಉಪಸ್ಥಿತರಿದ್ದರು

More Stories
ಜಕ್ಕಲಿಯಲ್ಲಿ ಅಂದಾನಪ್ಪ ದೊಡ್ಡಮೇಟಿ ಸ್ಮಾರಕ ಭವನ ನಿರ್ಮಾಣ: ಜುಲೈ 5ರಂದು ಶಾಸಕ ಜಿ.ಎಸ್. ಪಾಟೀಲರಿಂದ ಭೂಮಿ ಪೂಜೆ
ಗಜೇಂದ್ರಗಡ-ರೋಣ ಭಾಗದಲ್ಲಿ ಪವನ ವಿದ್ಯುತ್ ಯಂತ್ರಗಳ ಹಾವಳಿ: ಕಂಗೆಟ್ಟ ರೈತರು, ಆತಂಕದಲ್ಲಿ ಜನಸಾಮಾನ್ಯರು
ಮಹಿಳೆಯನ್ನು ಸುಟ್ಟ ಕೊಂದ ಆರೋಪಿ ಅಂದರ್